2026-04-23 03:26:20

US Navy Secretary fired | ಪೆಂಟಗನ್‌ನಲ್ಲಿ ಆಂತರಿಕ ಕಲಹ ಅಮೆರಿಕ ನೌಕಾಪಡೆಯ ಕಾರ್ಯದರ್ಶಿ ವಜಾ | Speed News Kannada

 US Navy Secretary fired | ಪೆಂಟಗನ್‌ನಲ್ಲಿ ಆಂತರಿಕ ಕಲಹ ಅಮೆರಿಕ ನೌಕಾಪಡೆಯ ಕಾರ್ಯದರ್ಶಿ ವಜಾ | Speed News Kannada

ವಾಷಿಂಗ್ಟನ್: ಪೆಂಟಗನ್‌ನಲ್ಲಿ ಬಹಳ ಸಮಯದಿಂದ ನಡೆಯುತ್ತಿದ್ದ ಆಂತರಿಕ ಕಲಹದ ಬಳಿಕ ನೌಕಾಪಡೆಯ ಕಾರ್ಯದರ್ಶಿ ಜಾನ್ ಫೆಲನ್ ಅವರನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ. ಪೆಂಟಗನ್ ನಾಯಕರೊಂದಿಗೆ ತಿಂಗಳುಗಳಿಂದ ನಡೆಯುತ್ತಿರುವ ಒಳಜಗಳ ಮತ್ತು ನೌಕಾಪಡೆಯ ಹಡಗು ನಿರ್ಮಾಣ ಕಾರ್ಯಕ್ರಮವನ್ನು ಹೇಗೆ ಪುನರುಚ್ಚೇತನಗೊಳಿಸಬೇಕು ಎಂಬುದರ ಕುರಿತಾದ ಭಿನ್ನಾಭಿಪ್ರಾಯಗಳ ನಂತರ ಬುಧವಾರ ಈ ಬೆಳವಣಿಗೆಯಾಗಿದೆ.
ಫೆಲನ್‌ ಅವರು ಪೆಂಟಗನ್ ಮತ್ತು ಟ್ರಂಪ್ ಆಡಳಿತವನ್ನು ತಕ್ಷಣವೇ ಜಾರಿಗೆ ಬರುವಂತೆ ತೊರೆಯುತ್ತಿದ್ದಾರೆ ಎಂದು ಪೆಂಟಗನ್ನ ಮುಖ್ಯ ವಕ್ತಾರ ಸೀನ್ ಪಾರ್ನೆಲ್ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೌಕಾಪಡೆಯನ್ನು ಮುನ್ನಡೆಸುತ್ತಿದ್ದ ಫೆಲನ್ ಟ್ರಂಪ್-ಅವರ ಉದ್ದೇಶಿತ ಅತ್ಯಾಧುನಿಕ ಯುದ್ಧನೌಕೆ ಸೇರಿದಂತೆ ಹೊಸ ಹಡಗುಗಳಲ್ಲಿ ಪ್ರಮುಖ ಹೂಡಿಕೆಯಾದ ಗೋಲ್ಡನ್ ಸ್ಟ್ರೀಟ್ ಅನ್ನು ಬೆಂಬಲಿಸಿದ್ದರು. ಆದರೆ, ಫೆಲನ್ ಅವರು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ರೆತ್ ಮತ್ತು ಉಪ ರಕ್ಷಣಾ ಕಾರ್ಯದರ್ಶಿ ಸ್ಟೀಫನ್ ಫೀನ್‌‌ಬರ್ಗ್ ಸೇರಿದಂತೆ ಪೆಂಟಗನ್ನ ಹಿರಿಯ ನಾಯಕರೊಂದಿಗೆ ಹೊಂದಿದ್ದ ಭಿನ್ನಾಭಿಪ್ರಾಯವು ಅವರಿಗಿದೆ ಮುಳುವಾಯಿತು ಎಂದು ವರದಿ ತಿಳಿಸಿದೆ.
ಸೇವೆಯಲ್ಲಿದ್ದಾಗಲೇ ನೌಕಾಪಡೆಯ ಉನ್ನತ ಹುದ್ದೆ ತೊರೆದ ಮೊದಲ ಅಧಿಕಾರಿ ಫೆಲನ್ ಆಗಿದ್ದಾರೆ. ಆದರೂ ಅವರು ರಕ್ಷಣಾ ಕಾರ್ಯದರ್ಶಿಯೊಂದಿಗೆ ಘರ್ಷಣೆ ಮಾಡಿದ ಎರಡನೇ ವ್ಯಕ್ತಿ. ಹೆಗ್ರೆತ್ ಬಡ್ತಿಗಳು ಮತ್ತು ಇತರ ಹಲವಾರು ವಿಷಯಗಳ ಬಗ್ಗೆ ಸೇನಾ ಕಾರ್ಯದರ್ಶಿ ಡೇನಿಯಲ್ ಪಿ. ಡ್ರಿಸ್ಕಾಲ್ ಅವರೊಂದಿಗೆ ಮುಖಾಮುಖಿಯಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಹೆಗ್ರೆತ್ ಅವರು ಸೇನೆಯ ಮುಖ್ಯಸ್ಥ ಜನರಲ್ ರಾಂಡಿ ಜಾರ್ಜ್ ಅವರನ್ನು ವಜಾಗೊಳಿಸಿದರು.
ನೌಕಾಪಡೆಯ ಕಾರ್ಯದರ್ಶಿಗೆ ನಿಯೋಜಿತ ಪಡೆಗಳ ಮೇಲ್ವಿಚಾರಣೆಯ ಪಾತ್ರವಿಲ್ಲ. ಹಾಗಾಗಿ, ಇರಾನ್ ವಿರುದ್ಧದ ಯುದ್ಧ ಅಥವಾ ಇರಾನಿನ ಬಂದರುಗಳ ದಿಗ್ಧಂಧನ ಮಾಡುವ ಅಥವಾ ಹೊರ್ಮುಜ್ ಜಲಸಂಧಿಯನ್ನು ತೆರೆಯುವ ಅಮೆರಿಕ ನೌಕಾಪಡೆಯ ಕಾರ್ಯಾಚರಣೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯ ಇಲ್ಲ. ನೌಕಾಪಡೆಯ ಉನ್ನತ ಅಧಿಕಾರಿಯಾಗಿ ಭವಿಷ್ಯದ ನೌಕಾ ಮತ್ತು ಮೆರೈನ್ ಕಾರ್ಪ್ಸ್ ಪಡೆಯ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡುವುದು ಅವರ ಕೆಲಸವಾಗಿತ್ತು. ಆದರೆ, ಈ ಬೆಳವಣಿಗೆಯು ನೌಕಾಪಡೆಗೆ ಇರಾನ್ನಲ್ಲಿ ಬಳಸಲು ಬೇಕಾಗಿರುವ ಟೊಮಾಹಾಕ್ ಕ್ಷಿಪಣಿಗಳು ಮತ್ತು ಉನ್ನತ-ಮಟ್ಟದ ವಾಯು ರಕ್ಷಣಾ ವ್ಯವಸ್ಥೆಗಳ ದಾಸ್ತಾನು ಮರುಪೂರಣವನ್ನು ಕಷ್ಟಕರವಾಗಿಸಬಹುದು ಎಂದು ವರದಿ ತಿಳಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.