ಕೋಲ್ಕತ್ತಾ: ಸತತ ಮೂರು ಅವಧಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ತೃಣಮೂಲ ಕಾಂಗ್ರೆಸ್ (TMC) ನಾಯಕಿ ಮಮತಾ ಬ್ಯಾನರ್ಜಿ ಅವರ ಯುಗಾಂತ್ಯ ಅಂತ್ಯವಾಗಿದೆ. ಇಡೀ ರಾಜ್ಯಾದ್ಯಂತ ಬಿಜೆಪಿ ಅಬ್ಬರಿಸಿದ್ದು ದಾಖಲೆಯ ಜಯ ದಾಖಲಿಸಿದೆ.
ಮಮತಾ ಬ್ಯಾನರ್ಜಿ ಅವರೂ ಸಹ ಈ ಹೀನಾಯ ಸೋಲಿನ ನಿರೀಕ್ಷೆ ಮಾಡಿರಲಿಕ್ಕಿಲ್ಲ.
ಅವರ ಸೋಲಿಗೆ ಸೋಲಿಗೆ ಕಾರಣವಾದ ಪ್ರಮುಖ ಕಾರಣಗಳು ಹೀಗಿವೆ:
1. ಆಡಳಿತ ವಿರೋಧಿ ಅಲೆ:
ಆಡಳಿತ ವಿರೋಧಿ ಅಲೆ ಪ್ರಮುಖ ಕಾರಣ. ಕಳೆದ 15 ವರ್ಷಗಳ ಆಡಳಿತದ ವಿರುದ್ಧ ಜನ ಸಿಡಿದೆದ್ದಿದ್ದರು. ಶಿಕ್ಷಕರ ನೇಮಕಾತಿ ಮತ್ತು ಪಡಿತರ ಹಗರಣಗಳಂತಹ ಗಂಭೀರ ಆರೋಪಗಳು ಪಕ್ಷದ ವರ್ಚಸ್ಸಿಗೆ ಮಸಿ ಬಳಿದಿದ್ದವು. ಅಧಿಕಾರದ ದರ್ಪದಿಂದ ಸ್ಥಳೀಯ ನಾಯಕರು ಆಮಾನ್ಯ ಜನತೆಯನ್ನು ಶೋಷಿಸುತ್ತಿದ್ದರು. ಹಾಗಾಗಿ ಭ್ರಷ್ಟಾಚಾರದಿಂದ ಬೇಸತ್ತ ಮತದಾರರು ಬದಲಾವಣೆ ಬಯಸಿರಬಹುದು.
2. ಆರ್.ಜಿ. ಕರ್ ಆಸ್ಪತ್ರೆ ಅತ್ಯಾಚಾರ:
ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಾತ್ಯಾಚಾರ ಪ್ರಕರಣ ಮಮತಾ ಸರ್ಕಾರದ ಪಾಲಿಗೆ ಮುಳುವಾಗಿದ್ದು ಸುಳ್ಳಲ್ಲ. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುತ್ತಿಲ್ಲ ಎನ್ನುವುದು ಸಾಬೀತಾಗಿತ್ತು. ಇದರಿಂದ ಸಹಜವಾಗಿಯೇ ಮಹಿಳಾ ಮತದಾರರು ಆಕ್ರೋಶಗೊಂಡಿದ್ದು, ಎದ್ದು ಕಾಣುತ್ತಿತ್ತು. 'ಮಹಿಳಾ ಮತದಾರರು ಈ ಬಾರಿ ಬಿಜೆಪಿಯತ್ತ ವಾಲಿರುವುದು ಗೋಚರಿಸುತ್ತಿದೆ.
3. ಹಿಂದೂ ಮತಗಳ ಧ್ರುವೀಕರಣ:
ಬಿಜೆಪಿಯ ಹಿಂದುತ್ವವಾದಿ ರಾಜಕಾರಣ ಕೈಹಿಡಿದಿದೆ. ಟಿಎಂಸಿಯ "ತುಷ್ಟೀಕರಣದ ರಾಜಕಾರಣ" ವಿರೋಧಿ ಪ್ರಚಾರ ಫಲ ನೀಡಿದೆ. ವಿಶೇಷವಾಗಿ ಉತ್ತರ ಬಂಗಾಳ ಮತ್ತು ಆದಿವಾಸಿಗಳು ಹೆಚ್ಚಿರುವ ಪ್ರದೇಶಗಳಲ್ಲಿರುವ ಹಿಂದೂ ಮತದಾರರು ಬಿಜೆಪಿ ಪರವಾಗಿ ನಿಂತಿದ್ದಾರೆ.
4. ಸುವೇಂದು ಅಧಿಕಾರಿ ರಣತಂತ್ರ:
ಒಂದು ಕಾಲದಲ್ಲಿ ಮಮತಾ ಅವರ ಶಿಷ್ಯ ಸುವೇಂದು ಅಧಿಕಾರಿ, ಮಮತಾ ಅವರಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮಮತಾ ಅವರ ಪಟ್ಟುಗಳನ್ನು ಅರಿತಿದ್ದ ಸುವೇಂದು, ಸಂಘಟಿತ ಹೋರಾಟದ ಮೂಲಕ ಬಿಜೆಪಿಗೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
5. ನಕಲಿ ಮತದಾರರ ಪಟ್ಟಿ ಪರಿಷ್ಕರಣೆ(SIR)
ಚುನಾವಣಾ ಆಯೋಗವು ನಡೆಸಿದ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಡಿಯಲ್ಲಿ ಸುಮಾರು 80 ಲಕ್ಷ ನಕಲಿ ಮತದಾರರನ್ನು ತೆಗೆದುಹಾಕಲಾಗಿತ್ತು. ಇದರಿಂದಾಗಿ ಚುನಾವಣಾ ಅಕ್ರಮಗಳಿಗೆ ತಡೆ ಒಡ್ಡಿದಂತಾಗಿತ್ತು. ಇದೂ ಸಹ ಬಿಜೆಪಿ ಗೆಲುವಿಗೆ ದೊಡ್ಡ ಕೊಡುಗೆ ನೀಡಿರಬಹುದು ಎನ್ನಲಾಗುತ್ತಿದೆ.