2026-03-07 04:35:47

40 years of Relationship will not be Broken | 40 ವರ್ಷಗಳ ಸಂಬಂಧ ಮುರಿಯೋದಿಲ್ಲ ಗೋವಿಂದ ಬದಲಾದರೆ ಕ್ಷಮಿಸುತ್ತೇನೆ ಸುನೀತಾ ಅಹುಜಾ | Speed News Kannada

40 years of Relationship will not be Broken | 40 ವರ್ಷಗಳ ಸಂಬಂಧ ಮುರಿಯೋದಿಲ್ಲ ಗೋವಿಂದ ಬದಲಾದರೆ ಕ್ಷಮಿಸುತ್ತೇನೆ ಸುನೀತಾ ಅಹುಜಾ | Speed News Kannada

ಬಾಲಿವುಡ್ ನಟ ಗೋವಿಂದ ಮತ್ತು ಸುನೀತಾ ಅಹುಜಾ ಅವರ ವೈವಾಹಿಕ ಜೀವನದ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಚರ್ಚೆಗಳು ಜೋರಾಗಿವೆ. ಗೋವಿಂದ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪವನ್ನು ಸುನೀತಾ ಸಾರ್ವಜನಿಕವಾಗಿ ಮಾಡಿದ್ದರು. ಆದರೆ ಆ ಆರೋಪಗಳನ್ನು ಗೋವಿಂದ ಸಂಪೂರ್ಣವಾಗಿ ನಿರಾಕರಿಸಿದ್ದರು.ಇದೀಗ ಸುನೀತಾ ಮತ್ತೊಮ್ಮೆ ವ್ಯಾಗ್ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದು, ಹಲವು ಸ್ಪಷ್ಟ ಹೇಳಿಕೆಗಳನ್ನು ನೀಡಿದ್ದಾರೆ. "ನನ್ನ ಮುಗ್ಧತೆಯ ಲಾಭವನ್ನು ಅನೇಕರು ಪಡೆದುಕೊಂಡಿದ್ದಾರೆ. ನಾನು ಬಹಳಷ್ಟು ಸಹಿಸಿಕೊಂಡಿದ್ದೇನೆ. ಆದರೆ ಇನ್ನು ಮುಂದೆ ಸಹಿಸುವುದಿಲ್ಲ. ನಾನು ಈಗ ನನ್ನದೇ ಆದ ಐಡೆಂಟಿಟಿ ಮಾಡಿಕೊಂಡಿದ್ದೇನೆ. 40 ವರ್ಷಗಳ ಸಂಬಂಧ ರಾತ್ರೋರಾತ್ರಿ ಮುರಿಯುವುದಿಲ್ಲ. ನಾನು ಭಾವನಾತ್ಮಕವಾಗಿರುವುದು ಸತ್ಯ, ಆದರೆ ಈಗ ನನ್ನ ಮನಸ್ಸು ಬಲವಾಗಿದೆ" ಎಂದು ಹೇಳಿದ್ದಾರೆ.
''ಪ್ರತಿ ಮಹಿಳೆಯೂ ತನ್ನ ಹಕ್ಕುಗಳಿಗಾಗಿ ಹೋರಾಡಬೇಕು. ಅತ್ತೆ-ಮಾವಂದಿರು ಇದ್ದಾಗ ಗೌರವದಿಂದ ಸುಮ್ಮನಿರುತ್ತಿದ್ದೆ. ಆದರೆ ಈಗ ಗೋವಿಂದ ಮತ್ತು ನಾನು ಸ್ನೇಹಿತರಾಗಿರುವಾಗ, ನಾನು ಯಾಕೆ ಭಯಪಟ್ಟು ಸುಮ್ಮನಿರಬೇಕು?" ಎಂದು ಪ್ರಶ್ನಿಸಿದ್ದಾರೆ.
ಇನ್ನೂ "ಗೋವಿಂದ ಬದಲಾದರೆ ಮತ್ತು ನನ್ನ ನಿಯಮಗಳ ಪ್ರಕಾರ ಬದುಕಲು ಆರಂಭಿಸಿದರೆ, ನಾನು ಅವನನ್ನು ಕ್ಷಮಿಸುತ್ತೇನೆ ಪ್ರತಿದಿನ ಸುದ್ದಿಗಳಲ್ಲಿ ಏನಿದೆ ಎಂದು ಗಮನ ಕೊಡಲು ನಾನು ಈ ವಯಸ್ಸಿನಲ್ಲಿ ಸಿದ್ಧಳಿಲ್ಲ. ಈ ಸಮಯದಲ್ಲಿ ಗಂಡ ಮತ್ತು ಮಕ್ಕಳ ಬೆಂಬಲ ಬೇಕು, ಒತ್ತಡವಲ್ಲ" ಎಂದು ಹೇಳಿದ್ದಾರೆ.ಗೋವಿಂದ ಈ ವಿಷಯದ ಬಗ್ಗೆ ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂಬ ಅಸಮಾಧಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ. "ಅವನು ನಗುತ್ತಾ ವಿಷಯ ತಪ್ಪಿಸುತ್ತಾನೆ. ಅವನ ಉತ್ತರಗಳು ಅರ್ಥವಾಗುವುದಿಲ್ಲ. ತಾಯಿಯ ಮರಣದ ನಂತರ ಅವನು ನಿರಾತಂಕನಾಗಿದ್ದಾನೆ. ಈಗ ಯಾರಿಗೂ ಹೆದರದೇ ವರ್ತಿಸುತ್ತಾನೆ" ಎಂದು ಸುನೀತಾ ಹೇಳಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.