2026-06-08 03:53:36

Shivaji procession riots | ಶಿವಾಜಿ ಮೆರವಣಿಗೆ ಗಲಭೆ ಮಸೀದಿಯ ವಿದ್ಯುತ್ ಬಂದ್‌ ಮಾಡಲು ಶಾಸಕ ಯತ್ನಾಳ ಆಗ್ರಹ | Speed News Kannada

Shivaji procession riots | ಶಿವಾಜಿ ಮೆರವಣಿಗೆ ಗಲಭೆ ಮಸೀದಿಯ ವಿದ್ಯುತ್ ಬಂದ್‌ ಮಾಡಲು ಶಾಸಕ ಯತ್ನಾಳ ಆಗ್ರಹ | Speed News Kannada

ಬೆಂಗಳೂರು: ಬಾಗಲಕೋಟೆಯಲ್ಲಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಮುಸಲ್ಮಾನರು ಕಲ್ಲು, ಚಪ್ಪಲಿ ತೂರಿ ಅಶಾಂತಿ ಸೃಷ್ಟಿಸಿರುವುದನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಂಡಿಸಿದ್ದಾರೆ.
ಮೊಘಲರ ಹುಟ್ಟಡಗಿಸಿದ ವೀರ ಪರಾಕ್ರಮಿ, ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನೇ ಗುರಿಯಾಗಿಸಿಕೊಂಡು ಮಸೀದಿಗಳಿಂದ ಕಲ್ಲು, ಚಪ್ಪಲಿಗಳನ್ನು ಎಸೆದವರ ಮೇಲೆ ಪೊಲೀಸರು ಗೂಂಡಾ ಕಾಯ್ದೆಯಲ್ಲಿ ಬಂಧಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.
 ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಸೇರಿದಂತೆ ಈ  ಪ್ರಚೋದಿತ ಗಲಭೆಯಲ್ಲಿ ಗಾಯಗೊಂಡವರಿಗೆ ಮಸೀದಿಯ ಆಡಳಿತ ಮಂಡಳಿಯೇ ಜವಾಬ್ದಾರಿ ತೆಗೆದುಕೊಂಡು ವೈದ್ಯಕೀಯ ವೆಚ್ಚ ಹಾಗೂ ಪರಿಹಾರವನ್ನು ನೀಡಬೇಕು ಎಂದೂ ಸರ್ಕಾರವನ್ನು ಒತ್ತಾಯಿಸಿದ್ದಾರೆ. 
ಮತ್ತೊಮ್ಮೆ, ಮಸೀದಿಯಿಂದ ಕಲ್ಲು ತೋರುವ ಘಟನೆಯಾದರೆ ಮಸೀದಿಯ ವಿದ್ಯುತ್ ಹಾಗೂ ನೀರಿನ ಸರಬರಾಜನ್ನು ಸರಕಾರ ಸ್ಥಗಿತಗೊಳಿಸಿ ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ.
ಬಾಗಲಕೋಟೆ ಕಲ್ಲು ತೂರಾಟ ಘಟನೆಗೆ ಹಿಂದೂ ಪರ ಹೋರಾಟಗಾರ ಪ್ರಮೋದ್‌ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ಹೀನವಾದ ಕೃತ್ಯ, ದೇಶದ್ರೋಹದ ಕೆಲಸ. ಇಂತಹವರನ್ನು ಮಟ್ಟ ಹಾಕಲು ಹಿಂದೂ ಸಮಾಜ ಹೋರಾಡಬೇಕು ಎಂದು ಆಗ್ರಹಪಡಿಸಿದ್ದಾರೆ. 
ಮಸೀದಿ ಮುಂದೆ ಮೆರವಣಿಗೆ ಹೋಗಿದ್ದಕ್ಕೆ ಕಲ್ಲು , ಚಪ್ಪಲಿ ತೂರಿದ್ದಾರೆ. ಇಂಥವರನ್ನು ಸಮಾಜದಿಂದ ಬಹಿಷ್ಕಾರ ಹಾಕಲೇಬೇಕು ಎಂದೂ ಒತ್ತಾಯಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.