2026-03-07 04:58:11

Supreme Court Warns WhatsApp | ಗೌಪ್ಯತೆ ಕಾಪಾಡಿಕೊಳ್ಳಲು ಆಗದಿದ್ದರೆ ದೇಶದಿಂದ ನಿರ್ಗಮಿಸಿ: ವಾಟ್ಸಾಪ್ ಗೆ ಸುಪ್ರೀಂಕೋರ್ಟ್‌ ತಾಕೀತು | Speed News Kannada

Supreme Court Warns WhatsApp | ಗೌಪ್ಯತೆ ಕಾಪಾಡಿಕೊಳ್ಳಲು ಆಗದಿದ್ದರೆ ದೇಶದಿಂದ ನಿರ್ಗಮಿಸಿ: ವಾಟ್ಸಾಪ್ ಗೆ ಸುಪ್ರೀಂಕೋರ್ಟ್‌ ತಾಕೀತು | Speed News Kannada

ನವದೆಹಲಿ: ವಾಟ್ಸಾಪ್ ಗೌಪ್ಯತಾ ನೀತಿ (WhasApp Privacy Policy)ಯನ್ನು ಅನುಸರಿಸಲು ಸಾದ್ಯವಾಗದಿದ್ದರೆ ದೇಶದಿಂದ ನಿರ್ಗಮಿಸಿ ಎಂದು ವಾಟ್ಸಾಪ್ ಮಾಲೀಕತ್ವ ಹೊಂದಿರುವ ಮೆಟಾಗೆ ಸುಪ್ರೀಂಕೋರ್ಟ್‌ ಎಚ್ಚರಿಕೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ನೇತೃತ್ವದ ತ್ರಿಸದಸ್ಯ ಪೀಠ ಈ ಎಚ್ಚರಿಕೆ ನೀಡಿದೆ. ನಮ್ಮ ಒಂದೇ ಒಂದು ಡಾಟಾವನ್ನೂ ಪಡೆಯಲು ನಿಮಗೆ ಅವಕಾಶ ನೀಡುವುದಿಲ್ಲ. ಭಾರತೀಯ ಬಳಕೆದಾರರ ಗೌಪ್ಯಯನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಅಂದರೆ ದೇಶದಿಂದ ನಿರ್ಗಮಿಸಬಹುದು ಎಂದು ತಾಕೀತು ಮಾಡಿದೆ.
ವಾಟ್ಸಾಪ್ ನ 2021ರ ಖಾಸಗಿ ನೀತಿ ಕುರಿತಾದ ಅರ್ಜಿಯ ವಿಚಾರಣೆ ನಡೆಸುವಾಗ ಈ ಅಭಿಪ್ರಾಯಪಟ್ಟಿದೆ. ಅಮೆರಿಕ ಮೂಲದ ಮೇಟಾ ಕಂಪನಿಯು ವಾಟ್ಸಾಪ್ ತನ್ನ ಗೌಪ್ಯತಾ ನೀತಿಯನ್ನು ಬಳಸಿಕೊಂಡು ಬಳಕೆದಾರರ ದತ್ತಾಂಶವನ್ನು ವಾಣಿಜ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. 
ಬಳಕೆದಾರರ ಮಾಹಿತಿಯನ್ನು ಕಂಪನಿಗಳಿಗೆ ಮಾರಿಕೊಳ್ಳಲಾಗುತ್ತಿದೆ. ಉದಾಹರಣೆಗೆ ವಾಟ್ಸಾಪ್ನಲ್ಲಿ ವೈದ್ಯರು ಮೂರು ಔಷಧಗಳನ್ನು ಸೂಚಿಸಿದರೆ ಕೆಲವೇ ನಿಮಿಷಗಳಲ್ಲಿ ಅದೇ ಔಷಧಗಳಿಗೆ ಸಂಬಂಧಿಸಿದ ಜಾಹೀರಾತುಗಳ ಪ್ರವಾಹವೇ ಹರಿದು ಬರುತ್ತದೆ. ಇದು ಹೇಗೆ ಸಾಧ್ಯ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ವಾಟ್ಸಾಪ್ನ ಗೌಪ್ಯತಾ ನೀತಿ ಶ್ರೀಸಾಮಾನ್ಯರಿಗೆ ಅರ್ಥವಾಗುವುದೇ ಇಲ್ಲ. ಅನಕ್ಷರಸ್ಥ ಮತ್ತು ಬಡವರಿಗೆ ಈ ಗೌಪ್ಯತಾ ನೀತಿ ಹೇಗೆ ಅರ್ಥವಾಗುತ್ತದೆ?  ವಾಟ್ಸಾಪ್‌ ನೀತಿಗಳನ್ನು ಅರ್ಥ ಮಾಡಿಕೊಳ್ಳಲು ವಿದ್ಯಾವಂತರಿಗೆ ಕೆಲವೊಮ್ಮೆ ಕಷ್ಟವಾಗುತ್ತದೆ. ಇನ್ನು ಬಿಹಾರದ ಕುಗ್ರಾಮದಲ್ಲಿರುವವರೆಗೆ ಅದು ಹೇಗೆ ಅರ್ಥವಾಗುತ್ತದೆ ಎಂದೂ ನ್ಯಾಯಾಲಯ ಪ್ರಶ್ನಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.