ನವದೆಹಲಿ: ಮಾಧ್ಯಮಗಳ ಪ್ರಶ್ನೆಗಳನ್ನು ಸ್ವೀಕರಿಸುವಂತೆ ನಾರ್ವೆಯ ಪತ್ರಕರ್ತೆಯೊಬ್ಬರು ಕೇಳಿದರೂ ಕೇಳಿಸದಂತೆ ಪ್ರಧಾನಿ ನರೇಂದ್ರ ಮೋದಿ ಹೊರ ನಡೆದಿರುವ ಪ್ರಕರಣ ನಾರ್ವೆಯಲ್ಲಿ ನಡೆದಿದೆ.ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಳಿದ್ದು ಪತ್ರಕರ್ತೆ ಹೆಲ್ಲೆ ಲಿಂಗ್.
ನಂತರ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಒಸ್ಲೊದಲ್ಲಿ ಹಮ್ಮಿಕೊಂಡಿರುವ ಸುದ್ದಿಗೋಷ್ಠಿಗೆ ಆಗಮಿಸುವಂತೆ ಪತ್ರಕರ್ತೆ ಹೆಲ್ಲೆ ಲಿಂಗ್ ಅವರನ್ನು ಭಾರತದ ರಾಯಭಾರ ಕಚೇರಿ ಆಹ್ವಾನಿಸಿದೆ. ಅಲ್ಲಿಯೂ ನಾಟಕೀಯ ಬೆಳವಣಿಗೆ ನಡೆದಿದೆ.
ಭಾರತದ ಜೊತೆ ನಾರ್ವೆ ಪಾಲುದಾರಿಕೆ ಬಲಗೊಳ್ಳುತ್ತಿದೆ. ಆದರೆ, ನಾವು ಏಕೆ ನಿಮ್ಮನ್ನು (ಭಾರತ) ನಂಬಬೇಕು? ನಿಮ್ಮ
ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಪ್ರಯತ್ನಿಸುತ್ತೀರಿ ಎಂದು ನೀವು ಭರವಸೆ
ನೀಡುವಿರಾ? ಭವಿಷ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾರತೀಯ ಪತ್ರಕರ್ತರಿಂದ ನಿರ್ಣಾಯಕ
ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಆದರೆ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಉತ್ತರಿಸಿದ್ದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಿ.ಬಿ. ಜಾರ್ಜ್. ಅವರು
ಕೋವಿಡ್ ಸಮಯದಲ್ಲಿ ಬೇರೆ ದೇಶಗಳಿಗೆ ಸಹಾಯ ನೀಡುವಲ್ಲಿ ಭಾರತದ ಪಾತ್ರ, ಭಾರತೀಯ ಸಂವಿಧಾನವು ನೀಡುರುವ ಮೂಲಭೂತ ಹಕ್ಕುಗಳನ್ನು ಕುರಿತು ವಿವರಿಸಿದ್ದಾರೆ.
ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಜಾರ್ಜ್ ಅವರು, ಅಜ್ಞಾನಿ ಎನ್‌ಜಿಒಗಳ ವರದಿ
ಭಾರತದ ಬಗ್ಗೆ 'ತಪ್ಪು ತಿಳುವಳಿಕೆಗೆ ಕಾರಣವಾಗಿದೆ. ದೇಶದಲ್ಲಿ ಹಲವು ಸುದ್ದಿ ವಾಹಿನಿಗಳಿದ್ದು, ದಿನಕ್ಕೆ ನೂರಾರು ಬ್ರೇಕಿಂಗ್ ನ್ಯೂಸ್ ಬರುತ್ತದೆ. ದೇಶದ ಬೆಳವಣಿಗೆಗಗಳ ಬಗ್ಗೆ ಜನರಿಗೆ ಅರಿವಿದೆ. ಕೆಲವು ಅಜ್ಞಾನಿ ಎನ್‌ಜಿಒ ವರದಿ ಅವುಗಳನ್ನು ಸುಳ್ಳಾಗಿಸಲಾರದು ಎಂದು ಉತ್ತರಿಸಿದ್ದಾರೆ.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಮೋದಿ, ಸತತ ಮೂರನೇ ಬಾರಿಗೆ
ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಅವರು ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ಅವು ಕೇವಲ ರೆಕಾರ್ಡ್ ಹೇಳಿಕೆಗಳನ್ನು ಜನರ ಮುಂದಿಡುತ್ತಿದ್ದಾರೆ.