2026-03-07 12:12:41

Traffic routes changed in Bengaluru | ಭಾನುವಾರ ಬೆಂಗಳೂರು ನಗರದಲ್ಲಿ ಸಂಚಾರ ಮಾರ್ಗ ಬದಲು | Speed News Kannada

Traffic routes changed in Bengaluru  | ಭಾನುವಾರ ಬೆಂಗಳೂರು ನಗರದಲ್ಲಿ ಸಂಚಾರ ಮಾರ್ಗ ಬದಲು | Speed News Kannada

ಬೆಂಗಳೂರು ನಗರದಲ್ಲಿ ಮಾರ್ಚ್ 1ರ ಭಾನುವಾರ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಸಂಚಾರಿ ಪೊಲೀಸರು ಆದೇಶವನ್ನು ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯವತಿಯಿಂದ 3ನೇ ಆವೃತ್ತಿಯ ರಾಜ್ಯ ಮಟ್ಟದ 'ಕರ್ನಾಟಕ ಪೊಲೀಸ್ ರನ್ 10/05ಕೆ' ಕಾರ್ಯಕ್ರಮದ ಅಂಗವಾಗಿ ಈ ಬದಲಾವಣೆ ಮಾಡಲಾಗಿದೆ. ದಿನಾಂಕ 01.03.2026 ರಂದು ಬೆಂಗಳೂರಿನಲ್ಲಿ ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ವಿಧಾಸೌಧ ಮುಂಭಾಗದಲ್ಲಿರುವ ಗ್ರಾಂಡ್ ಸ್ಟೈಪ್ ಮೆಟ್ಟಿಲುಗಳಿಂದ ಆರಂಭವಾಗಲಿದೆ.
ಕೆ.ಆರ್ ವೃತ್ತ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತ, ಕಬ್ಬನ್ ಪಾರ್ಕ್ ಒಳಭಾಗ, ಕಸ್ತೂರಬಾ ರಸ್ತೆ, ಕ್ರೀನ್ಸ್ ಪ್ರತಿಮೆ ವೃತ್ತ, ಸಿಟಿಒ ಜಂಕ್ಷನ್, ಕಬ್ಬನ್ ರಸ್ತೆ, ಬಿ.ಆ‌ರ್.ಪಿ. ಜಂಕ್ಷನ್, ಮಣಿಪಾಲ್ ಸೆಂಟರ್ ಹತ್ತಿರ ಯುಟರ್ನ್ ಪಡೆದು ಸಿಟಿ ಜಂಕ್ಷನ್‌ಗೆ ಬಂದು ಪೊಲೀಸ್ ತಿಮ್ಮಯ್ಯ ವೃತ್ತದ ಮೂಲಕ ವಿಧಾನಸೌಧವನ್ನು ತಲುಪಲಿದೆ. ಈ ಮ್ಯಾರಥಾನ್‌ನಲ್ಲಿ ಭಾಗವಹಿಸುವವರು ವಿಧಾನಸೌಧದ ಗೇಟ್ ನಂ.2 ಮೂಲಕ ಪ್ರವೇಶಿಸುವುದು.
ವಾಹನ ಸಂಚಾರ ನಿರ್ಬಂಧಿಸಲಾಗಿರುವ ರಸ್ತೆಗಳು (ಬೆಳಗ್ಗೆ 6 ರಿಂದ 11:30ರ ತನಕ)

* ವಿಧಾನಸೌಧದಕಡೆಗೆ ಸಂಚರಿಸುವ ವಾಹನಗಳನ್ನು ಕೆ.ಆ‌ರ್ ಸರ್ಕಲ್‌ನಲ್ಲಿ ಮಾರ್ಗ ಬದಲಾಯಿಸಿ ಪೊಲೀಸ್ ಕಾರ್ನರ್ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ವಿಧಾನಸೌಧದಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. 

* ಬಾಳೆಕುಂದ್ರಿ ವೃತ್ತದಿಂದ ಕೆ.ಆ‌ರ್. ಸರ್ಕಲ್ ಕಡೆಗೆ ಹೋಗುವ ವಾಹನಗಳು ಕನ್ನಿಂಗ್ ಹ್ಯಾಮ್ ರಸ್ತೆ ಕಡೆಗೆ ಸಂಚರಿಸಿ ಚಂದ್ರಿಕ ಜಂಕ್ಷನ್ ಮುಖಾಂತರ ಸಂಚರಿಸುವುದು. ವಿಧಾನಸೌಧಕಡೆಗೆ 'ಯಾವುದೇ ವಾಹನಗಳ ಪ್ರದೇಶಕ್ಕೆ ಅವಕಾಶವಿರುವುದಿಲ್ಲ.

* ಹೆನ್ಸನ್ ಜಂಕ್ಷನ್ ನಿಂದ ಹಳೆ ಮದ್ರಾಸ್ ರಸ್ತೆ ಮತ್ತು ಹಳ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ಹೋಗುವ ವಾಹನಗಳನ್ನು ದೇವಾಂಗ ರಸ್ತೆ, ಶಾಂತಿನಗರ ಮತ್ತು ರಿಚ್ಯಂಡ್ ವೃತ್ತಕ್ಕೆ ಕಳುಹಿಸಲಾಗುವುದು.

* ಮಣಿಪಾಲ್‌ನಿಂದ ಸಿ.ಟಿ.ಓ ಕಡೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಸಿ.ಟಿ.ಓ. ದಿಂದ ಮಣಿಪಾಲ್ ಕಡೆಗೆ ಸಂಚರಿಸುವ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

* ಹೆಡ್ ಕ್ವಾರ್ಟರ್ ಜಂಕ್ಷನ್ ನಿಂದ ಬರುವಂತಹ ವಾಹನಗಳು ಇನ್‌ಫೆಂಟ್ರಿರಸ್ತೆಯ ಮುಖಾಂತರ ಸಾಗಿ ಡಿಕೆನ್ಸನ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕಾಮರಾಜ ರಸ್ತೆಯ ಮುಖಾಂತರ ಕಬ್ಬನ್ ರಸ್ತೆಗೆ ಪ್ರವೇಶಿಸಬಹುದಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.