ತಿರುಪತಿ : ತಿರುಪತಿ ತಿರುಮಲಕ್ಕೆ ನಿತ್ಯ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡ್ತಾರೆ. ಗಂಟೆ-ಗಂಟೆಗಳ ಕಾಲ ಕಾದು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ತಿರುಪತಿಯ ಶ್ರೀ ವೆಂಕಟೇಶ್ವರನ ದೇಗುಲದ ಬಂದ್ ಆಗೋದು ತೀರ ಕಡಿಮೆ. ಆದ್ರೆ ಈ ಒಂದು ದಿನದಂದು ತಿರುಮಲ ದೇವಸ್ಥಾನ ಮುಚ್ಚಲಿದೆ. ಯಾವ ದಿನ? ಕಾರಣ ಏನು ಗೊತ್ತಾ?
ಮಾರ್ಚ್ 3 ರಂದು ಚಂದ್ರಗ್ರಹಣದ ಸಂದರ್ಭದಲ್ಲಿ ತಿರುಮಲ ತಿರುಪತಿ ದೇವಸ್ಥಾನ ಮುಚ್ಚಲಾಗುವುದು ಎಂದು ಟಿಟಿಡಿ ಅಧಿಕೃತವಾಗಿ ಘೋಷಿಸಿದೆ. ಗ್ರಹಣ ಮಧ್ಯಾಹ್ನ 3:20 ಕ್ಕೆ ಪ್ರಾರಂಭವಾಗಿ ಸಂಜೆ 6:47 ಕ್ಕೆ ಕೊನೆಗೊಳ್ಳುತ್ತದೆ. ಆದ್ರೆ, ತಿರುಮಲ ದೇವಸ್ಥಾನ ಎಷ್ಟು ಗಂಟೆಗಳ ಕಾಲ ಮುಚ್ಚಲ್ಪಡುತ್ತದೆ. ತಿರುಪತಿ ತಿರುಮಲ ದೇವಸ್ಥಾನ ಯಾವಾಗಲೂ ತಿಮ್ಮಪ್ಪನ ಭಕ್ತರಿಂದಲೇ ತುಂಬಿರುತ್ತದೆ. ಪ್ರಪಂಚದಾದ್ಯಂತದ ವೆಂಕಟೇಶ್ವರನ ಭಕ್ತರು ಅವರ ದರ್ಶನಕ್ಕಾಗಿ ಸಾಲು ಸಾಲಿನಲ್ಲಿ ಕಾಯುತ್ತಿರುತ್ತರೆ.
ಈ ಹಿನ್ನೆಲೆಯಲ್ಲಿ, ಮಾರ್ಚ್ 3 ರಂದು ತಿರುಮಲ ಭಕ್ತರುವ ಪ್ಲಾನ್ ಮಾಡಿರೋ ಪ್ರಕಾರ ಭಕ್ತರಿಗೆ ಇದು ಬಿಗ್ ಅಲರ್ಟ್ ಆಗಿದೆ. ತಿರುಮಲ ದೇವಾಲಯ ಬಂದ್ ಆಗಲಿದೆ. ಚಂದ್ರಗ್ರಹಣದಿಂದಾಗಿ ತಿರುಪತಿ ದೇವಸ್ಥಾನ ಆ ಒಂದು ದಿನ ಮುಚ್ಚಲ್ಪಗುತ್ತದೆ ಎಂದು ಅಧಿಕೃತವಾಗಿ ಟಿಟಿಡಿ ಘೋಷಿಸಿವೆ. ಚಂದ್ರಗ್ರಹಣ ಮಧ್ಯಾಹ್ನ 3:20 ಕ್ಕೆ ಪ್ರಾರಂಭವಾಗಿ ಸಂಜೆ 6:45 ಕ್ಕೆ ಕೊನೆಗೊಳ್ಳುತ್ತೆ. ಗ್ರಹಣಕ್ಕೆ 6 ಗಂಟೆಗಳ ಮೊದಲು ದೇವಾಲಯವನ್ನು ಮುಚ್ಚುವುದು ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತಿರುಮಲ ವೆಂಕಟೇಶ್ವರನ ದೇವಸ್ಥಾನವನ್ನು ಮಾರ್ಚ್ 3 ರಂದು ಮುಚ್ಚಲಾಗುವುದು. ತಿರುಮಲಕ್ಕೆ ಬರುವ ಭಕ್ತರು ಇದನ್ನು ಮೊದಲೇ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಶ್ರೀವಾರಿ ದೇವಸ್ಥಾನವನ್ನು ಬೆಳಿಗ್ಗೆ 9 ರಿಂದ ಸಂಜೆ 7:30 ರವರೆಗೆ ಮುಚ್ಚಲಾಗುವುದು. ಸಂಜೆ 7:30 ರ ನಂತರ ಬಾಗಿಲು ತೆರೆಯಲಾಗುವುದು ಮತ್ತು ಶುದ್ಧೀಕರಣ ಪುಣ್ಯಾಹವಾಚನ ನಡೆಸಲಾಗುವುದು. ರಾತ್ರಿ 8:30 ಕ್ಕೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು.