2026-07-23 09:08:57

Two year old child dies after falling into sump while playing | ಆಟವಾಡುತ್ತ ಸಂಪ್ ಗೆ ಬಿದ್ದ ಎರಡೂವರೆ ವರ್ಷದ ಮಗು ದಾರುಣ ಸಾವು | Speed News Kannada

Two year old child dies after falling into sump while playing | ಆಟವಾಡುತ್ತ ಸಂಪ್ ಗೆ ಬಿದ್ದ ಎರಡೂವರೆ ವರ್ಷದ ಮಗು ದಾರುಣ ಸಾವು | Speed News Kannada

ಬೆಂಗಳೂರು: ಬೆಂಗಳೂರಿನಲ್ಲಿ ಘೋರ ದುರಂತ ಸಂಭವಿಸಿದೆ. ಮಕ್ಕಳು ಆಟವಾಡುತ್ತಿದ್ದಾರೆ ಎಂದುಕೊಂಡು ತಂದೆ-ತಾಯಿ ತೋರುವ ಸಣ್ಣದೊಂದು ನಿರ್ಲಕ್ಷ ಎಂಥಹ ದುರಂತಕ್ಕೆ ಕಾರಣವಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಮನೆ ಬಳಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ನೀರಿನ ಸಂಪ್ ಗೆ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. ಚಿರಾಗ್ ಮೃತ ಮಗು. ಅಣ್ಣಯ್ಯ ಹಾಗೂ ಋತು ದಂಪತಿಯ ಮಗು.
ದಂಪತಿ ಸಂಬಂಧಿಕರ ಮದುವೆಗೆ ತೆರಳಲು ಸಿದ್ದರಾಗುತ್ತಿದ್ದರು. ಕಾರು ತೊಳೆಯಲು ಸಂಪನ್ ಕ್ಯಾಪ್ ತೆರೆದು ಅಣ್ಣಯ್ಯ ಮನೆಯ ಒಳಗೆ ತೆರಳಿದ್ದರು. ಈ ವೇಳೆ ಅಲ್ಲಿಯೇ ಆಟವಾಡುತ್ತಿದ್ದ ಮಗು ಸಂಪ್ ಒಳಗೆ ಬಿದ್ದಿದೆ. ಮನೆಯ ಹೊರಗೆ ಬಂದು ಅಣ್ಣಯ್ಯ ನೋಡುವಷ್ಟರಲ್ಲಿ ಮಗು ಸಂಪ್ ನೀರೆಗೆ ಬಿದ್ದು ಮೃತಪಟ್ಟಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.