2026-03-07 02:11:53

6 US soldiers killed in Iranian drone attack | ಕುವೈತ್‌ ಇರಾನ್ ಡ್ರೋನ್‌ ದಾಳಿಯಲ್ಲಿ ಅಮೆರಿಕದ 6 ಸೈನಿಕರು ಸಾವು | Speed News Kannada

6 US soldiers killed in Iranian drone attack | ಕುವೈತ್‌ ಇರಾನ್ ಡ್ರೋನ್‌ ದಾಳಿಯಲ್ಲಿ ಅಮೆರಿಕದ 6 ಸೈನಿಕರು ಸಾವು | Speed News Kannada

ವಾಷಿಂಗ್ಟನ್: ಕುವೈತ್‌ನ 'ಟ್ಯಾಕ್ಟಿಕಲ್ ಆಪರೇಷನ್ ಸೆಂಟರ್' ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ಅಮೆರಿಕದ ಆರು ಸೈನಿಕರು ಮೃತಪಟ್ಟಿದ್ದಾರೆ.  ಅಮೆರಿಕವೂ ಈ ವಿಷಯವನ್ನು ಖಚಿತಪಡಿಸಿದೆ. ಈ ಮಧ್ಯೆ ಅಮೆರಿಕ ಸೇನೆಯ ಸುರಕ್ಷತಾ ಮುನ್ನೆಚ್ಚರಿಕೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಟ್ಯಾಕ್ಟಿಕಲ್ ಆಪರೇಷನ್ ಸೆಂಟರ್' ಶುಐಬಾ ಬಂದರಿನ ಕೇಂದ್ರಭಾಗದಲ್ಲಿದ್ದು, ಅಮೆರಿಕದ ಮುಖ್ಯ ಸೇನಾ ನೆಲೆ 'ಕ್ಯಾಂಪ್ ಅರಿಫ್ಜಾನ್'ನಿಂದ ಹಲವು ಮೈಲಿ ದೂರದಲ್ಲಿದೆ ಎಂದು ವರದಿಯಾಗಿದೆ.
ಇಸ್ರೇಲ್ -ಅಮೆರಿಕ ಜೋಡಿ ಇರಾನ್ ಮೇಲೆ ದಾಳಿ ಆರಂಭಿಸಿದ ನಂತರ ಕುವೈತ್, ಬಹ್ರೇನ್‌, ಯುಎಇ ಮತ್ತು ಸೌದಿ ಅರೇಬಿಯಾದಲ್ಲಿ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್‌ ಪ್ರತಿದಾಳಿ ನಡೆಸುತ್ತಿದೆ. 
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು,  ಸಾವು-ನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಬಂದ ಕ್ಷಿಪಣಿಯಿಂದ ‘ಟ್ಯಾಕ್ಟಿಕಲ್ ಆಪರೇಷನ್ ಸೆಂಟರ್‌ನಲ್ಲಿದ್ದ ಆರು ಸೈನಿಕರು ಹತರಾಗಿದ್ದಾರೆ’ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.