ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (FKCCI), ಪೀಣ್ಯ ಕೈಗಾರಿಕೆ ಸಂಘ (PIA) ಜೊತೆಗೂಡಿ 2026ರ ಮೇ 29 ರಿಂದ 31 ರವರೆಗೆ 3ನೇ ಆವೃತ್ತಿಯ FKCCI ಗ್ಲೋಬಲ್ MSME ಕಾನ್ ಕ್ಲೇವ್ 2026 ಅನ್ನು ಆಯೋಜಿಸಿದ್ದು, ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಯಲ್ಲಿ ನಡೆಯಲಿದೆ.
FKCCI ಅಧ್ಯಕ್ಷೆ ಉಮಾ ರೆಡ್ಡಿ, ಮಾತನಾಡುತ್ತಾ, ಸಣ್ಣ ಕೈಗಾರಿಕಾ ವಲಯವು ಪರಸ್ಪರ ಸಂಪರ್ಕ ಸಾಧಿಸಲು, ಸಹಕಾರ ಬೆಳೆಸಿಕೊಳ್ಳಲು ಮತ್ತು ಹೊಸ ಅವಕಾಶಗಳನ್ನು ಅನ್ವೇಷಿಸಲು ಈ ಕಾನ್ ಕ್ಲೇವ್ ಸಹಕಾರಿಯಾಗಿದೆ. ವಿಜ್ಞಾನ ತಂತ್ರಜ್ಞಾನ ಇಂದು ಅತಿವೇಗವಾಗಿ ಬೆಳವಣಿಗೆಯಾಗುತ್ತಿದೆ. ಕೈಗಾರಿಕೆಗಳ ಬೆಳವಣಿಗೆಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ಎಐ (ಕೃತಕ ಬುದ್ದಿಮತ್ತೆ) ಇಂದು ಜಗತ್ತಿನಲ್ಲಿ ಕ್ರಾಂತಿ ಉಂಟು ಮಾಡುತ್ತಿದೆ, ನಮ್ಮಲ್ಲಿಯೂ ಇಂತಹ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ಇಂದು ದೊಡ್ಡ ಕೈಗಾರಿಕೆಗಳ ಬೆಳವಣಿಗೆಗೆ ಸಣ್ಣ ಮಧ್ಯಮ ಕೈಗಾರಿಕೆಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಈ ಕಾನ್ ಕ್ಲೇವ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗ ದೊಂದಿಗೆ, ಭಾರತ ಸರ್ಕಾರದ ಸಣ್ನ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯ, ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಇಲಾಖೆಯ ಬೆಂಬಲದೊಂದಿಗೆ ಆಯೋಜಿಸಲಾಗಿದೆ ಮತ್ತು ಇದರಲ್ಲಿ ಎಂಜಿನಿಯರಿಂಗ್ ಕ್ಷೇತ್ರದ – ತಯಾರಿಕೆ ಮತ್ತು ಸೇವೆಗಳನ್ನು ಕೇಂದ್ರೀಕರಿಸಲಾಗಿದೆ.
“$10 ಟ್ರಿಲಿಯನ್ ಯಾತ್ರೆ – ಸಂಕಲ್ಪದಿಂದ ಸಿದ್ದಿ: ಸ್ಥಳೀಯ ನಿರ್ಧಾರದಿಂದ ಜಾಗತಿಕ ಸಾಧನೆ” ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಆಯೋಜಿಸುತ್ತಿದ್ದು, ಈ ಕಾನ್ ಕ್ಲೇವ್ ನೀತಿ ನಿರ್ಧಾರಕಗಳು, ಜಾಗತಿಕ ಉದ್ಯಮ ನಾಯಕರು, ತಂತ್ರಜ್ಞಾನ ಒದಗಿಸುವವರು, ಹೂಡಿಕೆದಾರರನ್ನು ಒಗ್ಗೂಡಿಸುತ್ತದೆ ಸ್ಟಾರ್ಟ್ ಅಪ್ಸ್ ಮತ್ತು MSMEಗಳನ್ನು ಕೈಗಾರಿಕಾ ವೃದ್ದಿ, ನವೋತ್ಪಾದನೆ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಮುಂದುವರಿಸಲು ಒಂದು ಪರಿವರ್ತನಾತ್ಮಕ ವೇದಿಕೆಯಲ್ಲಿ ಒಟ್ಟುಗೂಡಿಸಲಾಗುತ್ತಿದೆ.
ದೇಶದ ಆರ್ಥಿಕತೆಗೆ ಸಣ್ಣ ಕೈಗಾರಿಕೆಗಳು ಮಹತ್ತರವಾದ ಕೊಡುಗೆಯನ್ನು ನೀಡುತ್ತಿವೆ. ಭಾರತ ದೇಶದಲ್ಲಿ ಸಣ್ಣ ಕೈಗಾರಿಕೆಗಳಿಂದ ಉತ್ಪಾದನೆಯಾಗುವ ವಸ್ತುಗಳು ಶೇ 40 ರಷ್ಟು ರಫ್ತು ಆಗುತ್ತಿವೆ. ಕೈಗಾರಿಕಾ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಲು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಸಣ್ಣ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿಕೆ ಒಂದು ಭಾಗವಾದರೆ, ನಾವು ಕೈಗೊಳ್ಳುವ ಕೈಗಾರಿಕೆಗಳ ಬಗ್ಗೆ ಜ್ಞಾನಾರ್ಜನೆ ಹಾಗೂ ಕೌಶಲ ಬಹು ಮುಖ್ಯ. ಆಗ ಮಾತ್ರ ನಾವು ಕೈಗೊಳ್ಳುವ ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ದೇಶದಲ್ಲಿ 20 ಲಕ್ಷ ಸಣ್ಣ ಕೈಗಾರಿಕೆಗಳಿದ್ದು, 25 ಕೋಟಿಗೂ ಹೆಚ್ಚು ಜನ ಉದ್ಯೋಗ ಕಂಡುಕೊಂಡಿದ್ದಾರೆ. ಇಂತಹ ಕ್ಷೇತ್ರವನ್ನು ಉತ್ತೇಜನ ಮಾಡಿ ಬೆಳೆಸಿದರೆ, ದೇಶದ ಆರ್ಥಿಕತೆಗೆ ಮತ್ತಷ್ಟು ದೊಡ್ಡ ಕೊಡುಗೆ ಸಿಗುತ್ತದೆ. ನಮ್ಮ ರಾಜ್ಯದಲ್ಲಿ ಸಣ್ಣ ಮಧ್ಯಮ ಮತ್ತು ಅತೀ ಸಣ್ಣ ಕೈಗಾರಿಕೆಗಳು ಹೆಚ್ಚು ಬೆಳವಣಿಗೆಯಾಗಬೇಕಾಗಿದೆ. ಈ ಕಾನ್ ಕ್ಲೇವ್ ಗೆ ಕೇಂದ್ರ, ರಾಜ್ಯ ಸರ್ಕಾರಗಳು ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತಿದೆ ಎಂದರು.
ಮೂರು ದಿನಗಳ ಕಾನ್ ಕ್ಲೇವ್ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಿಭಿನ್ನ ಬೆಳವಣಿಗೆಯ ಅಗತ್ಯಗಳನ್ನು ಪೂರೈಸುವ ರಚಿಸಲಾದ ಸೆಷನ್‌ಗಳು ಕ್ರೆಡಿಟ್ ಪ್ರವೇಶ ಮತ್ತು ಡಿಜಿಟಲೀಕರಣ ಸೇರಿದಂತೆ ಪ್ರಮುಖ ವಿಭಾಗಗಳ ಬಗ್ಗೆ ಹಾಗೂ ಮಧ್ಯಮ ನಿರ್ವಹಣೆ, AI ಚಾಲಿತ ಉತ್ಪಾದಕತೆ ಮತ್ತು ಸಣ್ಣ ಉದ್ಯಮಗಳಿಗಾಗಿ TReDS ಹಣಕಾಸು ವೇದಿಕೆಗಳು; ಮತ್ತು IPO ಸಿದ್ಧತೆ, ESG ಅನುಪಾಲನೆ ಮತ್ತು ಜಾಗತಿಕ ಮೌಲ್ಯ ಸರಪಳಿ ಏಕತೆ. ಈ ಕಾನ್ ಕ್ಲೇವ್ 30ಕ್ಕೂ ಹೆಚ್ಚು ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗಗಳನ್ನು ಹೊಂದಿರುವ ದೊಡ್ಡ ಕೈಗಾರಿಕಾ ಪ್ರದರ್ಶನವನ್ನು, B2B ಮತ್ತು B2G ನೆಟ್ವರ್ಕಿಂಗ್ ಸೆಷನ್‌ಗಳು, ವೆಂಡರ್ ಅಭಿವೃದ್ಧಿ ಯೋಜನೆಗಳು, ತಂತ್ರಜ್ಞಾನ ಪ್ರದರ್ಶನಗಳು ಮತ್ತು ನಾವೀನ್ಯತೆಯ ನಾಯಕರು, ಬೆಳವಣಿಗೆ ವೇಗದವರನ್ನು & ಜಾಗತಿಕ ಚಾಂಪಿಯನ್ ರವರುಗಳನ್ನು ಗೌರವಿಸುವ ಪ್ರಸಿದ್ಧ MSME ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಹ ಆಯೋಜಿಸುತ್ತಿದ್ದೇವೆ.
ಈ ಕಾನ್ ಕ್ಲೇವ್ ಅನ್ನು ಶುಕ್ರವಾರ ದಿ. 29 ಮೇ 2026ರಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರವರು ಉದ್ಘಾಟಿಸುತ್ತಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಮ್. ಬಿ. ಪಾಟೀಲ್ ಮತ್ತು ಸಣ್ಣ ಕೈಗಾರಿಕಾ ಸಚಿವ ಸಚಿವ ಶರಣಬಸಪ್ಪ ದರ್ಶನಪುರ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.