2026-03-07 06:44:36

You can beat your wife What is this new law | ಹೆಂಡತಿಯನ್ನು ಹೊಡೆಯಬಹುದು ಆದ್ರೆ ಮೂಳೆ ಮುರಿಯುವಂತಿಲ್ಲ ರಕ್ತ ಬರುವಂತಿಲ್ಲ ಏನಿದು ಹೊಸ ಕಾನೂನು | Speed News Kannada

You can beat your wife What is this new law | ಹೆಂಡತಿಯನ್ನು ಹೊಡೆಯಬಹುದು ಆದ್ರೆ ಮೂಳೆ ಮುರಿಯುವಂತಿಲ್ಲ ರಕ್ತ ಬರುವಂತಿಲ್ಲ ಏನಿದು ಹೊಸ ಕಾನೂನು | Speed News Kannada

ಮುಸ್ಲಿಂ ದೇಶಗಳಲ್ಲಿ ಮಹಿಳೆಯರನ್ನು ಗುಲಾಮರಿಗಿಂತ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಅಲ್ಲಿ ಹೆಣ್ಣು ಮಕ್ಕಳ ಅಸ್ತಿತ್ವಕ್ಕೆ ಯಾವುದೇ ಮಹತ್ವವಿಲ್ಲ. ಪ್ರಸ್ತುತ ಗಂಡ ತನ್ನ ಹೆಂಡತಿಯನ್ನು ಹೊಡೆಯಬಹುದು, ಅದು ಯಾವುದೇ ರೀತಿಯ ಅಪರಾಧವಾಗುವುದಿಲ್ಲ..ಎನ್ನುವ ಹೊಸ ಕಾನೂನನ್ನು ಮಾಡಲಾಗಿದ್ದು, ಪ್ರಪಂಚದಾದ್ಯಂತ ಚರ್ಚೆಗೆ ಕಾರಣವಾಗಿದೆ.. ಹೌದು.. ಈ ಕಾನೂನನ್ನು ಅಫ್ಘಾನಿಸ್ತಾನದಲ್ಲಿ ಜಾರಿಗೊಳಿಸಲಾಗಿದೆ. ಅಲ್ಲಿನ ತಾಲಿಬಾನ್ ಸರ್ಕಾರವು ಇಂತಹ ವಿಚಿತ್ರ ಪದ್ಧತಿ ಜಾರಿಗೆ ತಂದಿದೆ. ಇದರ ಅನ್ವಯ ಗಂಡ ತನ್ನ ಹೆಂಡತಿಗೆ ಹೊಡೆಯುವುದು ಕಾನೂನುಬದ್ದಗೊಳಿಸಲಾಗಿದೆ. ಇದೀಗ ಈ ವಿಷಯ ಪ್ರಪಂಚದಾದ್ಯಂತ ಚರ್ಚಿಸಲಾಗುತ್ತಿದೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೂಡ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.
ಹೊಸ ತಾಲಿಬಾನ್ ಕಾನೂನಿನ ಪ್ರಕಾರ. ಗಂಡನಿಗೆ ತನ್ನ ಹೆಂಡತಿಯನ್ನು ಹೊಡೆಯುವ ಸ್ವಾತಂತ್ರ ನೀಡಲಾಗಿದೆ. ಆದರೆ, ಗಂಡನು ಹೆಂಡತಿಗೆ ದೇಹದ ಮೂಳೆ ಮುರಿಯುವಂತೆ ಮತ್ತು ಯಾವುದೇ ಗಾಯವು ಗೋಚರಿಸದಂತೆ ಹೊಡೆಯುವುದು ಕಾನೂನಿನ ಪ್ರಕಾರ ಅಪರಾಧವಲ್ಲ ಎಂದು ವಿವರಿಸಲಾಗಿದೆ.
ಸ್ವರಾ ಭಾಸ್ಕರ್ ವಿರೋಧ ತಾಲಿಬಾನ್ ಸರ್ಕಾರ ಇ ಹೊಸ ಕಾನೂನಿಗೆ ಪ್ರತಿಕ್ರಿಯೆಯಾಗಿ ಸ್ವರಾ ಭಾಸ್ಕರ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ 'ಇದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ತಾಲಿಬಾನ್ ಕ್ರೂರಿ.. ಇದು ಮಾನವೀಯತೆ ಮತ್ತು ಅವರು ಪ್ರತಿನಿಧಿಸುವ ಧರ್ಮಕ್ಕೆ ಮಾಡಿದ ಅವಮಾನ.' ಎಂದು ಬರೆದುಕೊಂಡಿದ್ದಾರೆ.
ಬಗೆದಷ್ಟು ಆಳಕ್ಕೂ ನಿಕ್ಷೇಪ.. ಕೊಪ್ಪಳದ ಮಣ್ಣಲ್ಲಿ ಪತ್ತೆಯಾಯ್ತು ಅಪಾರ ಪ್ರಮಾಣದ ಖಜಾನೆ!
ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂಡ್ಯಾಡಾ ಸಹಿ ಮಾಡಿದ 90 ಪುಟಗಳ ಹೊಸ ದಂಡ ಸಂಹಿತೆಯನ್ನು ಜಾರಿಗೆ ತಂದಿದೆ ಎಂಬ ಸುದ್ದಿ ಹೊರಬಿಳುತ್ತಿದ್ದಂತೆ ಸ್ವರಾ ಭಾಸ್ಕರ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಮಹಿಳೆಯರಿಗೆ ಗುಲಾಮರ ಸ್ಥಾನಮಾನ ನೀಡಲಾಗಿದೆ. ಅಷ್ಟೇ ಅಲ್ಲದೆ, ಗಂಡನು ತನ್ನ ಹೆಂಡತಿಯನ್ನು ಹೊಡೆಯಬಹುದು. ಹೆಂಡತಿಯನ್ನು ತೀವ್ರವಾಗಿ ಥಳಿಸಿದರೆ, ಅವಳು ದೂರು ದಾಖಲಿಸಬಹುದು. ಆದರೆ ಮಹಿಳೆ ನ್ಯಾಯಾಲಯದಲ್ಲಿ ಇದಕ್ಕೆ ಪುರಾವೆಗಳನ್ನು ಒದಗಿಸಬೇಕಾಗುತ್ತದೆ...ಹೊಸ ದಂಡ ಸಂಹಿತೆಯ ಪ್ರಕಾರ, ಮಹಿಳೆಯರಿಗೆ ಕೌಟುಂಬಿಕ ಹಿಂಸಾಚಾರದ ವಿರುದ್ಧ ದೂರು ದಾಖಲಿಸುವ ಹಕ್ಕನ್ನು ನೀಡಲಾಗಿದೆ, ಆದರೆ ಕೆಲವು ಕಠಿಣ ಷರತ್ತುಗಳನ್ನು ಸಹ ವಿಧಿಸಲಾಗಿದೆ. ಮಹಿಳೆ ತನ್ನ ಪತಿ ಅಥವಾ ಪೋಷಕರೊಂದಿಗೆ ನ್ಯಾಯಾಲಯಕ್ಕೆ ಬರಬೇಕಾಗುತ್ತದೆ... ನ್ಯಾಯಾಲಯದಲ್ಲಿ ಗಾಯಗಳನ್ನು ತೋರಿಸಬೇಕಾಗುತ್ತದೆ... ಹೆಂಡತಿ ತನ್ನ ಪತಿ ತನ್ನನ್ನು ಹೊಡೆದಿದ್ದಾನೆಂದು ಸಾಬೀತುಪಡಿಸಿದರೆ, ಗಂಡನಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು. ಯಾವುದೇ ಗಾಯಗಳು ಮತ್ತು ಮೂಳೆ ಮುರಿತಗಳು ಇಲ್ಲದಿದ್ದರೆ, ಗಂಡನಿಗೆ ಯಾವುದೇ ಶಿಕ್ಷೆಯಿಲ್ಲ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.