ನಿನ್ನೆ ನಡೆದ ವಿಧಾನಸಭೆಯ ಕಾರ್ಯಕಲಾಪದಲ್ಲಿ ಅಕ್ಷರಶಃ ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವಿಪಕ್ಷ ನಾಯಕರ ಮೇಲೆ ಕೆಂಡಾಮಂಡಲವಾಗಿದ್ರು. ವಿಬಿ ಜಿ ರಾಮ್ ಜಿ ಯನ್ನು ವಿರೋಧಿಸಿ ಮಂಡಿಸಿದ ನಿರ್ಣಯ ಪರ ಮಾತನಾಡಲು ಮುಂದಾದ ಶಿವಲಿಂಗೇಗೌಡರನ್ನು ಕೆಣಕಿದ ಶಾಸಕರಾದ ಶರಣು ಸಲಗರ ಹಾಗೂ ವೇದವ್ಯಾಸ ಕಾಮತ್ ರನ್ನು, ಶಿವಲಿಂಗೇಗೌಡ ಹಿಗ್ಗಾಮುಗ್ಗಾ ಬೈದಿದ್ದರು. ಈ ವಿಚಾರವಾಗಿ ಇದೀಗ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಸ್ವತಃ ಶಾಸಕ ಶಿವಲಿಂಗೇಗೌಡ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ನಾನು ಸಲಗರ, ವೇದವ್ಯಾಸ ಕಾಮತ್ ಬಗ್ಗೆ ಮಾತ್ರ ಮಾತಾಡಿದ್ದು. ತಹಶೀಲ್ದಾರ್ ಆಗಿರುವ ಪತ್ನಿಯಿಂದಲೇ ಶಾಸಕ ಶರಣು ಸಲಗರ ಎಂಎಲ್ಎ ಆಗಿದ್ದಾರೆಂದು ನಮ್ಮ ಕಡೆಯವ್ರು ಹೇಳಿದ್ರು. ಹೆಣ್ಮಗು ವಿಚಾರವಾಗಿ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಹೆಣ್ಣುಮಕ್ಕಳ ಬಗ್ಗೆ ಯಾವತ್ತೂ ನಾನು ಮಾತನಾಡಿಲ್ಲ ಎಂದಿದ್ದಾರೆ.
ನನ್ನನ್ನು ಟಾರ್ಗೆಟ್ ಮಾಡಿ ಮಾತಾಡಿದ್ದು ಯಾಕೆ? ಅಧಿವೇಶನದಲ್ಲಿ ಬಿಜೆಪಿ ಶಾಸಕರು ಥೈ ತಕ ಅಂತಾ ಕುಣಿದಿದ್ದರು. ಅವರ ಆಡಿಯೋ ಹೋಗಲ್ಲ ಅಂತಾ ಬಾಯಿಗೆ ಬಂದಂತೆ ಕೂಗಿದ್ರು. ನನ್ನನ್ನು ಕೊಬ್ಬರಿ ಕಳ್ಳ ಅಂದ್ರು, ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೋ ಕೊಟ್ಟೆ. ನಿಮ್ಮಪ್ಪನಿಗೆ ಕೊಟ್ಟಿದ್ದೀನಿ ತೆಗೆದುಕೊ ಅಂತಾ ಹೇಳಿದ್ದೆ. ಬಿಜೆಪಿಯವರಿಗೆ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಯಾಕೇ ಬೇಕು? ಕಳ್ಳ ಎಂದು ಪ್ರಚೋದಿಸಿದ್ದಕ್ಕೆ ನಾನು ಹಾಗೆ ಮಾತನಾಡಿದ್ದು. ನನ್ನನ್ನ ಕಳ್ಳ ಅಂದ್ರೆ ದೇವರೇ, ಬುದ್ಧಿ, ಗುರುಗಳೇ ಅಂತಾ ಹೇಳ್ಬೇಕಿತ್ತಾ? ಅಂಥಾ ಪ್ರಶ್ನಿಸಿದ್ದಾರೆ. ನಾನು RSS ಬಗ್ಗೆ ಮಾತಾಡಿಲ್ಲ, ಅದರ ಬಗ್ಗೆ ನನಗೆ ಗೌರವ ಇದೆ. RSSನವನಾಗಿ ಯಾಕೆ ಕುಣಿತಿದಿಯಾ ಅಂತಾ ಕಾಮತ್ಗೆ ಕೇಳಿದ್ದೆ ಎಂದಿದ್ದಾರೆ.