2026-03-07 08:02:21

Who did Trump warn | ಸುಪ್ರೀಂಕೋರ್ಟ್ ತೀರ್ಪಿನ ಆಶ್ರಯ ಪಡೆದರೆ ಮತ್ತಷ್ಟು ಸುಂಕ ಟ್ರಂಪ್ ಎಚ್ಚರಿಕೆ ನೀಡಿದ್ದು ಯಾರಿಗೆ | Speed News Kannada

Who did Trump warn | ಸುಪ್ರೀಂಕೋರ್ಟ್ ತೀರ್ಪಿನ ಆಶ್ರಯ ಪಡೆದರೆ ಮತ್ತಷ್ಟು ಸುಂಕ ಟ್ರಂಪ್ ಎಚ್ಚರಿಕೆ ನೀಡಿದ್ದು ಯಾರಿಗೆ | Speed News Kannada

ವಾಷಿಂಗ್ಟನ್: ಅಮೆರಿಕ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮುಂದಿಟ್ಟುಕೊಂಡು ಆಟವಾಡಲು ಮುಂದಾದರೆ ಹೆಚ್ಚಿನ ಸುಂಕ ಮತ್ತು ಕೆಟ್ಟ ಪ್ರಮಾಣದ ಸುಂಕ ಎದುರಿಸಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. 
ಡೊನಾಲ್ಡ್ ಟ್ರಂಪ್ ಜಾಗತಿಕವಾಗಿ ವಿಧಿಸಿದ್ದ ಸುಂಕ ಕಾನೂನುಬಾಹಿರ ಎಂದು ಹೇಳಿ ಸುಪ್ರೀಂ ಕೋರ್ಟ್ ಅದನ್ನು ರದ್ದುಪಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಟ್ರಂಪ್ ಹೊಸ ಬೆದರಿಕೆ ಹಾಕಿದ್ದಾರೆ. ಅವರ ಬೆದರಿಕೆ ಭಾರತಕ್ಕೂ ಅನ್ವಯವಾಗಲಿದೆ.
ತಮ್ಮದೇ ಒಡೆತನದ ಟ್ರುತ್ ನಲ್ಲಿ ಅವರು ವಿವರವಾಗಿ ಬರೆದುಕೊಂಡಿದ್ದಾರೆ.
ಯಾವುದೇ ದೇಶ, ವಿಶೇಷವಾಗಿ ಅಮೆರಿಕದ ಮೇಲೆ ಹಲವು ವರ್ಷಗಳ ಕಾಲ ಅಥವಾ ದಶಕಗಳಿಂದ ಸುಂಕ ಹೇರಿ ಲಾಭ ಮಾಡಿಕೊಂಡ ದೇಶಗಳು ಇತ್ತೀಚೆಗೆ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನ ಸುಂಕ ಮತ್ತು ಕೆಟ್ಟ ಪ್ರಮಾಣದ ಸುಂಕ ಎದುರಿಸಬೇಕಾಗುತ್ತದೆ. ಖರೀದಿದಾರರೇ ಎಚ್ಚರ ಎಂದು ಬೆದರಿಕೆ ಒಡ್ಡಿದ್ದಾರೆ.
ಕಳೆದ ಶುಕ್ರವಾರ, 6–3ರ ಬಹುಮತದ ತೀರ್ಪು ನೀಡಿದ್ದ ಅಮೆರಿಕ ಸುಪ್ರೀಂ ಕೋರ್ಟ್, ಅಧ್ಯಕ್ಷರು ತಮ್ಮ ಕಾನೂನು ಅಧಿಕಾರವನ್ನು ಮೀರಿದ್ದಾರೆ. ಅಮೆರಿಕ ಕಾಂಗ್ರೆಸ್ ಅನುಮೋದನೆ ಪಡೆಯದೇ ಸುಂಕ ಜಾರಿಗೆ ತಂದಿದ್ದು ತಪ್ಪು ಎಂದು ಹೇಳಿತ್ತು. ನಂತರ, ಟ್ರಂಪ್ ವಿದೇಶಿ ಸರಕುಗಳ ಮೇಲೆ ಶೇ10 ರಷ್ಟು ಜಾಗತಿಕ ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು, ಬಳಿಕ, ಅದನ್ನು 15ಕ್ಕೆ ಏರಿಸಿದ್ದರು.
ಐರೋಪ್ಯ ಒಕ್ಕೂಟ, ಬ್ರಿಟನ್‌ನಂತಹ ಜಾಗತಿಕ ಮಿತ್ರರಾಷ್ಟ್ರಗಳು ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದಗಳ ಮರುಪರಾಮರ್ಶೆಗೆ ಮುಂದಾಗಿವೆ ಎಂಬ ವರದಿಗಳ ಬೆನ್ನಲ್ಲೇ ಟ್ರಂಪ್ ಈ ಬೆದರಿಕೆ ಹಾಕಿದ್ದಾರೆ. ಭಾರತವೂ ಸಹ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತಾದ ಮಾತುಕತೆಗೆ ನಿಗದಿಯಾಗಿದ್ದ ಸಭೆಯನ್ನು ಮುಂದೂಡಿದೆ.
ಇತ್ತೀಚಿನವರೆಗೂ ಭಾರತವು ಶೇ 50 ರಷ್ಟು ಸುಂಕವನ್ನು ಎದುರಿಸುತ್ತಿತ್ತು. ಭಾರತದ ಜೊತೆ ವ್ಯಾಪಾರ ಒಪ್ಪಂದ ಕುದುರಿದ ಬಳಿಕ ಸುಂಕವನ್ನು ಶೇ,18ಕ್ಕೆ ಇಳಿಸಲಾಗಿತ್ತು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.