2026-03-07 05:48:34

Young woman files gang rape complaint | ಹನಿಟ್ರ್ಯಾಪ್ ಕೇಸ್ ಯುವತಿಯಿಂದ ಸಾಮೂಹಿಕ ಅತ್ಯಾಚಾರ ದೂರು | Speed News Kannada

Young woman files gang rape complaint | ಹನಿಟ್ರ್ಯಾಪ್ ಕೇಸ್ ಯುವತಿಯಿಂದ ಸಾಮೂಹಿಕ ಅತ್ಯಾಚಾರ ದೂರು | Speed News Kannada

ಬೆಂಗಳೂರು, ಫೆಬ್ರವರಿ 23: ಹನಿಟ್ರ್ಯಾಪ್ ಕೇಸ್  ಆರೋಪಿತ ಯುವತಿ ತನ್ನ ಮೇಲೆ ಗ್ಯಾಂಗ್‌ರೇಪ್ ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪಾರ್ಟಿಯೊಂದಕ್ಕೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಸಂತ್ರಸ್ತೆ ದೂರಿದ್ದು, ಈ ಸಂಬಂಧ ನಿಖಿಲ್ ಮತ್ತು ಡಿಕ್ಸನ್ ಸಾಂಡ್ರಾ ಎಂಬ ಇಬ್ಬರ ವಿರುದ್ಧ ಫೆ.22ರಂದು ಎಫ್‌ಐಆರ್ ದಾಖಲಾಗಿದೆ.
ಇದಕ್ಕೂ ಮುನ್ನ ಒಂದು ದಿನ ಮೊದಲಷ್ಟೇ ಅಂದರೆ ಫೆ.21ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಯುವತಿ ವಿರುದ್ಧ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು.
ಯುವತಿ ಆರೋಪವೇನು?
2026ರ ಜನವರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಡಿಕ್ಸನ್ ಸಾಂಡ್ರಾ ಎಂಬಾತನ ಪರಿಚಯವಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರೂ ಹಲವು ಬಾರಿ ಭೇಟಿ ಆಗಿದ್ದವು. ಹೀಗಿರುವಾಗ ಫೆಬ್ರವರಿ 14ರಂದು ಕರೆ ಮಾಡಿದ್ದ ಡಿಕ್ಸನ್, ಜಕ್ಕೂರಿನಲ್ಲಿರುವ ವಿಲ್ಲಾವೊಂದಕ್ಕೆ ಪಾರ್ಟಿಗೆ ಬರುವಂತೆ ಕರೆದಿದ್ದ. ಹೀಗಾಗಿ ಗೆಳತಿಯ ಜೊತೆ ತಾನು ಮಧ್ಯರಾತ್ರಿ ಸುಮಾರು 1.15ಕ್ಕೆ ವಿಲ್ಲಾಗೆ ತೆರಳಿದ್ದು. ಈ ವೇಳೆ ಡಿಕ್ಸನ್ ಆತನ ಗೆಳೆಯ ಎಂದು ನಿಖಿಲ್ ಎಂಬಾತನನ್ನು ಪರಿಚಯಿಸಿದ್ದ. ಪಾರ್ಟಿ ನಡುವೆ ಡಿಕ್ಸನ್ ಮತ್ತು ನಿಖಿಲ್ ಸೇರಿ ಬಲವಂತವಾಗಿ ಮಾತ್ರೆಯನ್ನು ತಿನ್ನಿಸಿದ್ದಾರೆ. ಈ ವೇಳೆ ಕಣ್ಣುಗಳು ಮಂಜಾಗತೊಡಗಿದ್ದು, ಡಿಕ್ಸನ್ ರೂಮಿಗೆ ಕರೆದೊಯ್ದು ತನ್ನ ಮಲಗಿಸಿದ್ದ. ಆದಾದ ನಂತರ ನನಗೆ ಪ್ರಜ್ಞೆತಪ್ಪಿದೆ. ನನಗೆ ಎಚ್ಚರ ಆದಾಗ ನನ್ನ ದೇಹದ ಮೇಲೆ ಅರ್ಧಂಬರ್ಧ ಬಟ್ಟೆ ಇರುವುದರ ಜೊತೆಗೆ ಪಕ್ಕದಲ್ಲಿ ನಿಖಿಲ್ ಇರುವುದನ್ನು ಕಂಡು ಶಾಕ್ ಆಗಿದ್ದೇನೆ ಎಂದು ಯುವತಿ ಆರೋಪಿಸಿದ್ದಾಳೆ.ಮೊದಲೇ ಗಾಬರಿಗೊಂಡಿದ್ದ ತಾನು ಡಿಕ್ಸನ್ ಬಗ್ಗೆ ಕೇಳಿದಾಗ ಹೊರಗಿನಿಂದ ಬಂದ ಆತ ತನ್ನ ಬಟ್ಟೆಯನ್ನು ಕಿತ್ತೆಸೆದಿದ್ದು, ಇಬ್ಬರೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ವೇಳ ತಾನು ಜೋರಾಗಿ ಕಿರುಚಾಡಿದ ಪರಿಣಾಮ ನನ್ನನ್ನು ರೂಮ್‌ ನಲ್ಲಿ ಲಾಕ್ ಮಾಡಲಾಗಿತ್ತು. ಬಳಿಕ ಮರುದಿನ ಮಧ್ಯಾಹ್ನದ ವೇಳೆಗೆ ಆರೋಪಿಗಳು ರೂಮ್ ಬಾಗಿಲು ತೆರೆದಿದ್ದು, ರಾತ್ರಿ ನಡೆದ ವಿಚಾರವನ್ನು ಯಾರಿಗಾದರೂ ಅಥವಾ ಪೊಲೀಸರಿಗೆ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ನಿಖಿಲ್ ಬೆದರಿಕೆ ಹಾಕಿರೋದಾಗಿ ಯುವತಿ ಆರೋಪಿಸಿದ್ದಾಳೆ.
ಇನ್ನು ಫೆ.21ರಂದು ಇದೇ ಯುವತಿಯ ವಿರುದ್ಧ ನಿಖಿಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ನಿಖಿಲ್ ಮತ್ತು ಡಿಕ್ಸನ್ ತನಗೆ ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ನಡೆಸಿರೋದಾಗಿ ಯುವತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ. ಅದರ ಬೆನ್ನಲ್ಲೇ ಖಾಸಗಿ ವಾಹನಿಯ ಕೈಂ ಬ್ಯೂರೋ ಹೆಡ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವರ ಕರೆ ಬಂದಿದ್ದು, ನಾವು ಹೇಳಿದ ಜಾಗಕ್ಕೆ ನೀವು ಬರಬೇಕು. ಹೇಳಿದಷ್ಟು ಹಣ ಕೊಡಬೇಕು. ಇಲ್ಲದಿದ್ದರೆ ಈ ವಿಚಾರವನ್ನು ನ್ಯೂಸ್ ಚಾನೆಲ್‌ನಲ್ಲಿ ಹಾಕಿ ಮಾನ ತೆಗೆಯೋ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.