2026-06-08 01:27:03

A businessman gave his wife a surprise gift on Babyshower | ಸೀಮಂತಕ್ಕೆ ಹೆಲಿಕಾಪ್ಟರ್‌ನಿಂದ ಹೂಮಳೆ: ಪತ್ನಿಗೆ ಅಚ್ಚರಿ ಉಡುಗೊರೆ ನೀಡಿದ ಉದ್ಯಮಿ | Speed News Kannada

A businessman gave his wife a surprise gift on Babyshower | ಸೀಮಂತಕ್ಕೆ ಹೆಲಿಕಾಪ್ಟರ್‌ನಿಂದ ಹೂಮಳೆ: ಪತ್ನಿಗೆ ಅಚ್ಚರಿ ಉಡುಗೊರೆ ನೀಡಿದ ಉದ್ಯಮಿ | Speed News Kannada

 ಮಂಗಳೂರು: ಇಲ್ಲೊಬ್ಬರು ಉದ್ಯಮಿ ತನ್ನ ಪತ್ನಿ ಸೀಮಂತ ಕಾರ್ಯಕ್ರಮದ ಸಂದರ್ಭದಲ್ಲಿ ಆಕೆಯ ಮೇಲೆ ಹೆಲಿಕಾಪ್ಟರ್‌ನಿಂದ ಹೂಮಳೆಗೆರೆಯುವ ಮೂಲಕ ವಿಶೇಷ ಉಡುಗೊರೆ ನೀಡಿದರು. ನಗರದ ಹೊರವಲಯದ 'ಅಡ್ಯಾರ್ ಗಾರ್ಡನ್'ನಲ್ಲಿ ಉದ್ಯಮಿ ಪ್ರಕಾಶ್ ಕುಂಪಲ ಅವರ ಪತ್ನಿ ಅರ್ಪಿತಾ ಅವರ ಸೀಮಂತ ಸಮಾರಂಭ ಗುರುವಾರ ಏರ್ಪಡಾಗಿತ್ತು. ಈ ಸಮಾರಂಭಕ್ಕೆ ಬಂದವರಿಗೆಲ್ಲ ಅಚ್ಚರಿ ಕಾದಿತ್ತು. ಸೀಮಂತದ ಶಾಸ್ತ್ರಗಳು ನಡೆದ ಬಳಿಕ ಆಗಸದಲ್ಲಿ ದಿಢೀರ್ ಹೆಲಿಕಾಪ್ಟರ್ ಕಾಣಿಸಿಕೊಂಡಿತು. ನೋಡುತ್ತಿದ್ದಂತೆಯೇ ಆ ಹೆಲಿಕಾಪ್ಟರ್‌ನಿಂದ ಅರ್ಪಿತಾ ಅವರ ಮೇಲೆ ಹೂಮಳೆ ಸುರಿಸಲಾಯಿತು.
'ಅರ್ಪಿತಾ ಅವರಿಗಾಗಲೀ ಬಂಧುಗಳಿಗಾಗಲಿ ಈ ವಿಚಾರ ಮೊದಲು ಗೊತ್ತೇ ಇರಲಿಲ್ಲ. ಪತಿ ನೀಡಿದ ಅಚ್ಚರಿಯ ಉಡುಗೊರೆಯಿಂದ ಅರ್ಪಿತಾ ಮಾತ್ರವಲ್ಲ ಸಮಾರಂಭಕ್ಕೆ ಬಂದವರೂ ಸಂಭ್ರಮಪಟ್ಟರು' ಎಂದು ಪ್ರಕಾಶ್ ಕುಂಪಲ ಅವರ ಬಂಧುವೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಕಾಶ್ ಕುಂಪಲ ಅವರು ಅರ್ಪಿತಾ ಅವರನ್ನು 2019ರಲ್ಲಿ ಮದುವೆಯಾಗಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.