2026-06-25 02:06:02

Two arrested for robbing a gold shop | ಹಾಡುಹಗಲೇ ಚಿನ್ನದ ಅಂಗಡಿ ದೋಚಿದ್ದ ಇಬ್ಬರ ಬಂಧನ ವಿಜಯಪುರ ಪೊಲೀಸರ ಸಾಧನೆ | Speed News Kannada

Two arrested for robbing a gold shop | ಹಾಡುಹಗಲೇ ಚಿನ್ನದ ಅಂಗಡಿ ದೋಚಿದ್ದ ಇಬ್ಬರ ಬಂಧನ ವಿಜಯಪುರ ಪೊಲೀಸರ ಸಾಧನೆ | Speed News Kannada

ವಿಜಯಪುರ: ಜಿಲ್ಲೆಯ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಲಸಂಗಿ ಗ್ರಾಮದಲ್ಲಿರುವ ಭೂಮಿಕಾ ಜ್ಯುವೆಲ್ಲರಿ ಅಂಗಡಿಯನ್ನು ದೋಚಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಕಳವು ಮಾಡಿದ್ದ 205 ಗ್ರಾಂ ಬಂಗಾರ ಮತ್ತು1 ಕೆಜಿ ಬೆಳ್ಳಿಯ ಆಭರಣಗಳು, 3 ಕಂಟ್ರಿ ಪಿಸ್ತೂಲ್ ಗಳು, 26 ಜೀವಂತ ಗುಂಡುಗಳು ಮತ್ತು ಒಂದು ಏರಗನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಶಿವರಾಜ್ (28) ವರ್ಷ ಮತ್ತು ಹಣಮಂತ(28 )ಬಂಧಿತ ಆರೋಪಿಗಳು ಕಳೆದ ತಿಂಗಳು26 ರಂದು ಮಧ್ಯಾಹ್ನವೇ ಮುಖದ ಗುರುತು ಸಿಗದಂತೆ ಕಪ್ಪು ಬಟ್ಟೆ ಮತ್ತು ಹೆಲ್ಮೇಟ್ ಹಾಕಿಕೊಂಡು ಕಪ್ಪು ಬಣ್ಣದ ಬೈಕ್‌ ನಲ್ಲಿ ಅಂಗಡಿಗೆ ಆಗಮಿಸಿದ್ದರು. ತಮ್ಮ ಹತ್ತಿರವಿದ್ದ ಪಿಸ್ತೂಲ್ವನ್ನು ತೋರಿಸಿ, ಅಂಗಡಿಯಲ್ಲಿದ್ದ 22 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.
ಕಳವು ಕುರಿತು ಅಂಗಡಿ ಮಾಲೀಕ ಸದಾಶಿವ ಕಂಚಗಾರ  ದೂರು ನೀಡಿದ್ದರು. ಆರೋಪಿಗಳು ಗುರುತು ಮರೆ ಮಾಚಿಕೊಂಡಿದ್ದರಿಂದ ಪ್ರಕರಣವನ್ನು ಭೇದಿಸುವುದು ಸವಾಲಾಗಿತ್ತು. ತನಿಖಾ ತಂಡವು ತಾಂತ್ರಿಕ ಕುರುಹುಗಳು ಮತ್ತು ಸ್ಥಳೀಯವಾಗಿ ಕಂಡು ಬಂದ ಸಾಕ್ಷಿ ಪುರಾವೆಗಳನ್ನು ಆಧರಿಸಿ ಅಪರಾಧಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್  ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.