2026-06-08 01:30:53

6 children including five girls die after drowning in a well while bathing | ಬಿಹಾರ ಸ್ನಾನ ಮಾಡುವಾಗ ಹೊಂಡದಲ್ಲಿ ಮುಳುಗಿ ಐದು ಬಾಲಕಿಯರು ಸೇರಿ 6 ಮಕ್ಕಳು ಸಾವು | Speed News Kannada

6 children including five girls die after drowning in a well while bathing | ಬಿಹಾರ ಸ್ನಾನ ಮಾಡುವಾಗ ಹೊಂಡದಲ್ಲಿ ಮುಳುಗಿ ಐದು ಬಾಲಕಿಯರು ಸೇರಿ 6 ಮಕ್ಕಳು ಸಾವು | Speed News Kannada

ಮೋತಿಹಾರಿ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನೀರು ತುಂಬಿದ ಹೊಂಡದಲ್ಲಿ ಸ್ನಾನ ಮಾಡುವಾಗ ಐದು ಹುಡುಗಿಯರು ಸೇರಿದಂತೆ ಆರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಕೇಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಲೋಹರ್ಗವ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ.
ಮೃತರನ್ನು ದೀಕ್ಷಾ ಕುಮಾರಿ(12), ಸೋನಾಕ್ಷಿ ಕುಮಾರಿ(9), ಪ್ರಿಯಾ ಕುಮಾರಿ(7), ಆರ್ಯಾಧ್ಯ ಕುಮಾರಿ(11), ಚೋಟಿ ಕುಮಾರಿ(8), ಮತ್ತು ಪ್ರಿನ್ಸ್ ಕುಮಾರ್(11) ಎಂದು ಗುರುತಿಸಲಾಗಿದೆ.
"ಗ್ರಾಮಸ್ಥರ ಪ್ರಕಾರ, ಹುಡುಗಿಯರಲ್ಲಿ ಒಬ್ಬರು ಸ್ನಾನ ಮಾಡಲು ಹೊಂಡಕ್ಕೆ ಇಳಿದಿದ್ದು, ಮುಳುಗಲು ಪ್ರಾರಂಭಿಸಿದ ನಂತರ ಅವಳನ್ನು ಉಳಿಸಲು ಹೋಗಿ ಇತರರು ಸಹ ನೀರಿಗೆ ಜಾರಿಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ" ಎಂದು ಕೇಸರಿಯಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ರಾಹುಲ್ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಜಿಲ್ಲಾ ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ" ಎಂದು ಕುಮಾರ್ ಹೇಳಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.