2026-03-16 01:01:56

That incident in college is the reason Sai Pallavi did not wear Short dresses | ಶಾಕಿಂಗ್ ವಿಚಾರ ಬಿಚ್ಚಿಟ್ಟ ಸಾಯಿ ಪಲ್ಲವಿ ತುಂಡು ಬಟ್ಟೆ ಧರಿಸದಿರಲು ಕಾಲೇಜಿನ ಆ ಘಟನೆ ಕಾರಣ | Speed News Kannada

That incident in college is the reason Sai Pallavi did not wear Short dresses | ಶಾಕಿಂಗ್ ವಿಚಾರ ಬಿಚ್ಚಿಟ್ಟ ಸಾಯಿ ಪಲ್ಲವಿ ತುಂಡು ಬಟ್ಟೆ ಧರಿಸದಿರಲು ಕಾಲೇಜಿನ ಆ ಘಟನೆ ಕಾರಣ | Speed News Kannada

ಸಾಯಿ ಪಲ್ಲವಿ ಇಂದಿನ ನಟಿಯರ ಸಾಲಿನಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿರುವ ಹೆಸರು. ಅವರು ತಮ್ಮ ಚಿತ್ರಗಳಲ್ಲಿ ಮೇಕಪ್ ಇಲ್ಲದ ಸಹಜ ಲುಕ್‌ನಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ, ತುಂಡು ಬಟ್ಟೆಗಳು ಅಥವಾ ದೇಹದ ಭಾಗಗಳು ಹೆಚ್ಚಾಗಿ ಕಾಣುವ ಉಡುಪುಗಳನ್ನು ಧರಿಸುವುದಿಲ್ಲ.
ಈ ನಿರ್ಧಾರದ ಹಿಂದೆ ಒಂದು ನೋವಿನ ಅನುಭವ ಅಡಗಿದೆ..
ಕಾಲೇಜು ದಿನಗಳಲ್ಲಿ ತಮಗೆ ಸಂಭವಿಸಿದ ಘಟನೆಯೊಂದನ್ನು ಸಾಯಿ ಪಲ್ಲವಿ ಸ್ವತಃ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿನಿಯಾಗಿದ್ದ ಸಮಯದಲ್ಲಿ ಅವರು ನೃತ್ಯ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಸ್ಲಿಟ್ ಡ್ರೆಸ್ ಧರಿಸಿ ಪ್ರದರ್ಶನ ನೀಡಿದ್ದರು.
ಆ ನೃತ್ಯದ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. ಆದರೆ, ಜನರಿಂದ ಬಂದ ಪ್ರತಿಕ್ರಿಯೆ ಸಾಯಿ ಪಲ್ಲವಿಗೆ ಭಾರೀ ನಿರಾಶೆ ತಂದಿತು. ತಮ್ಮ ಪ್ರತಿಭೆ ಮತ್ತು ನೃತ್ಯ ಕೌಶಲ್ಯದ ಬದಲು, ಜನರು ತಮ್ಮ ದೇಹದ ಮೇಲೆ ಹೆಚ್ಚು ಗಮನ ಹರಿಸಿದ್ದರು ಎಂದು ಅವರು ಬೇಸರ ವ್ಯಕ್ತಪಡಿಸಿದರು. "ಜನರು ನನ್ನ ಪ್ರತಿಭೆಯನ್ನು ಗಮನಿಸಲಿಲ್ಲ, ಬದಲಾಗಿ ನನ್ನ ಬಟ್ಟೆಗಳ ಬಗ್ಗೆ ಮಾತ್ರ ಮಾತನಾಡಿದರು" ಎಂದು ಸಾಯಿ ಪಲ್ಲವಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯ ಬಳಿಕವೇ ದೇಹದ ಭಾಗಗಳು ಹೆಚ್ಚು ಕಾಣುವ ಬಟ್ಟೆಗಳನ್ನು ಧರಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ನಿರ್ಧಾರವನ್ನು ಅವರು ತೆಗೆದುಕೊಂಡರು.
ಪ್ರಸ್ತುತ ಸಾಯಿ ಪಲ್ಲವಿ ಅಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅವರೊಂದಿಗೆ 'ಏಕ್ ದಿನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ರಣಬೀರ್ ಕಪೂರ್ ಅಭಿನಯದ ಬಹು ನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿಯೂ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.