2026-03-07 06:36:29

Union Minister Prahlad Joshi | ಡಿಜಿಟಲ್ ಕರೆನ್ಸಿ ಬಳಸಿ ಪಡಿತರ ವಿತರಣೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ | Speed News Kannada

Union Minister Prahlad Joshi | ಡಿಜಿಟಲ್ ಕರೆನ್ಸಿ ಬಳಸಿ ಪಡಿತರ ವಿತರಣೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ | Speed News Kannada

ನವದೆಹಲಿ: ಪಾರದರ್ಶಕತೆ ಮತ್ತು ತ್ವರಿತ ಸೇವೆಗಾಗಿ ಡಿಜಿಟಲೀಕರಣಕ್ಕೆ ಒತ್ತು ನೀಡಿರುವ ಕೇಂದ್ರ ಸರ್ಕಾರ, ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಡಿಜಿಟಲೀಕರಣದ ಮಹತ್ಸಾಧನೆಗೆ ಹೊಸದೊಂದು ಮುನ್ನುಡಿ ಬರೆದಿದೆ. ಇದೇ ಮೊದಲ ಬಾರಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತವಾಗಿ "ಡಿಜಿಟಲ್ ಆಹಾರ ಕೂಪನ್" ವ್ಯವಸ್ಥೆ ರೂಪದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.
ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ಸಾಮಾಜಿಕ-ಸಾರ್ವತ್ರಿಕ ವಲಯದ ಯೋಜನೆಯಲ್ಲಿ ಇದೇ ಮೊದಲ ಬಾರಿ ಡಿಜಿಟಲ್ ಕರೆನ್ಸಿ ಬಳಸುವ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತವಾಗಿ 'ಡಿಜಿಟಲ್ ಆಹಾರ ಕರೆನ್ಸಿ' ವಿನೂತನ ವ್ಯವಸ್ಥೆ ಜಾರಿಗೊಳಿಸಿದೆ. 
ಇದರಿಂದ ನ್ಯಾಯ ಬೆಲೆ ಅಂಗಡಿಯವರಿಗೆ ತತ್ ಕ್ಷಣವೇ ಕಮಿಷನ್ ಹಂಚಿಕೆ, ಫಲಾನುಭವಿಗಳಿಗೆ ಕ್ಷಣಾರ್ಧದಲ್ಲೇ ರೇಷನ್ ವಿತರಣೆಯಾಗಲಿದೆ. ಕೇಂದ್ರ ಸರ್ಕಾರ, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತ 'ಡಿಜಿಟಲ್ ಆಹಾರ ಕರೆನ್ಸಿ' ವಿನೂತನ ವ್ಯವಸ್ಥೆಯನ್ನು ಇಂದಿನಿಂದ ಪ್ರಥಮವಾಗಿ ಗುಜರಾತ್ ಅಲ್ಲಿ ಆರಂಭಿಸಿದೆ. 
ಡಿಜಿಟಲ್ ಕರೆನ್ಸಿ ಬಳಸಿ ಪಡಿತರ ವಿತರಣೆ ಇದೇ ಮೊದಲು: ಫಲಾನುಭವಿಗಳ ಡಿಜಿಟಲ್ ವ್ಯಾಲೆಟ್‌ಗಳಿಗೆ ಪ್ರೋಗ್ರಾಮೆಬಲ್ ಡಿಜಿಟಲ್ ಕರೆನ್ಸಿಯಾಗಿ ನೇರವಾಗಿ ಜಮಾ ಮಾಡಲಾಗುತ್ತದೆ. ಇದನ್ನು ಪಿಡಿಎಸ್ ಅಡಿಯಲ್ಲಿ ಆಹಾರ ಧಾನ್ಯ ಖರೀದಿಸಲು ಸಹ ಬಳಸಬಹುದು. ಇದು ನೈಜ-ಸಮಯದ ಮೇಲ್ವಿಚಾರಣೆ ಮತ್ತು ಸುರಕ್ಷಿತ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. ಅಲ್ಲದೆ, ಯಾವುದೇ ಅವ್ಯವಹಾರಕ್ಕೂ ಅಸ್ಪದವಾಗುವುದಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ವಿವರಿಸಿದರು. QR-ಕೂಪನ್ ಕೋಡ್: ಪಡಿತರ ಫಲಾನುಭವಿಗಳ ಡಿಜಿಟಲ್ ವ್ಯಾಲೆಟ್‌ಗಳು ಪ್ರೋಗ್ರಾಮೆಬಲ್ ಡಿಜಿಟಲ್ ರೂಪಾಯಿ ಹೊಂದಿರುತ್ತವೆ. ಫಲಾನುಭವಿಗಳ ಅನುಕೂಲಕ್ಕಾಗಿ ಪಿಡಿಎಸ್ ಅಡಿ ಆಹಾರ ಧಾನ್ಯ ಖರೀದಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ತಡೆರಹಿತ QR ಕೋಡ್, ಕೂಪನ್ ಕೋಡ್ ಆಧಾರಿತ ವಹಿವಾಟನ್ನು ಸಕ್ರಿಯಗೊಳಿಸುತ್ತದೆ ಎಂದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.