2026-06-08 01:19:40

Vijays path is in tatters two more MLAs missing | ಕಗ್ಗಂಟಾದ ವಿಜಯ್‌ ಹಾದಿ ಇನ್ನೂ ಇಬ್ಬರು ಶಾಸಕರ ಕೊರತೆ ಎಲ್ಲರ ಚಿತ್ತ ಸಿವಿಕೆಯತ್ತ | Speed News Kannada

Vijays path is in tatters two more MLAs missing | ಕಗ್ಗಂಟಾದ ವಿಜಯ್‌ ಹಾದಿ ಇನ್ನೂ ಇಬ್ಬರು ಶಾಸಕರ ಕೊರತೆ ಎಲ್ಲರ ಚಿತ್ತ ಸಿವಿಕೆಯತ್ತ | Speed News Kannada

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗ ಹೊರಹೊಮ್ಮಿದ್ದರೂ ಟಿವಿಕೆ ಪಕ್ಷದ ಮುಖಂಡ ವಿಜಯ್‌ ಅವರಿಗೆ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ. 234 ಸದಸ್ಯಬಲದ ವಿಧಾನಸಭೆಯಲ್ಲಿ ಟಿವಿಕೆ 108 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ವಿಜಯ್‌ ಎರಡು ಸ್ಥಾನಗಳಲ್ಲಿ ಗೆದ್ದಿದ್ದು 107 ಸ್ಥಾನಗಳನ್ನು ಪರಿಗಣಿಸಲಾಗುತ್ತದೆ. 
234 ಸದಸ್ಯಬಲದ ವಿಧಾನಸಭೆಯಲ್ಲಿ ಟಿವಿಕೆ 108 ಕ್ಷೇತ್ರಗಳಲ್ಲಿ ಗೆದ್ದಿದ್ದರೂ 107 ಸ್ಥಾನಗಳನ್ನು ಮಾತ್ರ ಪರಿಗಣಿಸುವುದರಿಂದ ಸರ್ಕಾರ ರಚನೆಗೆ ಇನ್ನೂ 11 ಸ್ಥಾನಗಳ ಅಗತ್ಯ ಇದೆ. ಕಾಂಗ್ರೆಸ್‌ನ 5, ಸಿಪಿಎಂ, ಸಿಪಿಐನ ತಲಾ ಇಬ್ಬರು ಶಾಸಕರು ಬೆಂಬಲ ಸೂಚಿಸಿದ್ದು, 116 ಶಾಸಕರ ಬೆಂಬಲ ಸಿಕ್ಕಂತಾಗಿದೆ.
ವಿಜಯ್‌ ಗೆ ಇನ್ನೂ ಇಬ್ಬರು ಶಾಸಕರ ಕೊರತೆ ಉಂಟಾಗಿದೆ. ಟಿಟಿವಿ ದಿನಕರನ್ ಅವರ ಎಎಂಎಂಕೆ ಮತ್ತು ಇಂಡಿಯನ್ ಯೂನಿಯನ್‌ ಮುಸ್ಲಿಂಲೀಗ್ (ಐಯುಎಂಎಲ್) ಟಿವಿಕೆಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ವಿಜಯ್ ಅವರಿಗೆ ತೊಡಕಾಗಿ ಪರಿಣಮಿಸಿದೆ. 
ಇಬ್ಬರು ಶಾಸಕರನ್ನು ಹೊಂದಿರುವ ಸಿವಿಕೆ ಪಕ್ಷ ಮಾತ್ರ ಬೆಂಬಲ ನೀಡುವ ಸಾಧ್ಯತೆಗಳಿವೆ. ಆದರೆ ಸಿವಿಕೆ ಭಾರಿ ಬೇಡಿಕೆಗಳನ್ನು ಮುಂದಿಟ್ಟಿರುವುದು ವಿಜಯ್‌ ಗೆ ತೊಡಕಾಗಿ ಪರಿಣಮಿಸಿದೆ. ಬಲ್ಲಮೂಲಗಳ ಪ್ರಕಾರ, ವಿಸಿಕೆ ಪಕ್ಷ ಡಿಸಿಎಂ ಹುದ್ದೆ ಮತ್ತು ತೆರವಾಗುವ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಪಟ್ಟುಹಿಡಿದಿದೆ. ಸಿವಿಕೆ ಬೆಂಬಲ ಸಿಕ್ಕರೆ ವಿಜಯ್‌ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗುತ್ತದೆ. 
ಸಿವಿಕೆ ಪಕ್ಷದ ಮುಖ್ಯಸ್ಥ ಥೋಲ್‌ ತಿರುಮಾವಲವನ್ ಅವರ ಜತೆ ವಿಜಯ್‌ ಇಂದು ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಅವರನ್ನು ಭೇಟಿ ಮಾಡಿ ಬೆಂಬಲ ಕೋರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫಲಿತಾಂಶ ಹೊರಬಂದ ನಂತರ ವಿಜಯ್‌ ಲೋಕ ಭವನದಲ್ಲಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಮೂರು ಬಾರಿ ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಆದರೆ  ತಮ್ಮ ಬಳಿ ಸರ್ಕಾರ ರಚಿಸಲು ಅಗತ್ಯವಾದಷ್ಟು ಶಾಸಕರ ಬೆಂಬಲವಿದೆ ಎಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ.  
ಬಹುಮತವನ್ನು ಸಾಬೀತುಪಡಿಸಲು ಶಾಸಕರ ಬೆಂಬಲ ಪತ್ರಗಳನ್ನು ನೀಡಬೇಕು ಎಂದು ರಾಜ್ಯಪಾಲರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.