2026-07-23 11:26:32

Thalapathy Vijays rally | ದಳಪತಿ ವಿಜಯ್‌ ಸಮಾವೇಶ ಹೃದಯಾಘಾತದಿಂದ ಟಿವಿಕೆ ಪಕ್ಷದ ಕಾರ್ಯಕರ್ತ ಸಾವು | Speed News Kannada

Thalapathy Vijays rally | ದಳಪತಿ ವಿಜಯ್‌ ಸಮಾವೇಶ ಹೃದಯಾಘಾತದಿಂದ ಟಿವಿಕೆ ಪಕ್ಷದ ಕಾರ್ಯಕರ್ತ ಸಾವು | Speed News Kannada

ಚೆನ್ನೈ: ಖ್ಯಾತ ನಟ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸಮಾವೇಶದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ತಮಿಳುನಾಡಿನ ಸೇಲಂನಲ್ಲಿ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಮಹಾರಾಷ್ಟ್ರ ಮೂಲದ ಸೂರಜ್‌ ಎಂದು ಗುರುತಿಸಲಾಗಿದೆ. ಸಮಾವೇಶ ನಡೆಯುವಾಗ ಇವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮಾರ್ಗಮಧ್ಯೆಯೇ ಕುಸಿದು ಬಿದ್ದಿದ್ದಾರೆ. 37 ವರ್ಷದ ಸೂರಜ್‌ ಇತ್ತೀಚಗಷ್ಟೇ ಆಂಜಿಯೋಪ್ಲಾಸ್ಟ್‌ ಮಾಡಿಸಿಕೊಂಡಿದ್ದರು ಎಂದೂ ತಿಳಿದು ಬಂದಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸಮಾವೇಶದಲ್ಲಿ 4000 ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಆದರೂ ಒಂದು ಸಾವು ಸಂಭವಿಸಿದೆ.
ಕಳೆದ ವರ್ಷ ಕರೂರ್‌ ನಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ 41 ಮಂದಿ ಅಸುನೀಗಿದ್ದರು. 
ಸೂರಜ್‌ ಕಳೆದ 20 ವರ್ಷಗಳಿಂದ ಸೂರಜ್‌ ಸೇಲಂ ಜಿಲ್ಲೆಯ ಕೊಂಡಲಂಪಟ್ಟಿ ಬಳಿಯ ಅರಸಮರತು ಕಟ್ಟೂರಿನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಮೃತರು ಪತ್ನಿ ಪ್ರಿಯಾ (35), 11 ವರ್ಷದ ಮಗಳು ಮತ್ತು ಏಳು ವರ್ಷದ ಮಗನನ್ನು ಅಗಲಿದ್ದಾರೆ.
ಸಮಾವೇಶಕ್ಕೂ ಇವರ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.