2026-03-07 06:38:13

Ukraine after the Russian invasion | 2022 ರಷ್ಯಾ ಆಕ್ರಮಣ ಬಳಿಕ ಉಕ್ರೇನ್‌ನಲ್ಲಿ ಏನಾಗಿದೆ ಎಂಬುದರ ಬಗ್ಗೆ ವಿಶ್ವಸಂಸ್ಥೆ ವರದಿ | Speed News Kannada

Ukraine after the Russian invasion | 2022 ರಷ್ಯಾ ಆಕ್ರಮಣ ಬಳಿಕ ಉಕ್ರೇನ್‌ನಲ್ಲಿ ಏನಾಗಿದೆ ಎಂಬುದರ ಬಗ್ಗೆ ವಿಶ್ವಸಂಸ್ಥೆ ವರದಿ | Speed News Kannada

ಜಗತ್ತಿನಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದ್ದು ರಷ್ಯಾ & ಉಕ್ರೇನ್ ಯುದ್ಧವು ವಿನಾಶ ಸೃಷ್ಟಿ ಮಾಡುತ್ತಿದೆ. ನೋಡ ನೋಡುತ್ತಲೇ ಜಗತ್ತಿನ ಪ್ರತಿಯೊಂದು ದೇಶವೂ ಈ ಯುದ್ಧದ ಪರಿಣಾಮ ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದು, ಜಾಗತಿಕ ಆರ್ಥಿಕತೆ ಕೂಡ ಈಗ ಸಮಸ್ಯೆ ಎದುರಿಸುತ್ತಾ ಇದೆ.ಮಧ್ಯಪ್ರಾಚ್ಯ ಭಾಗದಲ್ಲಿ ರಷ್ಯಾ & ಉಕ್ರೇನ್ ಯುದ್ಧದ ಕಾರಣಕ್ಕೆ ಹಲವು ಗಲಾಟೆಗಳು ಕೂಡ ಶುರು ಆಗಿಬಿಟ್ಟಿವೆ.
ರಷ್ಯಾ ಮತ್ತು ಉಕ್ರೇನ್ ಯುದ್ಧ ಶುರುವಾಗಿ 5ನೇ ವರ್ಷಕ್ಕೆ ಎಂಟ್ರಿ ಕೊಡುತ್ತಿರುವ ಸಮಯದಲ್ಲೇ ಈಗ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದೆ ವಿಶ್ವಸಂಸ್ಥೆ. ಅಂದಹಾಗೆ 2022 ಫೆಬ್ರವರಿ ತಿಂಗಳಲ್ಲಿ ರಷ್ಯಾ ಸೇನೆಯು ಆಕ್ರಮಣ ಮಾಡಿದ ನಂತರ, ಉಕ್ರೇನ್‌ನಲ್ಲಿ 5,000 ಕ್ಕೂ ಹೆಚ್ಚು ಮಹಿಳೆಯರು ಹಾಗೂ ಯುವತಿಯರು ಮೃತಪಟ್ಟಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದೆ ವಿಶ್ವಸಂಸ್ಥೆಯ ವರದಿ.

ವಿಶ್ವಸಂಸ್ಥೆ ಕೊಟ್ಟ ವರದಿಯಿಂದ ಆಘಾತ
ಕೆಲ ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಜಾ ಪಟ್ಟಿಯಲ್ಲಿ ಯುದ್ಧವನ್ನು ನಿಲ್ಲಿಸಲು ಯಶಸ್ವಿಯಾಗಿದ್ದೇನೆ ಅಂತಾ ಹೇಳಿಕೊಂಡಿದ್ದರು. ಮತ್ತೊಂದು ಕಡೆ ಗಾಜಾ ಶಾಂತಿ ಮಂಡಳಿ ಸ್ಥಾಪನೆ ಮಾಡಿರುವ ಟ್ರಂಪ್ ಅವರು ಉಕ್ರೇನ್ ಯುದ್ದ ನಿಲ್ಲಿಸಲು ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಈಗ ಮತ್ತೆ ಮತ್ತೆ ರಷ್ಯಾ & ಉಕ್ರೇನ್ ಬಡಿದಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಜೆಗಳು ಸಾಯುತ್ತಿದ್ದಾರೆ, ಎನ್ನುವ ಆಕ್ರೋಶ ಹೆಚ್ಚಾಗುತ್ತಾ ಇದೆ. ಇಂತಹ ಸಮಯದಲ್ಲೇ ವಿಶ್ವಸಂಸ್ಥೆ ನೀಡಿರುವ ವರದಿ ಕೂಡ ದೊಡ್ಡ ಆಘಾತಕ್ಕೆ ಕಾರಣವಾಗಿದೆ.

ಜಗತ್ತಿನಾದ್ಯಂತ ತೀವ್ರ ಆಕ್ರೋಶದ ಅಲೆ
ಉಕ್ರೇನ್ ಈ ಯುದ್ಧದಲ್ಲಿ ಗೆದ್ದರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ದೊಡ್ಡ ಗೆಲುವು ಸಿಗಲಿದ್ದು, ಪ್ರಮುಖವಾಗಿ ಯುರೋಪ್ ಖಂಡದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಆರಂಭದಲ್ಲಿ ಈ ಕಾರಣಕ್ಕೆ ಅಮೆರಿಕ & ಯುರೋಪ್ ಸೇರಿದಂತೆ ಎಲ್ಲಾ ಪಾಶ್ಚಿಮಾತ್ಯ ದೇಶಗಳು ಬೆಂಬಲ ನೀಡಿ, ಆರ್ಥಿಕವಾಗಿ ಕೂಡ ಉಕ್ರೇನ್‌ಗೆ ಸಹಾಯ ಮಾಡಿದ್ದವು. ಆದರೆ ನೋಡ ನೋಡುತ್ತಲೇ ಎಲ್ಲವೂ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದು, ಈಗ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆದಿದೆ.
ಅದ್ರಲ್ಲೂ 2022 ಫೆಬ್ರವರಿ ತಿಂಗಳಲ್ಲಿ ರಷ್ಯಾ ಸೇನೆ ಆಕ್ರಮಣ ಮಾಡಿದ ನಂತರ ಉಕ್ರೇನ್ನಲ್ಲಿ 5,000ಕ್ಕೂ ಹೆಚ್ಚು ಮಹಿಳೆಯರು & ಯುವತಿಯರು ಮೃತಪಟ್ಟಿದ್ದಾರೆ ಎಂಬ ವಿಶ್ವಸಂಸ್ಥೆ ವರದಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಆದಷ್ಟು ಬೇಗನೇ ಈ ಯುದ್ಧವನ್ನ ನಿಲ್ಲಿಸಬೇಕು ಎಂಬ ಒತ್ತಾಯ ಕೂಡ ಇದೀಗ ಜೋರಾಗಿದ್ದು, ನೋಡ ನೋಡುತ್ತಲೇ ಈ ಯುದ್ಧ ಇನ್ನಷ್ಟು ದೇಶಗಳ ನಡುವೆ ಬೆಂಕಿ ಹಚ್ಚುವ ಕೆಲಸ ಕೂಡ ಮಾಡುತ್ತಿದೆ ಎಂದು ರಷ್ಯಾ ಮತ್ತು ಉಕ್ರೇನ್ ಯುದ್ಧದ ಬಗ್ಗೆ ಇಡೀ ಜಗತ್ತು ಅಸಮಾಧಾನದ ಭಾವನೆ ಹೊರ ಹಾಕುತ್ತಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.