ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲೆನ್ಸಿ ಸರ್ವೀಸಸ್ (TCS) ಕಂಪನಿಯಲ್ಲಿ ಬಲವಂತದ ಮತಾಂತರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಹಾಗೂ ಶಾಕಿಂಗ್ ಮಾಹಿತಿಗಳು ಹೊರಬೀಳುತ್ತಿವೆ.ಇದನ್ನೂ ಓದಿ: ನಮ್ಮ ಪ್ರತೀಕಾರ ಭೀಕರವಾಗಿರುತ್ತೆ: ಆಪರೇಷನ್ ಸಿಂಧೂರ್ ನೆನೆದ ಪಾಕ್ ಸೇನಾ ಮುಖ್ಯಸ್ಥ; ಭಾರತಕ್ಕೆ ಬೆದರಿಕೆ ಹಾಕಿದ ಆಸೀಮ್! ಕಿಂಗ್‌ನ್ ನಿದಾ ಖಾನ್! ಈ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ದ ಇಲ್ಲಿವರಿಗಿನ ವಿಚಾರಣೆಯಲ್ಲಿ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಿದಾ ಖಾನ್ (TCS Nida Khan), ಇಕೆ ಬಲಿಪಶುಗಳ ಮನೆಯಲ್ಲಿ ಬಲವಂತವಾಗಿ ಧಾರ್ಮಿಕ ಕ್ರಿಯೆ-ಕರ್ಮಗಳನ್ನು ಮಾಡುತ್ತಿದ್ದಳು ಹಾಗೂ ಅವರಿಗೂ ಭಾಗವಹಿಸುವಂತೆ ಒತ್ತಾಯ ಮಾಡುತ್ತಿದ್ದಳೆಂದು ತಿಳಿದು ಬಂದಿದೆ. ತಾನು ಗುರುತು ಮಾಡಿಕೊಂಡ ಯುವತಿಯರಿ ಮೊಬೈಲ್‌ಗೆ ಧಾರ್ಮಿಕ ಪ್ರವಚನಗಳ ವಿಡಿಯೋಗಳು, ಪೂಜಾ ವಿಧಾನಗಳು ಹಾಗೂ ತನ್ನ ಧರ್ಮಕ್ಕೆ ಸೇರಿದ ವಿವಿಧ ವಿಡಿಯೋಗಳಿಗೆ ಸಂಬಂಧಿಸಿದಂತೆ ಸುಮಾರು 171 ಕ್ಕೂ ಹೆಚ್ಚಿನ ವಿಡಿಯೋ ಲಿಂಕ್‌ಗಳನ್ನು ಈ ನಿದಾ ಖಾನ್ ಬಲಿಪಶುಗಳಿಗೆ ಶೇರ್ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ.
ಇದನ್ನೂ ಓದಿ: AIMIM ಒಂದು ಭಯೋತ್ಪಾದಕ ಸಂಘಟನೆ: ಓವೈಸಿ ಮತ್ತು ಬಿನ್ ಲಾಡೆನ್ ನಡುವೆ ವ್ಯತ್ಯಾಸವಿಲ್ಲ; ನಿತೇಶ್ ರಾಣೆ ವಾಗ್ದಾಳಿ!
Nitesh Rane on AIMIM ಹೀಗೆ ನಿರಂತರ ವಿಡಿಯೋ ಲಿಂಕ್‌ಗಳನ್ನು ಕಳಿಸಿ, ಅವನ್ನು ನೋಡುವಂತೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತಪ್ಪದೆ ಭಾಗವಹಿಸುವಂತೆ ಮಾಡಿ ನಂತರ ಮತಾಂತರ ಮಾಡುತ್ತಿದ್ದಳು ಎಂದು ಎಸ್‌ಐಟಿ ತನಿಖೆ ಹೇಳುತ್ತಿದೆ. ಈ ಪ್ರಕರಣ ಈಗ ವಿಚಾರಣಾ ಹಂತದಲ್ಲಿದ್ದು ನಂತರದ ದಿನಗಳಲ್ಲಿ ಸಂಪೂರ್ಣ ಸತ್ಯಾಸತ್ಯತೆ ಹೊರಬೀಳಬೇಕಿದೆ.
ಜಾಮೀನು ನಿರಾಕರಿಸಿದ ನ್ಯಾಯಾಲಯ! ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿದಾ ಖಾನ್ ತಾನು ಗರ್ಭವತಿಯಾಗಿದ್ದೆನೆ, ಹಾಗೂ ನಾನು ಆ ಕಂಪನಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಬಹಳ ಸಮಯವಾಗಿದೆ. ಆದ್ದರಿಂದ ತನಗೆ ಜಾಮೀನನ್ನು ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಆದರೆ ನ್ಯಾಯಾಲಯ ಈ ಜಾಮೀನು ಅರ್ಜಿಯನ್ನು ವಜಾಮಾಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಇದನ್ನೂ ಓದಿ: ನಾಯಿಯನ್ನು ಕೊಂದ ಸೆಕ್ಯೂರಿಟಿ ಗಾರ್ಡ್: ಪೊಲೀಸ್ ಠಾಣೆ ಎದುರೇ ಮಹಿಳೆಯಿಂದ ಚಪ್ಪಲಿ ಏಟು; ವಿಡಿಯೋ ವೈರಲ್!