2026-06-08 04:35:14

Silent birds die from heatstroke | ಬಿಸಿಲಿನ ತಾಪಮಾನ ತಡೆಯಲಾಗದೇ ಪ್ರಾಣಬಿಟ್ಟ ಮೂಕ ಪಕ್ಷಿಗಳು | Speed news kannada

Silent birds die from heatstroke | ಬಿಸಿಲಿನ ತಾಪಮಾನ ತಡೆಯಲಾಗದೇ ಪ್ರಾಣಬಿಟ್ಟ ಮೂಕ ಪಕ್ಷಿಗಳು | Speed news kannada

ಈ ಬಾರಿ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ಸೂರ್ಯನ ತಾಪಮಾನ ಪ್ರಖರತೆ ಹೆಚ್ಚಾಗಿದ್ದು, ತುಮಕೂರಿನ ಜಿಲ್ಲೆಯಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ 32 ನವಿಲುಗಳ ಮಾರಣಹೋಮವಾಗಿದೆ. ಬೇಸಿಗೆ ಬಿಸಿಲಿನ ತಾಪಮಾನ ತಾಳಲಾರದೆ ಮೂಕ ಪಕ್ಷಿಗಳು ಪ್ರಾಣಬಿಟ್ಟಿವೆ.  ತುಮಕೂರಿನ ಊರ್ಡಿಗೆರೆ ಮತ್ತು ಗೂಳೂರು ಹೋಬಳಿಯಲ್ಲಿ ಮೂಕ ಪಕ್ಷಿಗಳ ಮಾರಣಹೋಮವಾಗಿದ್ದು. ಏಪ್ರಿಲ್ 16 ರಂದು ಒಂದೇ ದಿನ 11 ನವಿಲುಗಳು ಪ್ರಾಣ ಬಿಟ್ಟಿದ್ರೆ, ಏಪ್ರಿಲ್ 21 ರಂದು ಮತ್ತೆ 10 ನವಿಲುಗಳು ದಾರುಣವಾಗಿ ಸಾವನ್ನಪ್ಪಿದೆ. ಇನ್ನೂ ನವಿಲುಗಳ ಈ ಮಾರಣಹೋಮದಿಂದಾಗಿ ಜನ ಕಂಗಲಾಗಿದ್ದಾರೆ. ಇದೇ ರೀತಿ ತಾಪಮಾನ ಮುಂದುವರೆದರೆ ಪ್ರಾಣಿ, ಪಕ್ಷಿಗಳು ಬದುಕುವುದು ಹೇಗೆ ಎಂಬುದರ ಬಗ್ಗೆ ಜನರಲ್ಲಿ ಚಿಂತೆ ಮೂಡಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.