2026-03-07 07:32:59

Rs10 Thousand Deposited in the Accounts of 25 lakh women in Bihar | ಬಿಹಾರದ 25 ಲಕ್ಷ ಮಹಿಳೆಯರ ಖಾತೆಗೆ ಬಿತ್ತುತಲಾ ರೂ 10 ಸಾವಿರ | Speed News Kannada

Rs10 Thousand Deposited in the Accounts of 25 lakh women in Bihar | ಬಿಹಾರದ 25 ಲಕ್ಷ ಮಹಿಳೆಯರ ಖಾತೆಗೆ ಬಿತ್ತುತಲಾ ರೂ 10 ಸಾವಿರ | Speed News Kannada

ಪಟ್ನಾ: ಬಿಹಾರದಲ್ಲಿ ಇತ್ತೀಚೆಗೆ ಮತ್ತೆ ಅಧಿಕಾರ ರಚಿಸಿದ ಮುಖ್ಯಮಂತ್ರಿ ನಿತೀಶ ಕುಮಾರ್‌ ಸರ್ಕಾರ ಮಹಿಳಾ ರೋಜ್‌ಗಾರ್ ಯೋಜನೆ ಅಡಿಯಲ್ಲಿ ರಾಜ್ಯದ 25 ಲಕ್ಷ ಮಹಿಳೆಯರ ಬ್ಯಾಂಕ್‌ ಖಾತೆಗೆ ರೂ.10 ಸಾವಿರ ಜಮೆ ಮಾಡಿದೆ. 2025ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಚಾಲನೆ ನೀಡಿದ್ದರು.
ಮಹಿಳಾ ಸಬಲೀಕರಣ ಹಾಗೂ ಸ್ವ–ಉದ್ಯೋಗಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಅಡಿಯಲ್ಲಿ ಉದ್ಯಮಗಳನ್ನು ಸ್ಥಾಪಿಸಿರುವ ಮಹಿಳೆಯರಿಗೆ ರೂ. 2 ಲಕ್ಷದವರೆಗೆ ಹಣಕಾಸು ನೆರವು ಒದಗಿಸುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಭರವಸೆ ನೀಡಿದ್ದರು.
ಇದುವರೆಗೂ ರಾಜ್ಯದ 1.81 ಕೋಟಿ ಮಹಿಳೆಯರಿಗೆ  ಈ ಯೋಜನೆಯ ಲಾಭ ದೊರಕಿದೆ. ಅವರ ಖಾತೆಗೆ ತಲಾ ರೂ.10 ಸಾವಿರ ಜಮೆ ಮಾಡಲಾಗಿದೆ. ಇದಕ್ಕಾಗಿ ರೂ.2500 ಕೋಟಿ ವೆಚ್ಚಮಾಡಲಾಗಿದೆ. ಈ ಹಣವನ್ನು ಸದ್ಭಳಕೆ ಮಾಡಿಕೊಂಡ ಮಹಿಳಾ ಉದ್ಯಮಿಗಳಿಗೆ, ಅವರ ಉದ್ಯಮವನ್ನು ವಿಸ್ತರಿಸಲು ರೂ.2 ಲಕ್ಷ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.