2026-06-08 01:33:12

west bengal; three in race for cm post; power sharing formula under consideration| ಪಶ್ಚಿಮ ಬಂಗಾಳ: ಸಿಎಂ ಹುದ್ದೆಗೆ ಪೈಪೋಟಿ: ಅಧಿಕಾರ ಹಂಚಿಕೆ ಸೂತ್ರವೂ ಪರಿಗಣನೆಯಲ್ಲಿ| Speed News Kannada

west bengal; three in race for cm post; power sharing formula under consideration| ಪಶ್ಚಿಮ ಬಂಗಾಳ: ಸಿಎಂ ಹುದ್ದೆಗೆ ಪೈಪೋಟಿ: ಅಧಿಕಾರ ಹಂಚಿಕೆ ಸೂತ್ರವೂ ಪರಿಗಣನೆಯಲ್ಲಿ| Speed News Kannada

ಪಶ್ಚಿಮ ಬಂಗಾಳ: ಸಿಎಂ ಹುದ್ದೆಗೆ ಪೈಪೋಟಿ: ಅಧಿಕಾರ ಹಂಚಿಕೆ ಸೂತ್ರವೂ ಪರಿಗಣನೆಯಲ್ಲಿ

 

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 206 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಮೂಲಕ ಭರ್ಜರಿ ಜಯ ದಾಖಲಿಸಿದೆ. ಸಧ್ಯ ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವುದು ಮಾತ್ರ ಕುತೂಹಲ ಕೆರಳಿಸಿದೆ.   

ಹೈಕಮಾಂಡ್ ಯಾರಿಗೆ ಅವಕಾಶ ನೀಡಲಿದೆ ಎಂದು ಕಾದು ನೋಡಬೇಕಿದೆ. ಏನೇ ಆದರೂ ಸಂಘ ಪರಿವಾರದ ನಿಷ್ಟಾವಂತರೊಬ್ಬರಿಗೆ ಅವಕಾಶ ಸಿಗಲಿದೆ. ಅಥವಾ ಕರ್ನಾಟಕದಲ್ಲಿ ಆಗಿರುವಂತೆ ಅಧಿಕಾರ ಹಂಚಿಕೆಯ ಸೂತ್ರವನ್ನು ಜಾರಿಗೊಳಿಸಿದರೂ ಅಚ್ಚರಿ ಇಲ್ಲ.

ಮುಖ್ಯಮಂತ್ರಿ ಪಟ್ಟಕ್ಕೆ ಸುವೇಂದು ಅಧಿಕಾರಿ, ದಿಲೀಪ್ ಘೋಷ್, ಸಮಿಕ್ ಭಟ್ಟಾಚಾರ್ಯ ನಡುವೆ ಪೈಪೋಟಿ ಏರ್ಪಟ್ಟಿದೆ.

 

ಸುವೇಂದು ಅಧಿಕಾರಿ: ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಆಪ್ತರಾಗಿದ್ದ ಸುವೇಂದು ಅಧಿಕಾರಿ ಸಿಎಂ ಪಟ್ಟಕ್ಕೆ ಮುಂಚೂಣಿಯಲ್ಲಿದ್ದಾರೆ. 2021ರಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದ ಅವರು, ಈಗ 2026ರಲ್ಲಿ ಭಬಾನಿಪುರದಲ್ಲೂ ಮಣ್ಣು ಮುಕ್ಕಿಸಿದ್ದಾರೆ. ಹತ್ತು ವರ್ಷಗಳಿಂದ ಪಕ್ಷ ಸಂಘಟನೆಗೆ ಅಪಾರ ಶ್ರಮ ಹಾಕಿದ್ದಾರೆ.  ಇವರು ಸದಾ ಜನ ಸಾಮಾನ್ಯರ ನಡುವೆಯೇ ಇರಲು ಬಯಸುವ ನಾಯಕರಾಗಿದ್ದು, ಪಕ್ಷ ಇವರನ್ನು ಸಿಎಂ ಗಾದಿಯ ಮೇಲೆ ಕೂರಿಸುವುದೇ ಎಂದು ಕಾದು ನೋಡಬೇಕಿದೆ.

ದಿಲೀಪ್ ಘೋಷ್: ಇವರೂ ಸಂಘಟನಾ ಚತುರ ಎಂದೇ ಖ್ಯಾತಿ ಪಡೆದಿದ್ದಾರೆ. ಬಿಜೆಪಿಯನ್ನು ಶೂನ್ಯದಿಂದ ಅಧಿಕಾರಕ್ಕೆ ತರುವಲ್ಲಿ ಇವರ ಕೊಡುಗೆಯನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷರೂ ಆದ  ದಿಲೀಪ್ ಘೋಷ್ ಆರ್‌ಎಸ್‌ಎಸ್‌ನ ಕಟ್ಟಾ ಅನುಯಾಯಿಯೂ ಹೌದು. ಮಾಜಿ ಆರ್‌ಎಸ್‌ಎಸ್ ಮುಖ್ಯಸ್ಥ ಕೆ.ಎಸ್. ಸುದರ್ಶನ್ ಅವರ ಸಹಾಯಕರಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. ಇವರು ಹಾಕಿದ ಅಡಿಪಾಯದಿಂದಲೇ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.

ಸಮಿಕ್ ಭಟ್ಟಾಚಾರ್ಯ: ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರುವ ಸಮಿಕ್ ಭಟ್ಟಾಚಾರ್ಯ, ಪಕ್ಷದ ನಿಷಾವಂತ ಕಾರ್ಯಕರ್ತ. ಬಂಗಾಳದಲ್ಲಿ ಕಮಲ ಅರಳಲು ಹೋರಾಟ ನಡೆಸಿದ ಅಗ್ರಗಣ್ಯ ನಾಯಕ.  2014ರ ಉಪಚುನಾವಣೆಯಲ್ಲಿ ಬಸಿರ್ಹತ್ ದಕ್ಷಿಣ ಕ್ಷೇತ್ರದಿಂದ ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದ ಮೊದಲ ಚುನಾಯಿತ ಬಿಜೆಪಿ ಶಾಸಕ ಎಂಬ ದಾಖಲೆಯೂ ಇವರ ಹೆಸರಿನಲ್ಲಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.