2026-03-07 06:11:32

WPL 2026 | Bengaluru Team | ಹೀಗಾದ್ರೆ ಮಾತ್ರ ಬೆಂಗಳೂರು ತಂಡ ನೇರವಾಗಿ ಫೈನಲ್ ಗೇರಲು ಸಾಧ್ಯ! | Speed News Kannada

WPL 2026 | Bengaluru Team | ಹೀಗಾದ್ರೆ ಮಾತ್ರ ಬೆಂಗಳೂರು ತಂಡ ನೇರವಾಗಿ ಫೈನಲ್ ಗೇರಲು ಸಾಧ್ಯ! | Speed News Kannada

ವುಮೆನ್ಸ್ ಪ್ರೀಮಿಯರ್ ಲೀಗ್ 2026 (WPL Season-4) ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಆರಂಭದಲ್ಲಿ ಬ್ಯಾಕ್-ಟು-ಬ್ಯಾಕ್ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದಿತ್ತು ಆದರೆ ನೇರವಾಗಿ ಫೈನಲ್‌ಗೇರಲು ಒಂದೇ ಒಂದು ಜಯ ಬೇಕಿದ್ದ ಸಂದರ್ಭದಲ್ಲಿ ಆರ್‌ಸಿಬಿ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಅಭಿಮಾನಿಗಳಲ್ಲಿ ಆತಂಕ ಮಆದರೂ ಆರ್‌ಸಿಬಿಗೆ ಫೈನಲ್ ಪ್ರವೇಶದ ಇನ್ನೊಂದು ಭರವಸೆಯ ಅವಕಾಶ ಇನ್ನೂ ಜೀವಂತವಾಗಿದೆ. ಇಂದು (ಜನವರಿ 29) ಯುಪಿ ವಾರಿಯರ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಆರ್‌ಸಿಬಿ ತಂಡ 12 ಅಂಕಗಳೊಂದಿಗೆ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ.
ಒಂದು ವೇಳೆ ಸೋತರೆ ಏನು?
ಯುಪಿ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಸೋತರೂ ಕೂಡ ಫೈನಲ್ ಪ್ರವೇಶದ ಅವಕಾಶ ಸಂಪೂರ್ಣ ಮುಚ್ಚುವುದಿಲ್ಲ. ಇದಕ್ಕೆ ಕಾರಣ ಆರ್‌ಸಿಬಿ ಹೊಂದಿರುವ ಭರ್ಜರಿ ನೆಟ್ ರನ್ ರೇಟ್. ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ ರನ್ ರೇಟ್ +0.947 ಆಗಿದ್ದು, ಲೀಗ್‌ನಲ್ಲೇ ಅತ್ಯುತ್ತಮವಾಗಿದೆ.
ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ತಂಡದ ನೆಟ್ ರನ್ ರೇಟ್ -0.271 ಮಾತ್ರ. ಹೀಗಾಗಿ ಯುಪಿ ವಾರಿಯರ್ಸ್ ವಿರುದ್ಧ ಸೋಲಾದರೂ ಆರ್‌ಸಿಬಿ ಭಾರೀ ಅಂತರದ ಸೋಲು ತಪ್ಪಿಸಿಕೊಂಡರೆ, ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಆರ್‌ಸಿಬಿ ತಂಡವು ಯುಪಿ ವಾರಿಯರ್ಸ್ ವಿರುದ್ಧ ಕನಿಷ್ಠ 60 ರನ್‌ ಗಳ ಅಂತರದಿಂದ ಸೋತರೆ ಮಾತ್ರ ಪರಿಸ್ಥಿತಿ ಸಂಕೀರ್ಣವಾಗಲಿದೆ. ಅಂಥ ಸಂದರ್ಭದಲ್ಲಿ ಗುಜರಾತ್ ಜೈಂಟ್ಸ್ ತಂಡವು ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ 160 ರನ್‌ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ. ಆಗ ಮಾತ್ರ ನೆಟ್ ರನ್ ರೇಟ್ ಆಧಾರದಲ್ಲಿ ಗುಜರಾತ್ ಜೈಂಟ್ಸ್ ಆರ್‌ಸಿಬಿಯನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆಯಲು ಸಾಧ್ಯ.
ಆದರೆ ಮುಂಬೈ ಇಂಡಿಯನ್ಸ್ ವಿರುದ್ಧ ಇಷ್ಟು ದೊಡ್ಡ ಅಂತರದ ಗೆಲುವು ಸಾಧಿಸುವುದು ಗುಜರಾತ್ ಜೈಂಟ್ಸ್‌ಗೆ ಕಷ್ಟಸಾಧ್ಯವೆನ್ನಲಾಗಿದೆ. ಹೀಗಾಗಿ ಯುಪಿ ವಾರಿಯರ್ಸ್ ವಿರುದ್ಧ ಸೋಲಾದರೂ, ನೆಟ್ ರನ್ ರೇಟ್ ನೆರವಿನಿಂದ ಆರ್‌ಸಿಬಿ ತಂಡ ಅಗ್ರಸ್ಥಾನ ಉಳಿಸಿಕೊಂಡು ನೇರವಾಗಿ ಫೈನಲ್ ಪ್ರವೇಶಿಸುವ ಸಾಧ್ಯತೆ ಬಹಳ ಹೆಚ್ಚು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.