2026-03-17 02:39:16

The man who went to resolve the fight between husband and wife died | ಇಬ್ಬರ ಜಗಳ ಮೂರನೆಯವನಿಗೆ ಮಚ್ಚಿನೇಟು ಗಂಡ ಹೆಂಡತಿ ಜಗಳ ಬಿಡಿಸಲು ಹೋದವ ಸಾ*ವು | Speed News Kannada

The man who went to resolve the fight between husband and wife died | ಇಬ್ಬರ ಜಗಳ ಮೂರನೆಯವನಿಗೆ ಮಚ್ಚಿನೇಟು ಗಂಡ ಹೆಂಡತಿ ಜಗಳ ಬಿಡಿಸಲು ಹೋದವ ಸಾ*ವು | Speed News Kannada

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಘೋರ ದುರಂತ ಸಂಭವಿಸಿದ್ದು, ಗಂಡ ಹಾಗೂ ಹೆಂಡ್ತಿ ನಡುವಿನ ಜಗಳ ಬಿಡಿಸಲು ಹೋದ ಅಮಾಯಕ ಬಲಿಯಾಗಿದ್ದಾನೆ.
ಚಿತ್ರದುರ್ಗದ ಬುದ್ದ ವೃತ್ತದಲ್ಲಿ ಘಟನೆ ನಡೆದಿದ್ದು ಮೃತರನ್ನು ತಾಜ್‌ ಪೀರ್ (42) ಎಂದು ಗುರುತಿಸಲಾಗಿದೆ.ಕೌಟುಂಬಿಕ ಕಲಹದ ಹಿನ್ನೆಲೆ ಸ್ಟೇಡಿಯಂ ರಸ್ತೆಯಲ್ಲಿನ ಬುದ್ದ ವೃತ್ತದಲ್ಲಿ ಸಾಧಿಕ್‌ವುಲ್ಲಾ ತನ್ನ ಪತ್ನಿಯೊಂದಿಗೆ ನಡುರಸ್ತೆಯಲ್ಲಿ ಜಗಳವಾಡುತ್ತಿದ್ದನು .
ಈ ವೇಳೆ ದಂಪತಿ ಜಗಳ ಬಿಡಿಸಲು ಮುಂದಾದ ತಾಜ್‌ ಪೀರ್ ಮೇಲೆ ಸಾಧಿಕ್‌ವುಲ್ಲಾ ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ತಾಜ್ ಪೀರ್ ಮೃತಪಟ್ಟಿದ್ದಾನೆ.
ತಾಜ್‌ಪೀ‌ರ್ ಗಂಭೀರವಾಗಿ ಗಾಯಗೊಂಡು ದಾವಣಗೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೇ ತಾಜ್‌ಪೀ‌ರ್ ಸಾವನ್ನಪ್ಪಿದ್ದಾರೆ.ಈ ಸಂಬಂಧ ಆರೋಪಿ ಸಾಧಿಕ್‌ವುಲ್ಲಾನನ್ನು ಬಂಧಿಸಿರುವ ಬಡಾವಣೆ ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ಇವರಿಬ್ಬರ ಜಗಳದ ವೀಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೊಲೆಯ ನಿಖರ ಕಾರಣ ಹುಡುಕಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.