2026-06-25 03:41:09

Self proclaimed baba arrested for sending black magic parcel to airport | ಏರ್ಪೋರ್ಟ್ ಗೆ ಮಾಟ ಮಂತ್ರದ ಪಾರ್ಸೆಲ್ ಕಳಿಸಿದ್ದ ಸ್ವಯಂಘೋಷಿತ ಬಾಬಾ ಅರೆಸ್ಟ್ | Speed News Kannada

Self proclaimed baba arrested for sending black magic parcel to airport | ಏರ್ಪೋರ್ಟ್ ಗೆ ಮಾಟ ಮಂತ್ರದ ಪಾರ್ಸೆಲ್ ಕಳಿಸಿದ್ದ ಸ್ವಯಂಘೋಷಿತ ಬಾಬಾ ಅರೆಸ್ಟ್ | Speed News Kannada

ಬೆಂಗಳೂರು : ಬೆಂಗಳೂರಿನ KIAL ಗೆ ಮಾಟ ಮಂತ್ರದ ಪಾರ್ಸೆಲ್ ಕಳುಹಿಸಿ ಆತಂಕ ಸೃಷ್ಟಿಸಿದ್ದ ಸ್ವಯಂ ಘೋಷಿತ ಬಾಬಾ ರನ್ನು ಪೊಲೀಸರು ಬಂಧಿಸಿದ್ದಾರೆ.
ಪಾರ್ಸೆಲ್ ಬಂದಿದ್ದ ಬಾಕ್ಸ್ ಸಂಬಂಧ ಕೆಐಎಎಲ್ ಅಧಿಕಾರಿಗಳು ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಚರಣೆ ನಡೆಸಿ ಪಾರ್ಸೆಲ್ ಕಳುಹಿಸಿದ್ದ ವ್ಯಕ್ತಿಯನ್ನು ಹೈದರಾಬಾದ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಸುಬಾಷ್ ಜೈ ಅಜೀಜ್ ಎಂದು ಗುರುತಿಸಲಾಗಿದೆ.
ಇನ್ನು, ಹೈದರಾಬಾದ್‌ನಲ್ಲಿ ಸಿಕ್ಕ ಸುಬಾಷ್ ಜೈ ಅಜೀಜ್ ನನ್ನು ಹಿಡಿದು ಬೆಂಗಳೂರು ಕರೆತಂದು ವಿಚಾರಣೆ ನಡೆಸಿದ್ದಾರೆ. ತಾನೊಬ್ಬ ಬಾಬಾ ಎಂದು ಆತ ಹೇಳಿಕೊಂಡಿದ್ದಾನೆ. ಅಲ್ಲದೇ ವಿಮಾನ ದುರಂತ ಸಂಭವಿಸದಿರಲಿ ಎಂದು ಪೂಜೆ ಮಾಡಿ ಕಳುಹಿಸಿರುವುದಾಗಿ ಹೇಳಿದ್ದಾನೆ.
ಏರ್ಪೋಟ್್ರ ಗೆ ಬಂದಿದ್ದ ಪಾರ್ಸೆಲ್ ಮಾಟ-ಮಂತ್ರದ ಸಾಮಗ್ರಿಗಳು ಇದ್ದವು. ಇದರಿಂದ ಸಿಬ್ಬಂದಿ ಬೆಚ್ಚಿಬಿದ್ದಿದ್ದು, ಪೂಜೆ ಮಾಡಿ ಪಾರ್ಸೆಲ್ ಮಾಡಲಾಗಿದ್ದ ಈ ವಸ್ತುಗಳನ್ನು ಕಂಡು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಕಳೆದ ತಿಂಗಳು ಯುಪಿ ಯಿಂದ ನೇರವಾಗಿ ಬೆಂಗಳೂರಿಗೆ ಬಂದಿದ್ದ ಈತ ಶ್ರೀಲಂಕಾ ಭಾಷೆಯಲ್ಲಿ ಪತ್ರವನ್ನ ಬರೆದು ಬಾಕ್ಸ್‌ನಲ್ಲಿ ಹಾಕಿದ್ದನು. ಸಿಇಓ ಹೆಸರಿಗೆ ಕೋರಿಯರ್ ಮಾಡಿ ಹೋಗಿದ್ದನು. ಬಳಿಕ ಪೋಸ್ಟ್ ಆಫೀಸ್ ಸಿಬ್ಬಂದಿ ಕೆಐಎಎಲ್ ಕಚೇರಿಗೆ ತೆರಳಿ ಬಾಕ್ಸ್ ಡೆಲೆವರಿ ಮಾಡಿದ್ದು, ಆ ವೇಳೆ ಬಾಕ್ಸ್ ಓಪನ್ ಮಾಡಿದಾಗ ಎಲ್ಲಾ ವಸ್ತು ಮಾಟ ಮಂತ್ರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿತ್ತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.