2026-03-07 06:07:40

There will be Power Outages | ಬೆಂಗಳೂರಿನ ಈ ಬಡಾವಣೆಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ನಿಮ್ಮ ಬಡಾವಣೆ ಇದ್ದಲ್ಲಿ ಎಚ್ಚರವಹಿಸಿ | Speed News Kannada

There will be Power Outages | ಬೆಂಗಳೂರಿನ ಈ ಬಡಾವಣೆಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ನಿಮ್ಮ ಬಡಾವಣೆ ಇದ್ದಲ್ಲಿ ಎಚ್ಚರವಹಿಸಿ | Speed News Kannada

ಬೆಂಗಳೂರು ನಗರದ ಹಲವು ಭಾಗಗಳಲ್ಲಿ ನಾಳೆ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದೆ. ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿಜಯನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ನಾಳೆ  ದಿನಾಂಕ 07.02.2026 ಶನಿವಾರದಂದು ಬೆಳಗ್ಗೆ10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಶಿಪಾಳಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ ವಿಜಯನಗರ, ಆರ್‌ಪಿಸಿ ಲೇಔಟ್, ಸರ್ವಿಸ್ ರಸ್ತೆ, ವಿಜಯನಗರ 7ನೇ ಮುಖ್ಯ ರಸ್ತೆಯಿಂದ 13ನೇ ಮುಖ್ಯ ರಸ್ತೆ, ಮೊದಲ ಹಂತ ತಿಮ್ಮೇನಹಳ್ಳಿ, ಎಂಸಿ ಲೇಔಟ್‌ನ ಒಂದು ಭಾಗ, ಬಿನ್ನಿ ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್‌ನ ಒಂದು ಭಾಗ, ಪಿಸಿ ಕೈಗಾರಿಕಾ ಪ್ರದೇಶ, ಕಾವೇರಿಪುರ, ರಂಗನಾಥಪುರ, ಕೆಸಿಜಿ ಕೈಗಾರಿಕಾ ಪ್ರದೇಶ, ನಂಜಪ್ಪ ಕೈಗಾರಿಕಾ ಎಸ್ಟೇಟ್, ಸುನ್ನದಗೋಡು, ಸೆಲ್ವಂ ಕೈಗಾರಿಕಾ ಎಸ್ಟೇಟ್, ಬಲ್ಲಾಯನ ಕೆರೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾವೇರಿಪುರ 1ನೇ ಬ್ಲಾಕ್.
ಮಲ್ಲೇಶ್ವರಂ ವಿಭಾಗದ ನಾಳೆ  ದಿನಾಂಕ 07.02.2026 ಶನಿವಾರದಂದು ಬೆಳಗ್ಗೆ10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ರಾಮಯ್ಯ ಆಸ್ಪತ್ರೆ, ಪೈಪ್ ಲೈನ್ ರಸ್ತೆ, ಎಂಎಸ್ಆರ್ ನಗರ, ಬಿಇಎಲ್ ರಸ್ತೆ, ಸಿಪಿಆರ್ಐ ಕ್ವರ‍್ಟ್ಸ್, ಸದಾಶಿವನಗರ ಪೊಲೀಸ್ ಠಾಣೆ, ಎಜಿಎಸ್ ಲೇಔಟ್, ಬಿಇಎಲ್ ರಸ್ತೆ, ಎಂಎಸ್ಆರ್ ನಗರ, ಜಲದರ್ಶಿನಿ ಲೇಔಟ್, ಎಂಎಸ್ಆರ್ ನಗರ, ಪೈಪ್ ಲೈನ್ ರಸ್ತೆ, ರಾಮಯ್ಯ ಬಾಲಕರ ಹಾಸ್ಟೆಲ್, ಎ.ಕೆ. ಕಾಲೋನಿ, ಶ್ರೀನಿಕೇತ್ ಅಪಾರ್ಟ್‌ ಮೆಂಟ್, ಕಾಫಿ ಡೇ, ಪಿಜ್ಜಾ ಹಟ್ ರಾಮಯ್ಯ ಆಸ್ಪತ್ರೆ ಎದುರು, ನಾರಾಯಣ ಪ್ರಸಾದ್ ಕಟ್ಟಡ, ಸೀನಪ್ಪ ಲೇಔಟ್, ಬಿಇಎಲ್ ರಸ್ತೆ, ಇಸ್ರೋ, ಡೋರ‍್ಸ್ ಕಾಲೋನಿ, ಬಿಇಎಲ್ ರಸ್ತೆ, ಚಿಕ್ಕಮಾರನಹಳ್ಳಿ, ಗೌರಿ ಅಪಾರ್ಟ್‌ ಮೆಂಟ್ ಮತ್ತು ಮೇಲಿನ ಸೈಡ್ ಪ್ರದೇಶಗಳ ಸುತ್ತಮುತ್ತಲಿನ ಪ್ರದೇಶಗಳು.
ಬನಶಂಕರಿ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 07.02.2026 ಶನಿವಾರದಂದು ಬೆಳಗ್ಗೆ10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಭರತ್ ಲೇಔಟ್, ಪಟಾಲಮ್ಮ ದೇವಸ್ಥಾನ ಹಿಂಭಾಗ, ಹ್ಯಾಪಿ ವ್ಯಾಲಿ ಲೇಔಟ್, ವಿನಾಯಕ ಲೇಔಟ್, ಉತ್ತರಹಳ್ಳಿ, ಅಪ್ಪಯ್ಯ ಸ್ವಾಮಿ ಲೇಔಟ್, ವಡ್ಡರಪಾಳ್ಯ ಏರಿಯಾ, ಬನಶಂಕರಿ 5ನೇ ಹಂತ, ಪರ‍್ಣ ಪ್ರಜ್ಞಾ ಲೇಔಟ್, ಮಂತ್ರಿ ಆಲ್ಫೈನ್ಸ್, ದ್ವಾರಕ ನಗರ, ಬನಶಂಕರಿ 6ನೇಹಂತ, 80ಫೀಟ್ ರೋಡ್, ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜ್, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಎನ್ ಟಿ ವೈ ಲೇಔಟ್, ತ್ಯಾಗರಾಜನಗರ, ಬಸವನಗುಡಿ, ಬಿ.ಎಸ್.ಕೆ 3ನೇ ಹಂತ, ಕತ್ತರಿಗುಪ್ಪೆ, ಗಿರಿನಗರ 4ನೇ ಹಂತ, ಐಟಿಐ ಲೇಔಟ್ 100 ಫೀಟ್ ರಿಂಗ್ ರಸ್ತೆ, ಕಾಮಾಕ್ಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.