2026-03-07 06:35:18

US exempts beef tomatoes oranges imported from India from duty | ಭಾರತದಿಂದ ಆಮದಾಗುವ ಗೋಮಾಂಸ ಟೊಮೆಟೊ ಕಿತ್ತಳೆಗೆ ಅಮೆರಿಕದಲ್ಲಿ ಸುಂಕ ವಿನಾಯಿತಿ | Speed News Kannada

US exempts beef tomatoes oranges imported from India from duty | ಭಾರತದಿಂದ ಆಮದಾಗುವ ಗೋಮಾಂಸ ಟೊಮೆಟೊ ಕಿತ್ತಳೆಗೆ ಅಮೆರಿಕದಲ್ಲಿ ಸುಂಕ ವಿನಾಯಿತಿ | Speed News Kannada

ವಾಷಿಂಗ್ಟನ್: ಹಲವು ದೇಶಗಳ ಆಮದು ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ಬೆನ್ನಲ್ಲೇ, ಟ್ರಂಪ್  ವ್ಯಾಪಾರ ಕಾಯ್ದೆಯನ್ನು ಬಳಸಿಕೊಂಡು ಎಲ್ಲ ದೇಶಗಳ ಮೇಲೆ ಶೇ 10 ರಷ್ಟು ಸುಂಕವನ್ನು ವಿಧಿಸಿದ್ದಾರೆ. 
ಫೆಬ್ರುವರಿ 24ರಿಂದ ಈ ಆದೇಶ ಜಾರಿಗೆ ಬರಲಿದ್ದು, ಇದರೊಂದಿಗೆ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳು ಶೇ. 10ರಷ್ಟು ಕಡಿಮೆ ಪ್ರತಿಸುಂಕ ಎದುರಿಸಬೇಕಾಗುತ್ತದೆ. ಸದ್ಯ, ಈವರೆಗೆ ಇದು ಶೇ 18ರಷ್ಟಿತ್ತು. ಐದು ತಿಂಗಳ ಅವಧಿಗೆ ಶೇ10ರಷ್ಟು ತಾತ್ಕಾಲಿಕ ಆಮದು ಸುಂಕವನ್ನು ವಿಧಿಸುತ್ತಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ.
ಸುಂಕದಿಂದ ವಿನಾಯಿತಿ ಪಡೆದ ಉತ್ಪನ್ನಗಳು:
ಗೋಮಾಂಸ, ಟೊಮೆಟೊ, ಕಿತ್ತಳೆ ಸೇರಿದಂತೆ ಕೆಲವು ಕೃಷಿ ಉತ್ಪನ್ನಗಳು, ಔಷಧಗಳು ಮತ್ತು ಔಷಧೀಯ ಪದಾರ್ಥಗಳು ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೂ ವಿನಾಯಿತಿ ನೀಡಲಾಗಿದೆ.
ಇದಲ್ಲದೆ, ಪ್ರಯಾಣಿಕ ವಾಹನಗಳು, ಕೆಲವು ಲಘು ಟ್ರಕ್‌ಗಳು, ಕೆಲವು ಮಧ್ಯಮ ಮತ್ತು ಭಾರೀ ವಾಹನಗಳು, ಬಸ್‌ಗಳು ಮತ್ತು ಬಿಡಿಭಾಗಗಳು ಹಾಗೂ ವೈಮಾನಿಕ ಉತ್ಪನ್ನಗಳು, ಪುಸ್ತಕಗಳು, ದೇಣಿಗೆಗೆ ಶುಲ್ಕ ವಿನಾಯಿತಿ ಇದೆ.
ಭಾರತೀಯ ಉತ್ಪನ್ನಗಳ ಮೇಲೆ ಈಗ ಶೇ. 10ರಷ್ಟು ಸುಂಕ ವಿಧಿಸಲಾಗುತ್ತಿದೆಯಾದರೂ ಉಕ್ಕು, ಅಲ್ಯೂಮಿನಿಯಂ, ತಾಮ್ರದ ಮೇಲೆ ಶೇ. 50ರಷ್ಟು ಸುಂಕ ಮುಂದುವರಿಯುತ್ತದೆ. ಕೆಲವು ಆಟೊಮೊಬೈಲ್ ಬಿಡಿಭಾಗಗಳ ಮೇಲೆ ಶೇ. 25ರಷ್ಟು ಸುಂಕ ಮುಂದುವರಿಯುತ್ತದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.