2026-03-07 06:07:08

Tirupati temple | ತಿರುಪತಿ ದೇವಸ್ಥಾನ ಬಂದ್‌ ಕಾರಣ ಏನು ಗೊತ್ತಾ? SNK

Tirupati temple | ತಿರುಪತಿ ದೇವಸ್ಥಾನ ಬಂದ್‌ ಕಾರಣ ಏನು ಗೊತ್ತಾ? SNK

ತಿರುಪತಿ : ತಿರುಪತಿ ತಿರುಮಲಕ್ಕೆ ನಿತ್ಯ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡ್ತಾರೆ. ಗಂಟೆ-ಗಂಟೆಗಳ ಕಾಲ ಕಾದು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ತಿರುಪತಿಯ ಶ್ರೀ ವೆಂಕಟೇಶ್ವರನ ದೇಗುಲದ ಬಂದ್ ಆಗೋದು ತೀರ ಕಡಿಮೆ. ಆದ್ರೆ ಈ ಒಂದು ದಿನದಂದು ತಿರುಮಲ ದೇವಸ್ಥಾನ ಮುಚ್ಚಲಿದೆ. ಯಾವ ದಿನ? ಕಾರಣ ಏನು ಗೊತ್ತಾ?
ಮಾರ್ಚ್  3 ರಂದು ಚಂದ್ರಗ್ರಹಣದ ಸಂದರ್ಭದಲ್ಲಿ ತಿರುಮಲ ತಿರುಪತಿ ದೇವಸ್ಥಾನ ಮುಚ್ಚಲಾಗುವುದು ಎಂದು ಟಿಟಿಡಿ ಅಧಿಕೃತವಾಗಿ ಘೋಷಿಸಿದೆ. ಗ್ರಹಣ ಮಧ್ಯಾಹ್ನ 3:20 ಕ್ಕೆ ಪ್ರಾರಂಭವಾಗಿ ಸಂಜೆ 6:47 ಕ್ಕೆ ಕೊನೆಗೊಳ್ಳುತ್ತದೆ. ಆದ್ರೆ, ತಿರುಮಲ ದೇವಸ್ಥಾನ ಎಷ್ಟು ಗಂಟೆಗಳ ಕಾಲ ಮುಚ್ಚಲ್ಪಡುತ್ತದೆ. ತಿರುಪತಿ ತಿರುಮಲ ದೇವಸ್ಥಾನ ಯಾವಾಗಲೂ ತಿಮ್ಮಪ್ಪನ ಭಕ್ತರಿಂದಲೇ ತುಂಬಿರುತ್ತದೆ. ಪ್ರಪಂಚದಾದ್ಯಂತದ ವೆಂಕಟೇಶ್ವರನ ಭಕ್ತರು ಅವರ ದರ್ಶನಕ್ಕಾಗಿ ಸಾಲು ಸಾಲಿನಲ್ಲಿ ಕಾಯುತ್ತಿರುತ್ತರೆ. 
ಈ ಹಿನ್ನೆಲೆಯಲ್ಲಿ, ಮಾರ್ಚ್ 3 ರಂದು ತಿರುಮಲ ಭಕ್ತರುವ ಪ್ಲಾನ್ ಮಾಡಿರೋ ಪ್ರಕಾರ ಭಕ್ತರಿಗೆ ಇದು ಬಿಗ್ ಅಲರ್ಟ್ ಆಗಿದೆ. ತಿರುಮಲ ದೇವಾಲಯ ಬಂದ್ ಆಗಲಿದೆ. ಚಂದ್ರಗ್ರಹಣದಿಂದಾಗಿ  ತಿರುಪತಿ ದೇವಸ್ಥಾನ ಆ ಒಂದು  ದಿನ ಮುಚ್ಚಲ್ಪಗುತ್ತದೆ ಎಂದು ಅಧಿಕೃತವಾಗಿ ಟಿಟಿಡಿ ಘೋಷಿಸಿವೆ. ಚಂದ್ರಗ್ರಹಣ ಮಧ್ಯಾಹ್ನ 3:20 ಕ್ಕೆ ಪ್ರಾರಂಭವಾಗಿ ಸಂಜೆ 6:45 ಕ್ಕೆ ಕೊನೆಗೊಳ್ಳುತ್ತೆ. ಗ್ರಹಣಕ್ಕೆ 6 ಗಂಟೆಗಳ ಮೊದಲು ದೇವಾಲಯವನ್ನು ಮುಚ್ಚುವುದು ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತಿರುಮಲ ವೆಂಕಟೇಶ್ವರನ ದೇವಸ್ಥಾನವನ್ನು ಮಾರ್ಚ್ 3 ರಂದು ಮುಚ್ಚಲಾಗುವುದು. ತಿರುಮಲಕ್ಕೆ ಬರುವ ಭಕ್ತರು ಇದನ್ನು ಮೊದಲೇ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಶ್ರೀವಾರಿ ದೇವಸ್ಥಾನವನ್ನು ಬೆಳಿಗ್ಗೆ 9 ರಿಂದ ಸಂಜೆ 7:30 ರವರೆಗೆ ಮುಚ್ಚಲಾಗುವುದು. ಸಂಜೆ 7:30 ರ ನಂತರ ಬಾಗಿಲು ತೆರೆಯಲಾಗುವುದು ಮತ್ತು ಶುದ್ಧೀಕರಣ ಪುಣ್ಯಾಹವಾಚನ ನಡೆಸಲಾಗುವುದು. ರಾತ್ರಿ 8:30 ಕ್ಕೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.