ಏಪ್ರಿಲ್ 1ರಂದು ಸಾಮಾನ್ಯವಾಗಿ ಮೂರ್ಖರ ದಿನ ಎಂದು ಕರೆಯುವ ದಿನ ಅದ್ರೆ..ಈ ದಿನ ಇಂಟೆಲಿಜೆನ್ಸ್ ಡೇ ಆಗಿ ಆಚರಿಸೋಣ ಎಂದು ರಿಯಲ್ ಸ್ಟಾರ್ ಉಪ್ಪಿ ಕರೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಸುದ್ದೀಗೋಷ್ಠಿ ನಡೆದ ಪ್ರಜಾಕೀಯ ಪಕ್ಷದ ವೆಬ್‌ಸೈಟ್ ಓಪನ್ ಮಾಡಿದ್ದಾರೆ ನಟ ಉಪೇಂದ್ರ.
“ನಾನು ಮೊದಲು ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದೆ. ಅವರು ಭರವಸೆಗಳನ್ನು ನೀಡಿದರು. ಆದರೆ ಟಿಕೆಟ್ ವಿಚಾರದಲ್ಲಿ ತಾವು ನಿರ್ಧಾರ ಮಾಡುತ್ತೇವೆ ಎಂದಾಗ, ನಾನು ಅಲ್ಲಿಂದ ಹೊರಬಂದು ನನ್ನದೇ ಮಾರ್ಗ ಹಿಡಿದೆ,” ನಂತರ ಪ್ರಜಾಕೀಯ ತತ್ವದಡಿ ತಮ್ಮ ರಾಜಕೀಯ ಚಟುವಟಿಕೆಗಳನ್ನ ಆರಂಭಿಸಿ, ಜನರೇ ಅಭ್ಯರ್ಥಿಗಳನ್ನ ಆಯ್ಕೆ ಮಾಡಬೇಕು ಎಂಬ ವ್ಯವಸ್ಥೆಯನ್ನು ರೂಪಿಸಿದ್ದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ “ದಿ ರಿಯಲ್ ಪ್ರಜಾಕೀಯ” ಎಂಬ ವೆಬ್‌ಸೈಟ್ ಅನ್ನು ಉಪೇಂದ್ರ ಬಿಡುಗಡೆ ಮಾಡಿದರು. ಈ ವೆಬ್‌ಸೈಟ್ ಮೂಲಕ ಜನರು ಲಾಗಿನ್ ಆಗಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು. ಉದ್ಯೋಗ, ಆರೋಗ್ಯ, ಗ್ರಾಮಪಂಚಾಯಿತಿ, ನಗರಸಭೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುವ ಅವಕಾಶ ಇದೆ.
ಪ್ರಮುಖವಾಗಿ, ಈ ವೇದಿಕೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವವರಿಗೆ ಆರು ತಿಂಗಳ ಅವಧಿ ನೀಡಲಾಗುತ್ತದೆ. ನಂತರ ಜನರು ಅವರ ಪರಿಹಾರಗಳಿಗೆ ರೇಟಿಂಗ್ ನೀಡುತ್ತಾರೆ. ಹೆಚ್ಚು ರೇಟಿಂಗ್ ಪಡೆದವರು ಅಭ್ಯರ್ಥಿಗಳಾಗಿ ಆಯ್ಕೆಯಾಗುತ್ತಾರೆ. ಕಡಿಮೆ ರೇಟಿಂಗ್ ಪಡೆದವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗುತ್ತಿದ್ದು, ಅಂತಿಮವಾಗಿ ಜನರೇ ಅಭ್ಯರ್ಥಿಗಳ ಆಯ್ಕೆಯನ್ನು ನಿರ್ಧರಿಸುವ ವ್ಯವಸ್ಥೆಯನ್ನು ಉಪೇಂದ್ರ ಪರಿಚಯಿಸಿದ್ದಾರೆ. ಪ್ರತಿಯೊಬ್ಬರೂ ಯಾರಾದರೂ ಮೇಲೊಂದು ಅವಲಂಬನೆ ಇಟ್ಟುಕೊಳ್ಳುವ ಬದಲು ಸ್ವಾವಲಂಬಿಯಾಗಬೇಕು ಎಂಬ ಸಂದೇಶವನ್ನ ನೀಡಿದ್ದಾರೆ.