ಟಾಲಿವುಡ್ ಸ್ಮಾರ್ ಸೆಲೆಬ್ರಿಟಿಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹದ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿ ಮದುವೆಯಾಗಲಿದೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾ ಹಾಗೂ ಸಿನಿ ವೃತ್ತಗಳಲ್ಲಿ ವೇಗವಾಗಿ ಹರಡುತ್ತಿವೆ.ಕುರಿತ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಇಂಡಸ್ಟ್ರಿ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಈಗ ಇದೇ ವಿಚಾರಕ್ಕೆ ಮತ್ತೊಂದು ಹೈ-ವೋಲ್ವೇಜ್ ಅಪ್‌ಡೇಟ್ ಸೇರ್ಪಡೆಯಾಗಿದೆ. ಮೂಲಗಳ ಪ್ರಕಾರ, ವಿಜಯ್ ದೇವರಕೊಂಡ ಅವರ ವಿವಾಹ ಕಾರ್ಯಕ್ರಮದ ವೀಡಿಯೊ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಪ್ರಮುಖ ಅಂತಾರಾಷ್ಟ್ರೀಯ ಒಟಿಟಿ ಕಂಪನಿಯೊಂದು ಭಾರಿ ಮೊತ್ತದ ಆಫರ್ ನೀಡಿತ್ತು ಎನ್ನಲಾಗಿದೆ. ಈ ಡೀಲ್ ಇಂಡಸ್ಟ್ರಿಯಲ್ಲಿ 'ಗೇಮ್ ಚೇಂಜರ್' ಆಗುವ ಮಟ್ಟಿಗೆ ದೊಡ್ಡದಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಮೂಲಗಳ ಮಾಹಿತಿ ಪ್ರಕಾರ, ಸುಮಾರು 60 ಕೋಟಿ ರೂಪಾಯಿ ಮೊತ್ತ ನೀಡಿ ಈ ಡೀಲ್ ಪಡೆಯಲು ನೆಟ್‌ಪ್ಲಿಕ್ಸ್ ಪ್ರಯತ್ನ ನಡೆಸಿತ್ತು ಎನ್ನಲಾಗಿದೆ. ಆದರೆ, ವಿವಾಹವು ಸಂಪೂರ್ಣವಾಗಿ ಖಾಸಗಿ ವಿಷಯವಾಗಿದ್ದು ಅದನ್ನು ಸಾರ್ವಜನಿಕ ಪ್ರದರ್ಶನ ಬೇಡ ಎಂದು ವಿಜಯ್ ದೇವರಕೊಂಡ ತಿಳಿಸಿದ್ದಾರೆ.ಒಟಿಟಿಗೆ ವಿವಾಹ ಹಕ್ಕುಗಳನ್ನು ನೀಡಿದರೆ ಅನಿವಾರ್ಯವಾಗಿ ಹಲವು ಷರತ್ತುಗಳು ಜಾರಿಯಾಗುತ್ತವೆ, ಇದರಿಂದ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ಅಸೌಕರ್ಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ಅವರ ಆತಂಕ. ಇದೇ ಕಾರಣಕ್ಕೆ ಈ ಭಾರಿ ಮೊತ್ತದ ಆಫರ್‌ನ್ನು ದಂಪತಿ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನಶ್ ಶಿವನ್ ಅವರ ವಿವಾಹ ವೀಡಿಯೊದ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್ ಫಿಕ್ಸ್ ಖರೀದಿಸಿತ್ತು. ನಂತರ ಅದನ್ನು ಸಾಕ್ಷ್ಯಚಿತ್ರವಾಗಿ ಬಿಡುಗಡೆ ಮಾಡುವ ಯತ್ನ ನಡೆದರೂ, ಹಲವು ಕಾನೂನು ಸಮಸ್ಯೆಗಳು ಎದುರಾದವು. ಈ ಕಾರಣದಿಂದ ಆ ಡಾಕ್ಯುಮೆಂಟರಿ ಬಿಡುಗಡೆ ಆಗಲು ಬಹಳ ಸಮಯ ತೆಗೆದುಕೊಂಡಿತ್ತು.ಈ ಅನುಭವವನ್ನು ಗಮನದಲ್ಲಿಟ್ಟುಕೊಂಡೇ, ಇಂತಹ ಕಾನೂನು ಗೊಂದಲಗಳು ಮತ್ತೆ ಎದುರಾಗಬಾರದೆಂಬ ಕಾರಣಕ್ಕೆ ಈಗಿನ ದಂಪತಿಗಳು ಹೆಚ್ಚು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಿವಾಹವನ್ನು ಖಾಸಗಿಯಾಗಿ ನಡೆಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸದ್ಯ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ವಿವಾಹದ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲವಾದರೂ, ಈ ಸುದ್ದಿ ಈಗಾಗಲೇ ಸಿನಿ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಮುಂದಿನ ದಿನಗಳಲ್ಲಿ ಈ ಸ್ಟಾರ್ ಜೋಡಿಯಿಂದ ಅಧಿಕೃತ ಸ್ಪಷ್ಟನೆ ಹೊರಬೀಳುತ್ತದೆಯೇ ಎಂಬುದೇ ಈಗ ಎಲ್ಲರ ಕುತೂಹಲ.