2026-03-07 06:57:38

Trade Agreement Between America and Bangladesh| ಅಮೆರಿಕ ಬಾಂಗ್ಲಾದೇಶ ನಡುವೆ ವ್ಯಾಪಾರ ಒಪ್ಪಂದ ಟ್ಯಾರಿಫ್ ಶೇ19ಕ್ಕೆ ಇಳಿಕೆ | Speed News Kannada

Trade Agreement Between America and Bangladesh| ಅಮೆರಿಕ ಬಾಂಗ್ಲಾದೇಶ ನಡುವೆ ವ್ಯಾಪಾರ ಒಪ್ಪಂದ ಟ್ಯಾರಿಫ್ ಶೇ19ಕ್ಕೆ ಇಳಿಕೆ | Speed News Kannada

ಢಾಕಾ: ಅಮೆರಿಕ ಮತ್ತು ಬಾಂಗ್ಲಾದೇಶ ನಡುವಿನ ದ್ವೇಪಕ್ಷಿಕ ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳಿದ್ದು, ಇದರಂತೆ ಬಾಂಗ್ಲಾದೇಶಕ್ಕೆ ವಿಧಿಸಲಾಗುತ್ತಿದ್ದ ಅಮೆರಿಕದ ಟ್ಯಾರಿಫ್ ಅನ್ನು ಶೇ.19ಕ್ಕೆ ಇಳಿಸಲಾಗುತ್ತದೆ. ಈ ಒಪ್ಪಂದದ ಭಾಗವಾಗಿ, ಅಮೆರಿಕದ ಸಾಮಗ್ರಿಗಳಿಂದ ತಯಾರಿಸಲಾದ ಕೆಲ ಜವಳಿ ಮತ್ತು ಉಡುಪುಗಳ ಮೇಲೆ ಅಮೆರಿಕ ಸಂಪೂರ್ಣ ಟ್ಯಾರಿಫ್ ವಿನಾಯಿತಿ ನೀಡಲು ಒಪ್ಪಿಕೊಂಡಿದೆ.ಇದಕ್ಕೆ ಪ್ರತಿಯಾಗಿ, ಅಮೆರಿಕದ ಹೆಚ್ಚಿನ ಉತ್ಪನ್ನಗಳಿಗೆ ಬಾಂಗ್ಲಾದೇಶದ ಮಾರುಕಟ್ಟೆಗೆ ಮುಕ್ತ ಪ್ರವೇಶ ನೀಡಲಾಗುತ್ತದೆ. ಸೋಯಾ ಉತ್ಪನ್ನಗಳು, ಡೈರಿ ವಸ್ತುಗಳು, ಬೀಫ್, ಯಂತ್ರೋಪಕರಣಗಳು, ವಾಹನಗಳು ಹಾಗೂ ಅವುಗಳ ಬಿಡಿಭಾಗಗಳು, ರಾಸಾಯನಿಕಗಳು, ಹಣ್ಣುಗಳು ಮತ್ತು ವೈದ್ಯಕೀಯ ಸಾಧನಗಳು ಸೇರಿದಂತೆ ಅಮೆರಿಕದ ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳಿಗೆ ಆದ್ಯತೆಯ ಅವಕಾಶ ಕಲ್ಪಿಸಲಾಗುತ್ತದೆ. ಅದೇ ವೇಳೆ, ಅಮೆರಿಕದ ವಾಹನ ಸುರಕ್ಷತಾ ಮಾನದಂಡಗಳು ಹಾಗೂ ಆಹಾರ ಗುಣಮಟ್ಟದ ಪ್ರಮಾಣಪತ್ರಗಳನ್ನು ಬಾಂಗ್ಲಾದೇಶ ಸ್ವೀಕರಿಸಲು ಒಪ್ಪಿಕೊಂಡಿದೆ. ಮರುತಯಾರಿತ ಸರಕುಗಳ ಮೇಲಿನ ಆಮದು ನಿರ್ಬಂಧವನ್ನು ತೆರವುಗೊಳಿಸಲಾಗುವುದು ಎಂದು ಅಮೆರಿಕದ ಶ್ವೇತಭವನ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಪ್ಪಂದದಂತೆ, ಮುಂದಿನ 15 ವರ್ಷಗಳಲ್ಲಿ 15 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್ ಇಂಧನ ಉತ್ಪನ್ನಗಳು ಮತ್ತು 3.5 ಬಿಲಿಯನ್ ಡಾಲರ್ ಮೌಲ್ಯದ ಕೃಷಿ ಉತ್ಪನ್ನಗಳನ್ನು ಖರೀದಿಸಲು ಬಾಂಗ್ಲಾದೇಶ ಬದ್ಧವಾಗಿದೆ. ಬಿಮಾನ್ ಬಾಂಗ್ಲಾದೇಶ್ ಏರ್ಲೈನ್ಸ್ ಸಂಸ್ಥೆ 14 ಬೋಯಿಂಗ್ ವಿಮಾನಗಳನ್ನು ಖರೀದಿಸುವ ಉದ್ದೇಶ ಹೊಂದಿದ್ದು, ಇತರ ದೇಶಗಳ ಬದಲು ಅಮೆರಿಕದಿಂದಲೇ ಸೈನಿಕ ಉಪಕರಣಗಳನ್ನು ಖರೀದಿಸಲು ಸಹ ಒಪ್ಪಿಕೊಂಡಿದೆ.
ಹಿಂದಿನ ವರ್ಷ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಂಗ್ಲಾದೇಶದ ಮೇಲೆ ಶೇ.37ರಷ್ಟು ಪ್ರತಿಸುಂಕ ವಿಧಿಸಿದ್ದರು. ಬಳಿಕ ಬಾಂಗ್ಲಾದೇಶದ ಪ್ರಯತ್ನದಿಂದ ಅದನ್ನು ಶೇ.20ಕ್ಕೆ ಇಳಿಸಲಾಗಿತ್ತು. ಈಗ ಹೊಸ ವ್ಯಾಪಾರ ಒಪ್ಪಂದದ ನಂತರ ಟ್ಯಾರಿಫ್ ಶೇ.19ಕ್ಕೆ ಇಳಿಕೆಯಾಗಿದೆ.
ಇದೇ ಸಂದರ್ಭದಲ್ಲಿ, ಭಾರತವು ಅಮೆರಿಕದೊಂದಿಗೆ ಟ್ಯಾರಿಫ್ ಅನ್ನು ಶೇ.18ಕ್ಕೆ ಇಳಿಸಲು ಯಶಸ್ವಿಯಾಗಿರುವುದು ಗಮನಾರ್ಹವಾಗಿದೆ. ಬಾಂಗ್ಲಾದೇಶಕ್ಕೆ ಜವಳಿ ರಫ್ತು ಪ್ರಮುಖ ಆದಾಯ ಮೂಲವಾಗಿದ್ದು, ಕಡಿಮೆ ಟ್ಯಾರಿಫ್ ವ್ಯವಸ್ಥೆಯಿಂದ ಭಾರತೀಯ ಟೆಕ್ಸ್ಟೈಲ್ಸ್ ಉದ್ಯಮಕ್ಕೂ ಅನುಕೂಲವಾಗುವ ಸಾಧ್ಯತೆ ಇದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.