2026-03-07 06:38:12

What is the secret behind the recurring World War | ಮತ್ತೆ ಮರುಕಳಿಸುತ್ತಾ ವರ್ಲ್ಡ್ ವಾರ್ 1914 & 2026 ರ ಕ್ಯಾಲೆಂಡರ್ ನಲ್ಲಿರುವ ಸೀಕ್ರೆಟ್ ಏನು | Speed News Kannada

What is the secret behind the recurring World War | ಮತ್ತೆ ಮರುಕಳಿಸುತ್ತಾ ವರ್ಲ್ಡ್ ವಾರ್ 1914 & 2026 ರ ಕ್ಯಾಲೆಂಡರ್ ನಲ್ಲಿರುವ ಸೀಕ್ರೆಟ್ ಏನು | Speed News Kannada

2026 ಈ ಹೊಸ ವರ್ಷ ಆರಂಭದಲ್ಲೇ ಇಡೀ ಜಗತ್ತಿಗೆ ಕರಾಳ ದಿನಗಳನ್ನು ಪರಿಚಯಿಸುತ್ತಿದೆ. ವರ್ಷದ ಆರಂಭದಿಂದಲೇ ಜಗತ್ತು ಒಂದಿಲ್ಲೊಂದು ಯುದ್ಧಕ್ಕೆ  ಸಾಕ್ಷಿಯಾಗುತ್ತಿದೆ. ಇದೀಗ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಆರಂಭಿಸಿರುವ ಯುದ್ಧ ಕೇವಲ ಮಧ್ಯಪ್ರಾಚ್ಯವಲ್ಲದೇ ಇಡೀ ಜಗತ್ತನ್ನು ಆತಂಕಕ್ಕೆ ದೂಡಿದೆ.ಹೀಗಾಗಿ 2026 ರ ವರ್ಷದ ಕ್ಯಾಲೆಂಡರ್ ಬಗ್ಗೆ ಕುತೂಹಲ ಮತ್ತು ಚರ್ಚೆಗಳು ಹೆಚ್ಚಾಗಿದ್ದು, ಈ ಬಗ್ಗೆ ಇಂಟರ್ನೆಟ್ ನಲ್ಲಿ ಹಲವು ಬಗೆಯ ಚರ್ಚೆಗಳು ಗರಿಗೆದರಿವೆ. ಈ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ 2026 ವರ್ಷ ಈ ಹಿಂದಿನ ವರ್ಷಗಳಿಗೆ ಹೋಲಿಕೆಯಾಗುವಂತಿದೆ. 2026 ರ ಜ.1 ರಂದು ಗುರುವಾರದಿಂದ ಪ್ರಾರಂಭವಾಗುವ ಸಾಮಾನ್ಯ ವರ್ಷವಾಗಿದ್ದು, ಇದೇ ರೀತಿ ವರ್ಷದ ಮೊದಲ ದಿನದಿಂದ ಹಿಡಿದು, ವರ್ಷದ ಸಂಪೂರ್ಣ ದಿನಾಂಕ-ವಾರ ಸಂಯೋಜನೆ ಎಲ್ಲವೂ ಈ ಹಿಂದಿನ ವರಶಗಳ ಕ್ಯಾಲೆಂಡರ್ ನೊಂದಿಗೆ ಹೋಲಿಕೆ ಮಾಡಬಹುದಾಗಿದೆ. ಈ ಹೋಲಿಕೆ 2026 ಕ್ಯಾಲೆಂಡರ್ ಅನ್ನು 1981, 1987, 1998, 2009 ಮತ್ತು 2015 ರಂತಹ ವರ್ಷಗಳೊಂದಿಗೆ ಸಾಮ್ಯತೆ ಇರುವುದನ್ನು ಖಚಿತ ಪಡಿಸುತ್ತದೆ. ಅಂದರೆ ಈ ಎಲ್ಲಾ ವರ್ಷಗಳ ದಿನಾಂಕ-ವಾರ ಸರಣಿಗಳು ಒಂದೇ ರೀತಿಯಲ್ಲಿ ಮರುಕಳಿಸುತ್ತವೆ.
ಹೀಗೆ ಕ್ಯಾಲೆಂಡರ್ ಪುನರಾವೃತ್ತಿಯ ಬಗ್ಗೆ ವಿಜ್ಞಾನ ತನ್ನದೇ ವಿವರಣೆ ನೀಡುತ್ತದೆ, 28-ವರ್ಷದ ಚಕ್ರವನ್ನು ವಿವರಿಸುತ್ತದೆ, ಆದರೆ ಒಂದೇ ದಿನಾಂಕ-ವಾರ ಸಂಯೋಜನೆ ಅನೇಕ ವರ್ಷಗಳಿಗೆ 6, 11 ಅಥವಾ 12 ವರ್ಷಗಳ ಅಂತರದಲ್ಲಿ ಮತ್ತೆ ಬರುತ್ತದೆ.
ಇತ್ತೀಚಿನ ಕೆಲವು ಸಾಮಾಜಿಕ ಚರ್ಚೆಗಳಲ್ಲಿ ಜನರು ಈ ಹೋಲಿಕೆ ಮಾಡುತ್ತಾ, 1914 ರಂತಹ ಮೊದಲ ವಿಶ್ವಯುದ್ಧದ ವರ್ಷದೊಂದಿಗೆ 2026 ರ ಹೋಲಿಕೆಗಳನ್ನು ಮಾಡುತ್ತಿದ್ದಾರೆ, ಮತ್ತು ಇತಿಹಾಸದಲ್ಲಿ ಭೀಕರ ಘಟನೆಗಳು ಸಂಭವಿಸಿದ ವರ್ಷಗಳ ಕ್ಯಾಲೆಂಡರ್‌ಗಳನ್ನು ಇಂದಿನ 2026 ರವರಿಗೂ ಹೋಲಿಕೆ ಮಾಡಲಾಗುತ್ತಿದೆ. ಈ ವಿಚಾರಗಳು 2026 ರಲ್ಲಿ ಮೂರನೇ ವಿಶ್ವಯುದ್ಧದ ಸಂಕೇತ ನೀಡುತ್ತಿದೆ ಎಂದು ಹಲವರು ವ್ಯಾಖ್ಯಾನಿಸುತ್ತಿದ್ದಾರೆ. ಆದ್ರೆ ಕ್ಯಾಲೆಂಡರ್ ಎಂಬುದು ಕೇವಲ ನಿರ್ದಿಷ್ಟವಾದ ಗಣಿತದ್ ಸಂಯೋಜನೆಯೇ ಹೊರತು ಐತಿಹಾಸಿಕ ಘಟನೆಗಳ ಹೋಲಿಕೆಯೊಂದಿಗೆ ನೇರವಾಗಿ ಸಂಬಂಧ ಕಲ್ಪಿಸುವುದು ಸಮಂಜಸವಲ್ಲ. ಇದೊಂದು ಗಣಿತಶಾಸ್ತ್ರದಲ್ಲಿನ ಪುನರಾವೃತಿಯ ನಿರ್ಣಯ ಮಾತ್ರ ಎನ್ನಲಾಗಿದೆ.
ಹೀಗಾಗಿ, 2026 ರ ಕ್ಯಾಲೆಂಡರ್ ಮತ್ತು 1914 ರ ಕ್ಯಾಲೆಂಡರ್ ಸಾಮ್ಯತೆ ಹೊಂದಿರುವ ಕಾರಣಕ್ಕೆ ಆಗ ನಡೆದ ಮೊದಲ ವಿಶ್ವ ಯುದ್ಧದಂತೆ ಈಗ್ ಮೂರನೇ ಮಹಾ ಯುದ್ದ ನಡೆಯಲಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಅರ್ಥ ಅಥವಾ ಪುರಾವೆಗಳಿಲ್ಲ. ಇವೆಲ್ಲಾ ಕೇವಲ ತರ್ಕಬದ್ದ ಚರ್ಚೆಗಳು ಮಾತ್ರ ಎನ್ನಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.