ಬಾಗಲಕೋಟೆ: ಬಾಗಲಕೋಟೆಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇಲ್ಲಿನ ಕಿಲ್ಲಾ ಓಣಿಯಲ್ಲಿ ಮತ್ತೆ ಕಲ್ಲು ತೂರಾಟ ನಡೆದಿದ್ದು, ಮಾಂಸದ ಅಂಗಡಿಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಇಡೀ ಕಿಲ್ಲಾ ಓಣಿ ಉದ್ವಿಗ್ನಗೊಂಡಿದೆ.
ಕಲ್ಲೆಸೆತದಲ್ಲಿ ನಿರತರಾದ ಕಿಡಿಗೇಡಿಗಳ ಮೇಲೆ ಪೊಲೀಸರು ಲಾಠೀಚಾರ್ಜ್ ಮಾಡಿದ್ದಾರೆ. ಮುಸಲ್ಮಾನರ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಹಿಂದೂ ಸಂಘಟನೆಗಳು ಬಲವಂತ ಮಾಡುತ್ತಿವೆ. ಈ ವೇಳೆ ಪೊಲೀಸರ ಜೊತೆಗೆ ಪ್ರತಿಭಟನಾಕಾರರ ಮಾತಿನ ಚಕಮಕಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮತಾಂಧ ಮುಸ್ಲಿಮರನ್ನು ಬಂಧಿಸಿ: ಸಚಿವೆ ಶೋಭಾ ಆಗ್ರಹ.
ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಶಿವಾಜಿ ಭಾವಚಿತ್ರ ಮೆರವಣಿಗೆಯ ವೇಳೆ ಮತಾಂಧ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ, ಚಪ್ಪಲಿ ಎಸೆಯುವ ಮೂಲಕ ದುಷ್ಕೃತ್ಯ ಎಸಗಿದ್ದಾರೆ. ಈ ಆರೋಫಿಗಳನ್ನು ಕೂಡಲೇ ಬಂಧಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದಿಂದಲೇ ಕರ್ನಾಟಕ 'ಮತಾಂಧ ಮುಸ್ಲಿಮರ' ಬೀಡಾಗಿ ಪರಿವರ್ತನೆ ಹೊಂದುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹಿಂದೂಗಳು ಗಣೇಶ ಮೆರವಣಿಗೆ, ಶಿವಾಜಿ ಮೆರವಣಿಗೆ ಸೇರಿದಂತೆ ತಮ್ಮ ಹಬ್ಬಗಳನ್ನೂ ಸಂಭ್ರಮಿಸದಂತಾಗಿದೆ. ಡಿಜೆ ಹಳ್ಳಿ - ಕೆಜೆ ಹಳ್ಳಿ ಗಲಭೆಯಲ್ಲಿ ಪೊಲೀಸ್ ಠಾಣೆ ಹಾಗೂ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದ ಮತಾಂಧರನ್ನು ಕಾಂಗ್ರೆಸ್ ನಾಯಕರು ಅಮಾಯಕರು ಎಂದದ್ದೇ ಈ ರೀತಿಯ ಕುಕೃತ್ಯಗಳಿಗೆ ಪ್ರೋತ್ಸಾಹಕವಾಗಿದೆ.
ಗೃಹ ಮತ್ತು ಗೊತ್ತಿಲ್ಲ ಖಾತೆಗಳ ಸಚಿವರಾದ ಡಾ. ಜಿ. ಪರಮೇಶ್ವ್ ಅವರೇ, ಓಲೈಕೆ ರಾಜಕಾರಣದ ನಶೆಯಲ್ಲಿರುವ ತೇಲಾಡುತ್ತಿರುವ ಸಿಎಂ ಸಿದ್ದರಾಮಯ್ಯನವರೇ, ಹಿಂದೂಗಳ ಸುರಕ್ಷತೆಯೂ ಸರ್ಕಾರದ ಜವಾಬ್ದಾರಿ ಎನ್ನುವುದನ್ನು ಮರೆಯದಿರಿ. ಬಾಗಲಕೋಟೆಯಲ್ಲಿ ಪುಂಡಾಟಿಕೆ ಮೆರೆದ ಈ ಮತಾಂಧ ಮುಸ್ಲಿಮರನ್ನು ಶೀಘ್ರವೇ ಬಂಧಿಸಿ, ಶಿಕ್ಷಿಸಬೇಕೆಂದು ಸಚಿವರು ಆಗ್ರಹಪಡಿಸಿದ್ದಾರೆ.