2026-03-07 02:07:41

Rana Daggubati | ಸಾವಿನ ಕದ ತಟ್ಟಿ ಮರಳಿ ಬಂದ ರಾಣಾ ದಗ್ಗುಬಾಟಿ ಆಗಿದ್ದೇನು | Speed News Kannada

Rana Daggubati | ಸಾವಿನ ಕದ ತಟ್ಟಿ ಮರಳಿ ಬಂದ ರಾಣಾ ದಗ್ಗುಬಾಟಿ ಆಗಿದ್ದೇನು | Speed News Kannada

ಬಾಹುಬಲಿ ಸಿನಿಮಾದ ವಿಲನ್ ಬಲ್ಲಾಳದೇವ ಯಾರಿಗೆ ನೆನಪಿಲ್ಲ. ಪಾತ್ರದಲ್ಲಿ ನಟಿಸಿದ್ದ ರಾಣಾ ದಗ್ಗುಬಾಟಿ, ಆ ಪಾತ್ರಕ್ಕಾಗಿ ಭಾರಿ ರಿಸ್ಕ್ ತೆಗೆದುಕೊಂಡಿದ್ದರು. ಪ್ರಭಾಸ್‌ಗಿಂತಲೂ ಹುರಿಗಟ್ಟಿದ ದೇಹವನ್ನು 'ಬಾಹುಬಲಿ' ಸಿನಿಮಾಕ್ಕಾಗಿ ತಯಾರು ಮಾಡಿಕೊಂಡಿದ್ದರು ರಾಣಾ ದಗ್ಗುಬಾಟಿ. 'ಬಾಹುಬಲಿ' ಬಳಿಕ ಹಲವು ಮಾಸ್ ಸಿನಿಮಾ ಆಫರ್‌ಗಳು ರಾಣಾ ದಗ್ಗುಬಾಟಿಗೆ ಬಂದಿದ್ದವು. ಆದರೆ ರಾಣಾ ಯಾವ ಸಿನಿಮಾನಲ್ಲಿಯೂ ನಟಿಸಲಿಲ್ಲ, ಬದಲಿಗೆ ತೆಗೆದುಕೊಂಡಿದ್ದ ಅಡ್ವಾನ್ಸ್ ಹಣವನ್ನು ಸಹ ವಾಪಸ್ ಮಾಡಿಬಿಟ್ಟರು. ಅದೇಕೆ ಎಂಬುದನ್ನು ಇದೀಗ ಅವರು ಬಾಯ್ದಿಟ್ಟಿದ್ದಾರೆ.ರಾಣಾ ದಗ್‌ಗುಬಾಟಿ ಅವರಿಗೆ 'ಬಾಹುಬಲಿ' ಸಿನಿಮಾದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಅವರು ನಟಿ ರೆಹಾ ಚಕ್ರವರ್ತಿ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯಗಳಿಂದ ಅವರು ಬಳಲಿದರು. ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದ ರಾಣಾ ದಗ್ಗುಬಾಟಿ, ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣ ಸಣ್ಣಗಾಗಿ ಬಿಟ್ಟಿದ್ದರು. ಅವರೇ ಹೇಳಿರುವಂತೆ ಹೋಗುವಾಗ ಹೇಗಿದ್ದರೊ ಅದರ ಅರ್ಧದಷ್ಟಾಗಿಬಿಟ್ಟಿದ್ದರಂತೆ.
'ಬಾಹುಬಲಿ' ಬಳಿಕ ಕೆಲವಾರು ಸಿನಿಮಾಗಳನ್ನು ರಾಣಾ ದಗ್ಗುಬಾಟಿ ಒಪ್ಪಿಕೊಂಡಿದ್ದರಂತೆ. ಬಾಕ್ಸರ್ ಒಬ್ಬನ ಬಗೆಗಿನ ಸಿನಿಮಾ ಇನ್ನೂ ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದರಂತೆ. ಆದರೆ ನಾನು ಆ ಹಾಟ್ ಬಾಡಿ ಹೊಂದಿರುವ ನಟ ಅಲ್ಲ ಎಂದು ಎಲ್ಲ ಅಡ್ವಾನ್ಸ್ ಅನ್ನು ಮರಳಿಸಿಬಿಟ್ಟರಂತೆ. ಒಮ್ಮೆ ಅವರು ಅಮೆರಿಕದಲ್ಲಿದ್ದಾಗ ಅವರ ಗೆಳೆಯ ನಟ ವರುಣ್ ತೇಜ್ ಬಂದಿದ್ದರಂತೆ. ಅವರನ್ನು ನೋಡಿ ರಾಣಾ ದಗ್ಗುಬಾಟಿಗೆ ಅವರ ಹಳೆಯ ದಿನಗಳು ನೆನಪಾದವಂತೆ.
ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ, ವಿಶ್ರಾಂತಿಗಳನ್ನು ಮುಗಿಸಿ ಮರಳುವಾಗ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೊಬ್ಬ ಬಲ್ಲಾಳದೇವ ಎಂದ ಕರೆದಾಗ ರಾಣಾಗೆ ಬಹಳ ಮುಜುಗರವಾಯ್ತಂತೆ. ಏಕೆಂದರೆ ಅವರು ಸಂಪೂರ್ಣವಾಗಿ ಇಳಿದು ಹೋಗಿದ್ದರು. ಪಾಡ್‌ ಕಾಸ್ಟ್‌ನಲ್ಲಿ ರಾಣಾ ಹೇಳಿಕೊಂಡಿರುವಂತೆ ಈಗ ಅವರ ಮುಖ್ಯ ಗೋಲ್ ಇರುವುದು ಬದುಕುವುದಕ್ಕೆ ಮಾತ್ರವೇ ಅಂತೆ. ಯಾವ ಬಾಡಿ ಬಿಲ್ಡಿಂಗ್ ಇನ್ನಿತರೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ರಾಣಾ ಹೇಳಿದ್ದಾರೆ.
ರಾಣಾ ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರಾದರೂ ಮಾಸ್ ರೀತಿಯ ಪಾತ್ರಗಳು, ಬಾಡಿ ಬಿಲ್ಡಿಂಗ್ ಅವಶ್ಯಕತೆ ಇರುವ ಪಾತ್ರಗಳಲ್ಲಿ ನಟಿಸುತ್ತಿಲ್ಲ. ಸಿನಿಮಾ ನಟನೆಗಿಂತಲೂ ಸಿನಿಮಾ ನಿರ್ಮಾಣದಲ್ಲಿ ದಗ್ಗುಬಾಟಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.