2026-03-07 08:41:58

Unexpected Check at Kalaburagi Central Jail | ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಅನಿರೀಕ್ಷಿತ ತಪಾಸಣೆ ಸ್ಮಾರ್ಟ್‌ ಫೋನ್‌ ಏರ್‌ ಬಡ್ಸ್‌ ಪತ್ತೆ | Speed News Kannada

Unexpected Check at Kalaburagi Central Jail | ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಅನಿರೀಕ್ಷಿತ ತಪಾಸಣೆ  ಸ್ಮಾರ್ಟ್‌ ಫೋನ್‌ ಏರ್‌ ಬಡ್ಸ್‌ ಪತ್ತೆ | Speed News Kannada

ಕಲಬುರಗಿ: ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ನಡೆಸಿದಾಗ ಸುವ 3 ಸ್ಮಾರ್ಟ್‌ ಫೋನ್‌ ಹಾಗೂ 2 ಏರ್‌ ಬಡ್ಸ್‌ಗಳು ಪತ್ತೆಯಾಗಿವೆ. ಪೊಲೀಸ್‌ ಅಧಿಕಾರಿಗಳು ಅನಿರೀಕ್ಷಿತ ತಪಾಸಣೆ ನಡೆಸಿದಾಗ ಈ ವಸ್ತುಗಳು ಪತ್ತೆಯಾಗಿವೆ.
ಶೌಚಾಲಯವೇ ಇವರ ಸೇಫ್ ಲಾಕರ್! 
ಪೊಲೀಸರು ಜೈಲಿನ ಮೂಲೆ ಮೂಲೆಯನ್ನು ಜಾಲಾಡಿದಾಗ ಯಾರಿಗೂ ಅನುಮಾನ ಬಾರದಂತೆ ಕೈದಿಗಳು ಪ್ಲಾನ್ ಮಾಡಿ, ಜೈಲಿನ ಶೌಚಾಲಯದ ಒಳಗೆ ತಮ್ಮ ಮೊಬೈಲ್‌ ಹಾಗೂ ಏರ್‌ ಬಡ್ಸ್‌ಗಳನ್ನು ಬಚ್ಚಿಟ್ಟಿದ್ಧಾರೆ.   
ಜೈಲಿನ ವಾರ್ಡನ್ ಬಸವರಾಜ, ಅಧೀಕ್ಷಕ ರಾಕೇಶ್ ಸೇರಿದಂತೆ 42 ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಇತ್ತೀಚೆಗೆ ಅನಿರೀಕ್ಷಿತ ತಪಾಸಣೆ ನಡೆಸಿದ್ದರು. ಈ ವೇಳೆ ಜೈಲಿನ ವಿಚಾರಣಾಧೀನ ಕೈದಿಗಳಾದ ಶ್ರೀನಿವಾಸ ಗಣೇಶ್, ಪ್ರದೀಪ್ ಅಲಿಯಾಸ್ ದಾಸರಹಳ್ಳಿ ಪ್ರದೀಪ್ ಹಾಗೂ ದಿನೇಶ್ ಅಲಿಯಾಸ್ ಡಿಯೋ ದಿನಿ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಹೊಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೈಲಿನ ನಿಯಮಗಳನ್ನು ಗಾಳಿಗೆ ತೂರಿ, ಹೊರಜಗತ್ತಿನ ಜೊತೆ ಸಂಪರ್ಕ ಸಾಧಿಸಲು ಸ್ಮಾರ್ಟ್‌ ಫೋನ್‌ಗಳನ್ನು ಬಳಸುತ್ತಿದ್ದರು ಎಂಬುದು ತನಿಖೆಯಲ್ಲಿ ದೃಡವಾಗಿದೆ. ಈ ಸಂಬಂಧ ಆರೋಪಿಗಳ ವಿರುದ್ದ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.