ಬೆಂಗಳೂರು, ಮಾ.4-ಈಗ ಪರೀಕ್ಷಾ ಸಮಯ... ನಗರದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋಗಿದ್ದು, ಪೋಷಕರು ಆತಂಕಗೊಂಡಿದ್ದಾರೆ. ವಿದ್ಯಾರಣ್ಯಪುರದ ಎಂಎಸ್‌ಪಾಳ್ಯದ ನಿವಾಸಿ ತನಿಷ್ಕಾ (19) ದ್ವಿತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಜ.31 ರಂದು ಯಲಹಂಕದಲ್ಲಿರುವ ಕಾಲೇಜಿಗೆ ಹೋದವರು ನಾಪತ್ತೆಯಾಗಿದ್ದಾಳೆ.
ಈಕೆಯೊಂದಿಗೆ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ತೇಜಸ್ವಿನಿ (18) ಸಹ ಹೋಗಿದ್ದು, ಇವರಿಬ್ಬರು ಇದುವರೆಗೂ ಮನೆಗೆ ಹಿಂದಿರುಗಿಲ್ಲ. ತನಿಷ್ಕಾ ಕಳೆದ ವರ್ಷ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕೈಗೆ ಗಾಯ ಮಾಡಿಕೊಂಡಿದ್ದಳು ಎಂಬುವುದು ಗೊತ್ತಾಗಿದೆ.
ಈ ಭಾರಿಯೂ ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋಗಿರಬಹುದೆಂದು ಆಕೆಯ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ವಿದ್ಯಾರ್ಥಿನಿಯರು ತಮ ಮೊಬೈಲ್‌ಗಳನ್ನು ಮನೆಯಲ್ಲೇ ಬಿಟ್ಟು ಹೋಗಿರುವುದರಿಂದ ಅವರ ಹುಡುಕಾಟ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಅವರು ಆಧಾರಕಾರ್ಡ್ ಹಾಗೂ ಕಾಲೇಜು ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ತಮ ಮಕ್ಕಳು ಕಾಣೆಯಾಗಿರುವ ಬಗ್ಗೆ ವಿದ್ಯಾರಣ್ಯಪುರ ಠಾಣೆ ಪೊಲೀಸರಿಗೆ ಅವರ ಪೋಷಕರು ದೂರು ನೀಡಿದ್ದಾರೆ. 15 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನಾಲ್ಕು ತಂಡಗಳನ್ನಾಗಿ ಮಾಡಿಕೊಂಡು ರಾಜ್ಯದ ವಿವಿಧ ಭಾಗಗಳಲ್ಲಿ ಈ ಇಬ್ಬರು ವಿದ್ಯಾರ್ಥಿನಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ತಂಡಗಳು ಮಲೈ ಮಹದೇಶ್ವರ, ಕೋಲಾರ, ಮೈಸೂರು, ಮಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಹುಡುಕಾಡುತ್ತಿದ್ದಾರೆ.
ಈ ವಿದ್ಯಾರ್ಥಿನಿಯರು ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಬಳಸಿಕೊಂಡು ಸುತ್ತಾಡುತ್ತಿರ ಬಹುದೆಂಬ ಅನುಮಾನ ವ್ಯಕ್ತ ವಾಗಿದೆ. ಈ ನಡುವೆ ಪೋಷಕರು ಎಲ್ಲೇ ಇದ್ದರೂ ಮನೆಗೆ ಸುರಕ್ಷಿತವಾಗಿ ಹಿಂದಿರುಗುವಂತೆ ಅಳಲು ತೋಡಿಕೊಂಡಿದ್ದಾರೆ.