2026-06-08 01:28:44

ಜಮೀರ್‌ ಗೆ ಆಘಾತ ತಂದ ಆ ಆಡಿಯೋ ವೈರಲ್; ಸಚಿವ ಸ್ಥಾನಕ್ಕೆ ಕುತ್ತು?|Speed News Kannada

ಜಮೀರ್‌  ಗೆ ಆಘಾತ ತಂದ ಆ ಆಡಿಯೋ ವೈರಲ್; ಸಚಿವ ಸ್ಥಾನಕ್ಕೆ ಕುತ್ತು?|Speed News Kannada

ಬೆಂಗಳೂರು: ಒಂದು ಕಡೆ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೇರಿದಂತೆ ಎಲ್ಲ ಮುಖಂಡರು ಸಚಿವ ಸಂಪುಟ ರಚನೆಯಲ್ಲಿ ನಿರತರಾಗಿದ್ದಾರೆ. ಮತ್ತೊಂದು ಕಡೆ ಆಕಾಂಕ್ಷಿ ಶಾಸಕರೆಲ್ಲಾ ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಆದರೆ ಉಪ ಮುಖ್ಯಮಂತ್ರಿ ಹುದ್ದೆ ನಿರೀಕ್ಷೆಯಲ್ಲಿದ್ದ ಜಮೀರ್‌ ಅಹಮದ್‌ ಖಾನ್‌ ಮಾತ್ರ ತೀವ್ರ ಒತ್ತಡದಲ್ಲಿದ್ದು, ಅವರಿಗೆ ಸಚಿವ ಸ್ಥಾನವೂ ಮರೀಚಿಕೆಯಾಗಿದೆ. ಜಮೀರ್‌ ಅವರ ಆಡಿಯೋ ಒಂದು ವೈರಲ್‌ ಆಗಿದೆ. ದಾವಣಗೆರೆ ಬೈ ಎಲೆಕ್ಷನ್‌ನಲ್ಲಿ ಕುಕ್ಕರ್‌ಗೆ ವೋಟ್‌ ಬೀಳಬೇಕು ಎಂದು ಜಮೀರ್​ ಹೇಳಿದ್ದಾರೆ ಎಂಬ ಆಡಿಯೋ ಅವರಿಗೆ ಹುರುಳಾಗಿದೆ.

ಈ ಹಿನ್ನೆಲೆಯಲ್ಲಿ ಜಮೀರ್‌ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿ ಸ್ಪಷ್ಟನೆ ನೀಡಲು ಹರಸಾಹಸ ನಡೆಸಿದ್ದಾರೆ. ಆ ಆಡಿಯೋ ನನ್ನದಲ್ಲ. ನಾನು ಆ ಆರೀತಿ ಹೇಳಿಲ್ಲ. ಆದ್ದರಿಂದ ನನ್ನನ್ನು ಕೈಬಿಡದಂತೆ ಹೈಕಮಾಂಡ್‌ ಮನವೊಲಿಸಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ ಸಿದ್ದರಾಮಯ್ಯ ಯಾವುದೇ ಭರವಸೆ ನೀಡಿಲ್ಲ ಎಂದು ತಿಳಿದು ಬಂದಿದೆ.

ದೆಹಲಿಗೂ ಸಿದ್ದರಾಮಯ್ಯ ಜಮೀರ್‌ ಅವರನ್ನು ಕರೆದೊಯ್ದಿಲ್ಲ. ಇದರಿಂದ ಜಮೀರ್‌ ಮತ್ತಷ್ಟು ಕಂಗಾಲಾಗಿದ್ದಾರೆ. ದಾವಣಗೆರೆ ಉಪಚುನಾವಣೆ ಪ್ರಕರಣದಲ್ಲಿ ಈಗಾಗಲೇ ಇಬ್ಬರ ತಲೆದಂಡವಾಗಿದೆ. ಜಮೀರ್ ಅಹಮದ್ ತಲೆದಂಡಕ್ಕೂ ಮುಸ್ಲಿಂ ಮುಖಂಡರು ಒತ್ತಾಯಿಸಿದ್ದರು. ಈಗ ಕಾಲ ಕೂಡಿ ಬಂದಿದೆ ಎಂದು ಹೇಳಲಾಗುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.