ಸಿಂಧನೂರು: ಕೂದಲು ಜಾಸ್ತಿ ಬಿಟ್ಟಿದ್ದಾನೆ ಎಂದು ಶಿಕ್ಷಕಿಯೇ ವಿದ್ಯಾರ್ಥಿಯ ಕೂದಲನ್ನು ಕತ್ತರಿಸಿದ ಘಟನೆ ಸಿಂಧನೂರಿನ ಹೋಲಿಫ್ಯಾಮಿಲಿ ಶಾಲೆಯಲ್ಲಿ ನಡೆದಿದೆ. ಈ ಶಾಲೆಯಲ್ಲಿ 5ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಮುಹಮ್ಮದ್ ತಾಹೇರ್ ಎನ್ನುವ ವಿದ್ಯಾರ್ಥಿಗೆ ಅದೇ ಶಾಲೆಯ ಶಿಕ್ಷಕಿ ಹಾಗೂ ಶಾಲೆಯ ಫಾದರ್ ಸೇರಿಕೊಂಡು ತಲೆ ಕೂದಲು ಕತ್ತರಿಸಿದ್ದಾರೆ. ಶಿಕ್ಷಕಿ ತರಗತಿಯಲ್ಲೇ ವಿದ್ಯಾರ್ಥಿಯ ಕೂದಲನ್ನು ಅಸಹ್ಯವಾಗಿ ಕತ್ತರಿಸಿದ್ದಾರೆ. ತಲೆ ಕೂದಲು ಕತ್ತರಿಸಿದ್ದಲ್ಲದೇ ಅವಮಾನವೀಯವಾಗಿ ನಡೆದುಕೊಂಡಿದ್ದಾರೆ. ತಮ್ಮ ಪುತ್ರನ ತಲೆ ಕೂದಲು ಕತ್ತರಿಸಿದ ಹಿನ್ನಲೆ ಪಾಲಕರು ಶಿಕ್ಷಕರಿಗೆ ಈ ಬಗ್ಗೆ ವಿಚಾರಶಾಲೆಗೆ ಭೇಟಿ ನೀಡಿದಾಗ ಶಾಲೆಯ ಫಾದರ್ ಜ್ಞಾನಪ್ರಕಾಶ ಅವರು ಪಾಲಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವಿದ್ಯಾರ್ಥಿ ತಂದೆ ಮುಹಮ್ಮದ್ ಮುಸ್ತಫಾ ಆರೋಪಿಸಿದ್ದಾರೆ. ಇಂತಹ ಘಟನೆಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಾಲಕರು ದೂರು ದಾಖಲಿಸಿದ್ದಾರೆ. ಕೂದಲಿಗೆ ಎಣ್ಣೆ ಹಚ್ಚಿಲ್ಲವೆಂದು ಶಿಕ್ಷಕರೊಬ್ಬರು ವಿದ್ಯಾರ್ಥಿನಿಯ ಕೂದಲು ಕತ್ತರಿಸಿದ ಘಟನೆ ಕಳಸ ವರ್ಷ ಗುಜರಾತಿನಲ್ಲಿ ನಡೆದಿತ್ತು., ಶಿಕ್ಷಕರು ವಿದ್ಯಾರ್ಥಿನಿಯ ಕೂದಲನ್ನು ಬೇಡ್‌ನಿಂದ ಕತ್ತರಿಸಿದ್ದಾರೆ. ವಿದ್ಯಾರ್ಥಿನಿ ಕೂದಲಿಗೆ ಎಣ್ಣೆ ಹಚ್ಚಿಕೊಂಡಿರಲಿಲ್ಲ ಎನ್ನುವ ಕಾರಣ ನೀಡಲಾಗಿತ್ತು.