2026-03-07 07:31:49

Rashmika and Vijay have not forgotten their fans | ಮದುವೆ ಮಧ್ಯೆಯೂ ರಶ್ಮಿಕಾ ವಿಜಯ್ ದಂಪತಿ ಅಭಿಮಾನಿಗಳನ್ನು ಮರೆತಿಲ್ಲ | Speed News Kannada

Rashmika and Vijay have not forgotten their fans | ಮದುವೆ ಮಧ್ಯೆಯೂ ರಶ್ಮಿಕಾ ವಿಜಯ್ ದಂಪತಿ ಅಭಿಮಾನಿಗಳನ್ನು ಮರೆತಿಲ್ಲ | Speed News Kannada

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿ 26ರಂದು ವಿವಾಹ ಆದರು. ಇವರು ಮದುವೆ ಆಗಿ ವಾರ ಕಳೆಯುತ್ತಾ ಬಂದರೂ ಅವರ ಸಂಭ್ರಮ ನಿಂತಿಲ್ಲ. ವಿಜಯ್ ಹಾಗೂ ರಶ್ಮಿಕಾ ವಿವಿಧ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಸಾಮಾಜಿಕ ಕೆಲಸ ಆಗುತ್ತಿದೆ. ಈ ಬ್ಯುಸಿ ವೇಳಾಪಟ್ಟಿಯಲ್ಲೂ ಅವರು ಅಭಿಮಾನಿಗಳನ್ನು ಮರೆತಿಲ್ಲ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಉದಯಪುರದಲ್ಲಿ ವಿವಾಹ ಆದರು. ಆ ಬಳಿಕ ತಿರುಪತಿಗೆ ಭೇಟಿ ಕೊಟ್ಟರು. ಇಷ್ಟೇ ಅಲ್ಲ, ವಿಜಯ್ ಹುಟ್ಟೂರಿಗೆ ತೆರಳಿ ಸತ್ಯ ನಾರಾಯಣ ಪೂಜೆಯಲ್ಲಿ ಭಾಗಿ ಆದರು. ಇಂದು (ಮಾರ್ಚ್ 4) ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ಅದಕ್ಕೂ ಮೊದಲು ಅಭಿಮಾನಿಗಳನ್ನು ರಶ್ಮಿಕಾ-ವಿಜಯ್ ಭೇಟಿ ಮಾಡಿದರು. ಮದುವೆಯಲ್ಲಿ ಕೇವಲ ಆಪ್ತರು ಮಾತ್ರ ಭಾಗಿ ಆಗಿದ್ದರು. ಹೀಗಾಗಿ, ಮದುವೆ ಬಳಿಕ ಅವರು ಅಭಿಮಾನಿಗಳನ್ನು ಭೇಟಿ ಆಗಿದ್ದಾರೆ. ಮಂಗಳವಾರ ಹೈದರಾಬಾದ್‌ನಲ್ಲಿ ಫ್ಯಾನ್ಸ್ ಮೀಟಪ್ ನಡೆದಿದೆ. ಅಭಿಮಾನಿಗಳ ಜೊತೆ ವಿಜಯ್ ಹಾಗೂ ರಶ್ಮಿಕಾ ಮಾತನಾಡಿದರು. ರಶ್ಮಿಕಾ ಫ್ಯಾನ್ ಪೇಜ್ ಅವರನ್ನು ಕರೆಯಲಾಗಿತ್ತು ಎನ್ನಲಾಗಿದೆ. ಬಂದ ಪ್ರತಿಯೊಬ್ಬರಿಗೂ ರಶ್ಮಿಕಾ ಹಾಗೂ ವಿಜಯ್ ಶೇಕ್ ಹ್ಯಾಂಡ್ ಮಾಡಿದರು. ಅಭಿಮಾನಿಗೆ ಪ್ರೀತಿಯಿಂದ ಅಪ್ಪುಗೆಯನ್ನೂ ನೀಡಿದರು. ಕೆಲವರಿಗೆ ಆಟೋಗ್ರಾಫ್ ನೀಡಿದರು.
ವಿಶೇಷ ಎಂದರೆ ರಶ್ಮಿಕಾ ಹಾಗೂ ವಿಜಯ್ ಖುದ್ದಾಗಿ ಅಭಿಮಾನಿಗಳಿಗೆ ಆಹಾರ ಬಡಿಸಿದ್ದಾರೆ. ರಶ್ಮಿಕಾ ಅವರು ಮಂಗಳಸೂತ್ರ ಹಾಗೂ ಸಿಂಧೂರ ಧರಿಸಿ ಗಮನ ಸೆಳೆದರು. ರಶ್ಮಿಕಾ ಅವರು ಕುರ್ತಾ ಧರಿಸಿದ್ದರು. ರಶ್ಮಿಕಾ ಅವರು ಅಭಿಮಾನಿಗಳಿಗೆ ಇಷ್ಟು ಪ್ರೀತಿ ತೋರಿಸಿದ್ದು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಅಭಿಮಾನಿಗಳನ್ನು ಮರೆತಿಲ್ಲ ಎಂಬ ವಿಷಯವೇ ಸೋಶಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗುತ್ತಿದೆ. ರಶ್ಮಿಕಾ ಹಾಗೂ ವಿಜಯ್ ಇಬ್ಬರೂ ಸದ್ಯ ಒಂದು ಬ್ರೇಕ್ ನಲ್ಲಿದ್ದಾರೆ. ಅವರು ಶೀಘ್ರವೇ ಸಿನಿಮಾ ಕೆಲಸಗಳಿಗೆ ಮರಳಲಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.