ಐಪಿಎಲ್ ಅಂಗಳದಲ್ಲಿ ರನ್ ಮಳೆ ಸುರಿಸುವವರು ಹಲವರಿದ್ದಾರೆ. ಆದರೆ ಎದುರಾಳಿ ಬೌಲರ್‌ಗಳ ಆತ್ಮವಿಶ್ವಾಸವನ್ನೇ ಕುಗ್ಗಿಸುವವರು ಕೆಲವರು ಮಾತ್ರ ಇದ್ದಾರೆ. ಇಂಡಿಯನ್ ಪ್ರಿಮೀಯರ್ ಲೀಗ್‌ನ 19ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಎದುರಾಳಿ ತಂಡದ ಬೌಲರ್‌ಗಳಿಗೆ ನಡುಕ ಹುಟ್ಟಿಸುವಂತಹ ಬ್ಯಾಟಿಂಗ್ ವ್ಯವಸ್ಥೆ ಆರ್‌ಸಿಬಿಯಲ್ಲಿ ಇದ್ದು, ತನ್ನದೇ ಆದ ಸ್ಪೋಟಕ ಬ್ಯಾಟಿಂಗ್ ಮೂಲಕ ಬೌಲರ್‌ಗಳ ನಿದ್ದೆಗೆಡಿಸಿದ್ದು ಮತ್ಯಾರು ಅಲ್ಲ ಅದೇ ರಜತ್ ಪಟಿದಾರ್. ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ಖ್ಯಾತ ವಿಶ್ಲೇಷಕ ಇರ್ಫಾನ್ ಪಠಾಣ್, ರಜತ್ ಪಾಟಿದಾರ್ ಅವರ ವಿಸ್ಫೋಟಕ ಬ್ಯಾಟಿಂಗ್ಗೆ ಮಾರುಹೋಗಿದ್ದಾರೆ. ಅಲ್ಲದೆ ಅವರನ್ನು ಬೌಲರ್‌ಗಳ ಪಾಲಿನ “ಸಿಂಹಸ್ವಪ್ನ” ಎಂದು ಕರೆದಿದ್ದಾರೆ. ಕ್ರೀಸ್‌ಗೆ ಬಂದ ಮೊದಲ ಎಸೆತದಿಂದಲೇ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಿರುವ ಪಟಿದಾರ್. ಅವರ ಆಕ್ರಮಣಕಾರಿ ಆಟ ಆರ್‌ಸಿಬಿ ತಂಡದ ರನ್ ಗತಿಯನ್ನೇ ಬದಲಿಸುತ್ತಿದೆ,” ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.