2026-06-08 01:34:22

ಡಿಸಿಎಂ ಹೇಳಿದ ಮಾತ್ರಕ್ಕೆ ಟೌನ್‌ ಶಿಪ್ ಯೋಜನೆಗೆ ಭೂಮಿ ನೀಡಲ್ಲ;ರೈತರ ಗುಡುಗು|Speed News Kannada

ಡಿಸಿಎಂ ಹೇಳಿದ ಮಾತ್ರಕ್ಕೆ ಟೌನ್‌ ಶಿಪ್ ಯೋಜನೆಗೆ ಭೂಮಿ ನೀಡಲ್ಲ;ರೈತರ ಗುಡುಗು|Speed News Kannada

ಬೆಂಗಳೂರು: ಬಿಡದಿ ಟೌನ್‌ ಶಿಪ್‌ ಗೆ  ಬಿಡಿದಿ ಸುತ್ತಮುತ್ತಲಿನ ಬೈರಮಂಗಲ ಮತ್ತು ಕುಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರು ಈ ಯೋಜನೆಗೆ ಭೂಮಿ ನೀಡಲು ನಿರಾಕರಿಸಿದ್ದಾರೆ. ಈ ಯೋಜನೆಗೆ ಶೇ.80 ರಷ್ಟು ರೈತರು ಭೂಮಿ ನೀಡಲುಒಪ್ಪಿಗೆ ನೀಡಿದ್ದಾರೆ ಎಂಬ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆ ಸುಳ್ಳು. ನಾವಂತೂ ಕೃಷಿ ಭೂಮಿಯನ್ನು ನೀಡಲು ಸಿದ್ದರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

20ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡ ಬೈರಮಂಗಲ ಮತ್ತು ಕುಂಚುರಗಾನಹಳ್ಳಿ ರೈತರ ಭೂ ಹೋರಾಟ ಹಿತರಕ್ಷಣಾ ಸಂಘ, ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಗೆ  ತಮ್ಮ ಭೂಮಿಯನ್ನು ನೀಡಲು ನಾವು ಸಿದ್ಧರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಸಿಎಂ ಶಿವಕುಮಾರ್‌ ಜತೆ ಕಾಣಿಸಿಕೊಂಡವರು ರಿಯಲ್‌ ಎಸ್ಟೇಟ್‌ ಉದ್ಯಮಿಗಳು. ಅವರು ಕೃಷಿಕರಲ್ಲ. ಅವರಿಗೆ ರೈತರ ಹಿತಾಸಕ್ತಿ ಬೇಕಿಲ್ಲ ಎಂದು ಆರೋಪಿಸಿದ್ದಾರೆ. ದೊಡ್ಡ ದೊಡ್ಡ ಜಮೀನುದಾರರಿಗೆ ಈ ಯೋಜನೆಯಿಂದ ಲಾಭವಾಗಬಹುದು. ಆದರೆ ಒಂದು ಎರಡು ಎಕರೆ ಭೂಮಿ ಹೊಂದಿರುವ ನಾವು ಏನು ಮಾಡಬೇಕು ಎಂದೂ ಅವರು ಪ್ರಶ್ನಿಸಿದ್ದಾರೆ.

ಮಂಡಲಹಳ್ಳಿ ಗ್ರಾಮದಲ್ಲಿ 40 ಎಕರೆ ಜಮೀನು ಹೊಂದಿರುವ ನಾಗರಾಜ್, ಬರಡು ಭೂಮಿಯನ್ನು ನೀರಾವರಿ ಭೂಮಿಯಾಗಿ ಪರಿವರ್ತಿಸಲು ನಮಗೆ 20 ವರ್ಷ ಬೇಕಾಯಿತು. ಆದರೆ ಈಗ ಸರ್ಕಾರ ಅದನ್ನು ಸ್ವಾಧೀನಪಡಿಸಿಕೊಂಡು ಟೌನ್‌ಶಿಪ್ ನಿರ್ಮಿಸಲು ಮುಂದಾಗಿದೆ ಎಂದು ದೂರಿದರು.

ಮುಂದಿನ ದಿನಗಳಲ್ಲಿ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ರೈತರು ಚಿಂತನೆ ನಡೆಸಿದ್ದಾರೆ.

 ಈ ಮಧ್ಯೆ ಡಿಸಿಎಂ ಶಿವಕುಮಾರ್‌ ಅವರನ್ನು ಭೇಟಿ  ಮಾಡಿದ್ದ ಜಿ ಎನ್ ನಟರಾಜು, ಡಿಸಿಎಂ ಅವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ 2 ಎಕರೆಗಳಿಂದ 30 ಎಕರೆವರೆಗೆ ಜಮೀನು ಹೊಂದಿರುವ 179 ರೈತರು ಬಿಡದಿ ಟೌನ್‌ಶಿಪ್ ಯೋಜನೆಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ 2,669 ಎಕರೆ ಭೂಮಿ ಲಭ್ಯವಾಗಲಿದ್ದು, ರೈತರಿಗೆ ಉತ್ತಮ ಪರಿಹಾರ ಮತ್ತು ಹೆಚ್ಚುವರಿ ಸೌಲಭ್ಯಗಳು ಸಿಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.