2026-06-08 04:36:18

Siddaramaiah Kidi Has Not Given A Single Rupee In The Budget. | ಬಜೆಟ್‌ನಲ್ಲಿ ಒಂದು ರೂಪಾಯಿ ಕೊಟ್ಟಿಲ್ಲ ಸಿದ್ದರಾಮಯ್ಯ ಕಿಡಿ | Speed News Kannada

Siddaramaiah Kidi Has Not Given A Single Rupee In The Budget. | ಬಜೆಟ್‌ನಲ್ಲಿ ಒಂದು ರೂಪಾಯಿ ಕೊಟ್ಟಿಲ್ಲ ಸಿದ್ದರಾಮಯ್ಯ ಕಿಡಿ | Speed News Kannada

ಕಲಬುರಗಿ: ಕೇಂದ್ರ ಬಜೆಟ್ ಕುರಿತಂತೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕಕ್ಕೆ ಅನ್ಯಾಯ ಎಂದಿದ್ದಾರೆ. ನೀರಾವರಿ ಯೋಜನೆಗೆ ಕೇಳಿದ್ದೇವೆ. ಒಂದೇ ಒಂದು ನೀರಾವರಿ ನಮಗೆ ಕೊಟ್ಟಿಲ್ಲ.
 ನಿರ್ಮಲಾ ನೀತಾರಾಮ್ ಅವರು ಬಜೆಟ್‌ನಲ್ಲಿ 5300 ಕೋಟಿ ಕೊಡ್ತೀನಿ ಅಂತ ಘೋಷಣೆ ಮಾಡಿದ್ರು. ಅಂದ್ರೆ  ಇದು 4ನೇ ಬಜೆಟ್, ಆದ್ರೆ ಒಂದು ರೂಪಾಯಿ ಕೊಟ್ಟಿಲ್ಲ ಅಂತ ಕಿಡಿಕಾರಿದ್ರು. ಮೇಕೆದಾಟು ಯೋಜನೆಗೆ ತಮಿಳುನಾಡು ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದ್ರು. ಆದ್ರೆ ಕೇಂದ್ರ ಸರ್ಕಾರ ವಿವಾದ ಬಗೆ ಹರಿಸಿಲ್ಲ. ಕರ್ನಾಟಕದಲ್ಲಿ ಮೇಕೆದಾಟು ಕಟ್ಟುತ್ತಿದ್ದೇವೆ ಆದ್ರೆ ಅದು ಕೂಡಾ ಆಗಿಲ್ಲ, ಮಹಾದಾಯಿ ಯೋಜನೆಗೆ ಕ್ಲಿಯರೆನ್ಸ್ ಇನ್ನೂ ಕೊಟ್ಟಿಲ್ಲ. ಅದು ನಿರೀಕ್ಷೆ ಕೂಡಾ ಹುಸಿ ಆಗಿದೆ ಅಂತ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.