ಚೆನ್ನೈ: ತಮಿಳು ನಟ ವಿಜಯ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಗಳು ತೀವುಗೊಂಡಿವೆ. ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಮ್ ಚೆಂಗಲ್‌ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವ ಮಾಹಿತಿ ಹೊರಬಿದ್ದಿದೆ. ಅರ್ಜಿಯಲ್ಲಿ ಪತಿ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿರುವ ಸಂಗೀತಾ, ಪರಸ್ಪರ ಸಮ್ಮತಿಯ ಮೇರೆಗೆ ವಿವಾಹ ವಿಚ್ಛೇದನ ಮಂಜೂರು ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಕೋರ್ಟ್ ಹೊರಗಡೆಯೇ ಬಗೆಹರಿಸಿಕೊಳ್ಳಲು ವಿಜಯ ಆಸಕ್ತಿ ಹೊಂದಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಆರಂಭದಲ್ಲಿ ವಿಚ್ಚೇದನಕ್ಕೆ ಸಮ್ಮತಿಸದ ವಿಜಯ, ಇತ್ತೀಚೆಗೆ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಚ್ಚೇದನದಿಂದ ತಮ್ಮ ರಾಜಕೀಯ ಬದುಕಿಗೆ ಹಾನಿಯಾಗಬಹುದು ಎಂಬ ಆತಂಕವೂ ಇದ್ದಿತ್ತಂತೆ ಪತ್ನಿ ಸಂಗೀತಾ, ಪುತ್ರ ಜಾಸನ್ ಸಂಜಯ್ ಹಾಗೂ ಪುತ್ರಿ ದಿವ್ಯಾ ಶಾಸಾ ಅವರಿಗೆ ಒಟ್ಟು ₹250 ಕೋಟಿ ಪರಿಹಾರ ನೀಡಲು ವಿಜಯ ಸಿದ್ದರಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಮೊತ್ತವನ್ನು ಪತ್ನಿ ಮತ್ತು ಮಕ್ಕಳ ನಡುವೆ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗಿದೆ. 1999ರ ಆಗಸ್ಟ್‌ನಲ್ಲಿ ಕುಟುಂಬದವರ ಒಪ್ಪಿಗೆ ಪಡೆದು ವಿಜಯ-ಸಂಗೀತಾ ವಿವಾಹವಾಗಿದ್ದರು. ಶ್ರೀಲಂಕನ್ ತಮಿಳು ಮೂಲದ ಸಂಗೀತಾ, ವಿಜಯ ಅವರ ಅಭಿಮಾನಿಯಾಗಿ ಪರಿಚಯವಾಗಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇನ್ನೂ ವಿಜಯ ಅವರಿಗೆ ನಟಿ ತ್ರಿಶಾ ಜೊತೆ ಅಫೇರ್ ಇದೆ ಎಂಬ ವದಂತಿಗಳೂ ಹರಿದಾಡುತ್ತಿವೆ. ಆದರೆ ಈ ಕುರಿತು ಯಾವುದೇ ಅಧಿಕೃತ ದೃಢೀಕರಣ ಇಲ್ಲ. ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಆ ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ತಿಳಿದುಬಂದಿದೆ. ಈ ವಿಷಯದ ಬಗ್ಗೆ ವಿಜಯ ಅಥವಾ ಅವರ ಕುಟುಂಬದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಪ್ರಕರಣದ ಮುಂದಿನ ವಿಚಾರಣೆ ಬಗ್ಗೆ ಎಲ್ಲರ ಗಮನ ಸೆಳೆದಿದೆ.