2026-06-08 04:44:07

Secret Of The Treasure | ಲಕ್ಕುಂಡಿಯಲ್ಲಿ ನಿಧಿಗೂ ಹಾವಿಗೂ ರಹಸ್ಯ ಏನು? | Speed News Kannada

 Secret Of The Treasure | ಲಕ್ಕುಂಡಿಯಲ್ಲಿ ನಿಧಿಗೂ ಹಾವಿಗೂ ರಹಸ್ಯ ಏನು? | Speed News Kannada

ಲಕ್ಕುಂಡಿ: ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನದ ವೇಳೆ 3 ಹೆಡೆಯ ನಾಗರ ಕಲ್ಲು ಸಿಕ್ಕಿದೆ. ಈ 12 ದಿನಗಳಲ್ಲಿ ಬಹುತೇಕ ಪ್ರತಿನಿತ್ಯ ಒಂದಲ್ಲಾ ಒಂದು ಪ್ರಾಚ್ಯಾವಶೇಷ ಗೋಚರವಾಗ್ತಿದೆ. ಇನ್ನು ನಿಧಿ ಇರುವಲ್ಲಿ ನಾಗರಹಾವು ಇರುತ್ತೆ, ಹೀಗಾಗಿ ನಾಗರ ಮೂರ್ತಿ ಸಿಕ್ಕಿದೆ ಅಂತ ಕೆಲವರು ನಿಧಿ ಎಲ್ಲಿ ಇರುತ್ತೇ ಅಲ್ಲಿ ನಾಗರ ಕಲ್ಲು ಇರುತ್ತೇ ಅಂತ ಪ್ರವಾಸಿ ಮಿತ್ರ ಆಲಪ್ಪ ತುಳಿಸಿಮನಿ ಎಂಬುವರು ಹೇಳಿದ್ದಾರೆ. ನಾಗರ ಸರ್ಪಗಳಲ್ಲಿ ಮೂರು ಹೆಡೆ, ಪಂಚಮುಖಿ, ಸಪ್ತ ಮುಖಿ ಇರುತ್ತವೆ. ಅವು ನಿಧಿ ಇರುವ ಸ್ಥಳವನ್ನು ಗುರುತು ಮಾಡುತ್ತವೆ. ಇದು ಲಕ್ಕುಂಡಿಯಲ್ಲಿ ಲಕ್ಷ್ಮೀ ವಾಸಸ್ಥಾನ ಸೂಚಿಸುತ್ತದೆ ಎಂದಿದ್ದಾರೆ.
ದೇವಾನು ದೇವತೆಗಳ ವಾಹನ ನಾಗಸರ್ಪವಾಗಿದೆ. ವಿಷ್ಣುವಿನ ವಾಹನವು ಆಗಿದೆ, ವೈಕುಂಠದ ಚಿತ್ರ ನೋಡಿದ್ರೆ ಗೊತ್ತಾಗುತ್ತದೆ. ಸರ್ಪದ ಬಾಯಿಯಲ್ಲಿ ಮಣಿ ಇರುತ್ತದೆ.. ಒಂದು ಕಡೆಗೆ ಇಟ್ಟು ಆಹಾರ ಹುಡುಕಾಟ ಮಾಡುತ್ತೇ. ಮಣಿಯನ್ನು ಮುಟ್ಟಲು ಹೋದವರಿಗೆ ಉಳಿಗಾಲವಿಲ್ಲ. ನಾಗಮಣಿಯನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ, ಅಲ್ಲಿ ಸತ್ತು ಹೋಗ್ತಾರೆ ಅಂತ ಎಚ್ಚರಿಸಿದ್ರು.
ಲಕ್ಕುಂಡಿಯಲ್ಲಿ 12ನೇ ದಿನವೂ ಉತ್ಖನನ ಕಾರ್ಯ ನಡೆಯಿತು. ಇಂದು ಉತ್ಖನನದ ವೇಳೆ 3 ಹೆಡೆಯ ನಾಗರ ಕಲ್ಲು ಪತ್ತೆಯಾಗಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನದ ವೇಳೆ 3 ಹೆಡೆಯ ನಾಗರ ಕಲ್ಲು ಸಿಕ್ಕಿದೆ. ಈ 12 ದಿನಗಳಲ್ಲಿ ಬಹುತೇಕ ಪ್ರತಿನಿತ್ಯ ಒಂದಲ್ಲಾ ಒಂದು ಪ್ರಾಚ್ಯಾವಶೇಷ ಗೋಚರವಾಗ್ತಿದೆ. ಇನ್ನು ನಿಧಿ ಇರುವಲ್ಲಿ ನಾಗರಹಾವು ಇರುತ್ತೆ, ಹೀಗಾಗಿ ನಾಗರ ಮೂರ್ತಿ ಸಿಕ್ಕಿದೆ ಅಂತ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.