ಬೆಂಗಳೂರು:ಪಕ್ಷದ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ 3 ಗಂಟೆಯ ನಂತರ ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಖಚಿತವಾಗಿದೆ. ಈಗಾಗಲೇ ಮುಖ್ಯಮಂತ್ರಿಗಳ ಕಚೇರಿ ಲೋಕಭವನಕ್ಕೆ ಸಂದೇಶ ಕಳುಹಿಸಿದ್ದು ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೋರಿದೆ ಎಂದು ತಿಳಿದು ಬಂದಿದೆ. ಮೂರು ಗಂಟೆಯ ನಂತರ ಬರಬಹುದು ಎಂಬ ಸಂದೇಶ ಸಿಎಂ ಕಚೇರಿಗೆ ರವಾನೆಯಾಗಿದೆ.
ಸಚಿವರಾದ ಜಮೀರ್ ಅಹಮದ್ ಖಾನ್, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ, ಸಂತೋಷ್ ಲಾಡ್, ಶಿವರಾಜ ತಂಗಡಗಿ ಸೇರಿದಂತೆ ಹಲವು ಸಚಿವರು, ಶಾಸಕರು ಭೇಟಿ ನೀಡಿದ್ದರು. ಬೆಂಗಳೂರಿನ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದಶಾಸಕ ಆರ್.ವಿ. ದೇಶಪಾಂಡೆ ನಾಳೆ ರಾಜೀನಾಮೆ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಎಂದು ಅವರು ರಾಜೀನಾಮೆ ನೀಡುವುದನ್ನು ಖಚಿತಪಡಿಸಿದರು.
ಸಿಎಂ ಬೇಟಿ ಮಾಡಿದ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯಿಸಿ ಮಾಧ್ಯಮಗಳಲ್ಲಿ ರಾಜೀನಾಮೆ ಸುದ್ದಿ ಬರುತ್ತಿದೆ ಎಂದು ನಾನು ನಮ್ಮ ಕಳವಳ ವ್ಯಕ್ತಪಡಿಸಿದೆವು. ಆದರೆ, ಅವರು ಮೌನಕ್ಕೆ ಶರಣಾಗಿದ್ದರು ಎಂದರು.
ಈ ಮಧ್ಯೆ ರಾಜೀನಾಮೆ ನೀಡುತ್ತಾರೆ ಎನ್ನವುದು ಖಚಿತವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರ ನಿವಾಸ ಕಾವೇರಿ ಎದುರು ಜನಸಾಗರವೇ ಸೇರಿದೆ. ನಾವು ರಾಜೀನಾಮೆ ಕೊಡಬೇಡಿ ಎಂದು ಹೇಳಿದ್ದೇವೆ.
ಮುಂದೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಸ್ಥಳೀಯ ಸಂಸ್ಥೆ ಚುನಾವಣೆ ಬರುತ್ತಿದೆ. ನಮ್ಮ ಬೆಂಬಲಿಗರು ಗೆಲುವು ಸಾಧಿಸದಿದ್ದರೆ ಪಕ್ಷಕ್ಕೆ ಹೊಡೆತ ಬೀಳುತ್ತದೆ. ಇದರಿಂದ ಮುಂದೆ ನಮ್ಮ ಭವಿಷ್ಯಕ್ಕೂ ಹಾನಿಯಾಗಲಿದೆ ಎಂದೂ ತಿಳಿಸಿದ್ದಾರೆ. ಆದರೂ ಸಿದ್ದರಾಮಯ್ಯ ಮೌನವಾಗಿದ್ದರು